ಅಭಿ-ಅವಿವಾ 'ಸಂಗೀತ್'ಗೆ ದಿಗ್ಗಜರ ಹಾಜರಿ: ರಮ್ಯಾ ಕೃಷ್ಣ, ಜಯಪ್ರದಾ ಅಟ್ರಾಕ್ಷನ್.. ಇಲ್ಲಿದೆ ಗೆಸ್ಟ್ ಲಿಸ್ಟ್
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾಗಿದೆ. ಜೂನ್ 5ರಂದೇ ಹೊಸ ಜೀವನ ಆರಂಭ ಆಗಿದೆ. ಆದರೆ, ಸಂಭ್ರಮ ಮಾತ್ರ ಇನ್ನೂ ಮುಗಿದಿಲ್ಲ. ನಿನ್ನೆಯಷ್ಟೇ (ಜೂನ್ 11) ಈ ಜೋಡಿ ಆತ್ಮೀಯರಿಗೆ ಹಾಗೂ ಸ್ನೇಹಿತರಿಗೆ 'ಸಂಗೀತ್' ಕಾರ್ಯಕ್ರಮವನ್ನು ಆಯೋಜಿಸಿತ್ತು.
ಖಾಸಗಿ ಹೊಟೇಲ್‌ನಲ್ಲಿ ಸುಮಲತಾ ಅಂಬರೀಶ್ ಈ ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅಲ್ಲದೆ ಬೇರೆ ಬೇರೆ ಕ್ಷೇತ್ರದಲ್ಲಿರೋ ತಮ್ಮ ಆತ್ಮೀಯರಿಗೆ ಆಹ್ವಾನವನ್ನೂ ನೀಡಿದ್ದರು. ಯಶ್, ದರ್ಶನ್ ಸೇರಿದಂತೆ ಚಿತ್ರರಂಗದ ಗಣ್ಯರು ಈ ಸಂಗೀತ್ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಆರತಕ್ಷತೆಗೆ ಬರಲು ಸಾಧ್ಯವಾಗದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಂಗೀತ್ ಕಾರ್ಯಕ್ರಮದಲ್ಲಿ ಬಂದವರು ಯಾರು? ಈ ಕಾರ್ಯಕ್ರಮದ ಹೈಲೈಟ್ ಏನು? ಇಲ್ಲಿದೆ ಡಿಟೈಲ್ಸ್.
ರಮ್ಯಾಕೃಷ್ಣ-ಮಾಲಾಶ್ರೀ
ಸುಮಲತಾ ಬಹುಭಾಷಾ ನಟಿ. ಅವರಿಗೆ ದಕ್ಷಿಣ ಭಾರತದಲ್ಲಿ ಸ್ನೇಹಿತೆಯರ ಬಳಗವೇ ಇದೆ. ಹೀಗಾಗಿ ಮದುವೆಗೆ, ಆರತಕ್ಷತೆಗೆ ಬರಲಾರದವರು ಸಂಗೀತ್ ಕಾರ್ಯಕ್ರಮಕ್ಕೆ ಬಂದಿದ್ದರು. 'ಬಾಹುಬಲಿ' ಶಿವಗಾಮಿ ಖ್ಯಾತಿಯ ರಮ್ಯಾಕೃಷ್ಣ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.
ಅಭಿಷೇಕ್ ಅಂಬರೀಶ್-ಅವಿವಾ ಸಂಗೀತ್ ಕಾರ್ಯಕ್ರಮದಲ್ಲಿ ಬಹುಭಾಷಾ ನಟಿ ರಮ್ಯಾ ಕೃಷ್ಣ ಜೊತೆಗೆ ಮಾಲಾಶ್ರೀ ಭಾಗವಹಿಸಿದ್ದರು. ಈ ವೇಳೆ ಸುಮಲತಾ ಜೊತೆ ರಮ್ಯಾ ಕೃಷ್ಣ, ಮಾಲಾಶ್ರೀ ಮೂವರು ಸೇರಿ ಹೆಜ್ಜೆ ಹಾಕಿದರು.

ಜಯಪ್ರದಾ ಕಾಲು ನಮಸ್ಕರಿಸಿದ ದರ್ಶನ್
ಸುಮಲತಾಗೆ ಮತ್ತೊಬ್ಬ ಆತ್ಮೀಯ ಗೆಳತಿ ಜಯಪ್ರದಾ. ಅಭಿ-ಅವಿವಾ ವಿವಾಹಕ್ಕೆ ಜಯಪ್ರದಾ ಬರಲು ಸಾಧ್ಯವಾಗಿರಲಿಲ್ಲ. ಆರತಕ್ಷತೆಯಲ್ಲೂ ಜಯಪ್ರದಾ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಸಂಗೀತ್ ಕಾರ್ಯಕ್ರಮಕ್ಕೆ ಆಗಮಿಸಿ, ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಸಂಗೊಳ್ಳಿರಾಯಣ್ಣ' ಸಿನಿಮಾದಲ್ಲಿ ಜಯಪ್ರದಾ ನಟಿಸಿದ್ದರು. ಹೀಗಾಗಿ ಅವರನ್ನು ಕಂಡ ಕೂಡಲೇ ದರ್ಶನ್ ಅವರಿಗೆ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಅವರೊಂದಿಗೆ ಫೋಟೊಗೂ ಪೋಸ್ ಕೊಟ್ಟಿದ್ದಾರೆ. ಇದೇ ವಿಡಿಯೋ ಈಗ ವೈರಲ್ ಆಗಿದೆ.
ಅತಿಥಿಗಳು ಯಾರು?
ತೆಲುಗು ಚಿತ್ರರಂಗದಿಂದ ಮೋಹನ್ ಬಾಬು ಪುತ್ರ ಮಂಜು ಮನೋಜ್ ಆಗಮಿಸಿದ್ದರು. ಸಂಗೀತ ನಿರ್ದೇಶಕ ಗುರುಕಿರಣ್, ರಾಕ್‌ಲೈನ್ ವೆಂಕಟೇಶ್,ಪ್ರಣವ್ ದೇವರಾಜ್ ಸೇರಿದಂತೆ ಗಣ್ಯಾತೀಗಣ್ಯರು ಸಂಗೀತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಖಾಸಗಿ ಹೊಟೇಲ್‌ನಲ್ಲಿ ಈ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಯಶ್ ಹಾಗೂ ದರ್ಶನ್ ಇಬ್ಬರೂ ಕಾರ್ಯಕ್ರಮದ ಹೈಲೈಟ್ ಆಗಿದ್ದರು. ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪಗೆ ಸೆಲೆಬ್ರೆಟಿಗಳು ಶುಭ ಹಾರೈಸಿ, ಅಂಬರೀಶ್ ಕುಟುಂಬಕ್ಕೆ ಸ್ವಾಗತ ಕೋರಿದ್ದಾರೆ.


Click it and Unblock the Notifications











