Bad Manners:'ಬ್ಯಾಡ್ ಮ್ಯಾನರ್ಸ್' ಇಂಟ್ರುಡಕ್ಷನ್ ಸಾಂಗ್ ಝಲಕ್ ನೋಡಿದ್ದೀರಾ? ಎಕ್ಸ್‌ಕ್ಲ್ಯೂಸಿವ್ ಸ್ಟಿಲ್ಸ್ ಇಲ್ಲಿದೆ
ರೆಬೆಲ್‌ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ಭರ್ಜರಿಯಾಗಿ ಸ್ಟೆಪ್ ಹಾಕ್ತಾರೆ ಅಂದ್ರೆ, ಕೆಲವರಿಗೆ ಅನುಮಾನ. ಕನ್ನಡ ಕೆಲ ಸೂಪರ್‌ಸ್ಟಾರ್‌ಗಳಂತೆ ಅಭಿಷೇಕ್‌ಗೂ ಡ್ಯಾನ್ಸ್ ಅಂದರೆ, ಅಷ್ಟಕ್ಕಷ್ಟೆ. ಆದರೆ, ಅಭಿಷೇಕ್ ಇದನ್ನೇ ಸಾವಾಲಾಗಿ ತೆಗೆದುಕೊಂಡು ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ಆ ಹಾಡಿನ ಎಕ್ಸ್‌ಕ್ಲ್ಯೂಸಿವ್ ಫೋಟೊಗಳು ಇಲ್ಲಿದೆ.
ಅಂಬಿ ಪುತ್ರ ಅಭಿಷೇಕ್ ಅಂಬರೀಶ್ ಎರಡನೇ ಕನ್ನಡ ಸಿನಿಮಾ 'ಬ್ಯಾಡ್ ಮ್ಯಾನರ್ಸ್' ಶೂಟಿಂಗ್ ಫಿನಿಶ್ ಆಗಿದೆ. ದುನಿಯಾ ಸೂರಿ ಆಕ್ಷನ್ ಕಟ್ ಹೇಳಿರುವ ಈ ಸಿನಿಮಾವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎರಡೂವರೆ ವರ್ಷಗಳಿಂದ ಸಮಯ ತೆಗೆದುಕೊಂಡು ದುನಿಯಾ ಸೂರಿ ಈ ಸಿನಿಮಾ ಮುಗಿಸಿದ್ದಾರೆ. ಸುಕ್ಕಾ ಸೂರಿ ಸಿನಿಮಾಗಳು ರಗಡ್ ಆಗಿರುತ್ತವೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಹಾಗೇ 'ಬ್ಯಾನ್ ಮ್ಯಾನರ್ಸ್' ಕೂಡ ಅಷ್ಟೇ ರಗಡ್ ಆಗಿರುತ್ತೆ ಅನ್ನೋ ನಂಬಿಕೆಯಲ್ಲಿದ್ದಾರೆ.

ಇದಕ್ಕೆ ಟ್ವಿಸ್ಟ್ ಕೊಡೋಕೆ ಅಂತಲೇ ದುನಿಯಾ ಸೂರಿ ಒಂದು ಇಂಟ್ರುಡಕ್ಷನ್ ಸಾಂಗ್ ಇಟ್ಟಿದ್ದಾರೆ. ಇದು ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್‌ಗೆ ಇಂಟ್ರುಡಕ್ಷನ್ ಸಾಂಗ್. ಈಗಾಗಲೇ ಈ ಹಾಡಿನ ಬಗ್ಗೆ ಫಿಲ್ಮ್‌ಬೀಟ್ ಎಕ್ಸ್‌ಕ್ಲ್ಯೂಸಿವ್ ಮಾಹಿತಿಯನ್ನು ನೀಡಿತ್ತು. ಅದರಂತೆ, ಈಗ ದುನಿಯಾ ಸೂರಿ ಆ ಹಾಡಿನ ಫೋಟೊಗಳನ್ನು ರಿವೀಲ್ ಮಾಡಿದ್ದಾರೆ.
'ಬ್ಯಾಡ್ ಮ್ಯಾನರ್ಸ್' ಇಂಟ್ರುಡಕ್ಷನ್ ಶುರು
ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಲುಕ್ ನೋಡಿದ್ರೆ, ಸಿನಿಪ್ರಿಯರು ಕಳೆದೇ ಹೋಗುತ್ತಾರೆ. ಮಾಸ್‌ಗೆ ಮಾಸ್. ಕ್ಲಾಸ್‌ಗೆ ಕ್ಲಾಸ್. ಎರಡನ್ನೂ ಅವತಾರವನ್ನು ಒಟ್ಟಿಗೆ ಸೇರಿ ಒಂದು ಸಾಂಗ್ ಮಾಡಿದರೆ, ಹೇಗಿರುತ್ತೋ ಹಾಗೇ ಈ ಸಾಂಗ್ ಇದೆ. ರೆಡ್ ಥೀಮ್‌ನಲ್ಲಿ, ಸ್ಮೋಕಿ ಎಫೆಕ್ಟ್‌ನಲ್ಲಿ, ಲಕ ಲಕ ಅಂತ ಹೊಳೆಯುವ ಸೆಟ್‌ನಲ್ಲಿ ಇಂಟ್ರುಡಕ್ಷನ್ ಸಾಂಗ್ ಸೆಟ್ಟೇರಿತ್ತು.

ಸುಕ್ಕಾ ಸೂರಿ ಹೀರೊ 'ಬ್ಯಾಡ್ ಮ್ಯಾನರ್ಸ್'ಗಾಗಿ ಒಂದು ಇಂಟ್ರುಡಕ್ಷನ್ ಸಾಂಗ್ ಪ್ಲ್ಯಾನ್ ಮಾಡಿದ್ದರು. ಆ ಹಾಡಿನ ಝಲಕ್ ಹೇಗಿದೆ ನೋಡಿ. ಕೆಂಪು ಹಾಗೂ ಕಪ್ಪು ಬಣ್ಣದ ಸೂಟ್ ಧರಿಸಿ, ಕೈಯಲ್ಲಿ ಗನ್ ಹಿಡಿದು ಕ್ಯಾಮರಾ ಮುಂದೆ ನಿಂತಿರೋ ಅಭಿಷೇಕ್ ಲುಕ್‌ಗೆ ರೆಬೆಲ್ ಸ್ಟಾರ್ ಅಭಿಮಾನಿಗಳು ಫಿದಾ ಆಗೋದು ಗ್ಯಾರಂಟಿ.
ಈ ಹಾಡಿಗೆ ಖರ್ಚಾಗಿದ್ದು ಬರೋಬ್ಬರಿ 1 ಕೋಟಿ ರೂ.
ದುನಿಯಾ ಸೂರಿ ನಿರ್ಮಾಪಕರಿಗೆ ಹೆಚ್ಚು ಖರ್ಚು ಮಾಡಿಸೋದಿಲ್ಲ. ನಿರ್ಮಾಪಕರ ಫೇವರಿಟ್ ಅನ್ನೋದು ಎಲ್ಲಾರಿಗೂ ಗೊತ್ತಿದೆ. ಆದರೆ, ಅಗತ್ಯ ಬಿದ್ದರೆ, ಅದೆಷ್ಟೇ ಖರ್ಚಾದರೂ ಬಿಡೋದಿಲ್ಲ. 'ಬ್ಯಾಡ್ ಮ್ಯಾನರ್ಸ್'ಗೂ ಅದೇ ಆಗಿದ್ದು, ಯಂಗ್ ರೆಬೆಲ್‌ಸ್ಟಾರ್ ಇಂಟ್ರುಡಕ್ಷನ್ ನಾಲ್ಕೈದು ಸೆಟ್ಟಲ್ಲಿ ಮಾಡಿಸಬೇಕು ಅಂದ್ಕೊಂಡಿದ್ದರು. ಅದರಂತ ಅದ್ಧೂರಿ ಸೆಟ್ ಹಾಕಿ ಈ ಸಾಂಗ್ ಅನ್ನು ಶೂಟ್ ಮಾಡಲಾಗಿದೆ.

ಈ ಇಂಟ್ರುಡಕ್ಷನ್ ಸಾಂಗ್‌ಗೆ ಬರೋಬ್ಬರಿ ಒಂದು ಕೋಟಿ ರೂ. ಖರ್ಚಾಗಿದೆ. ಮೂರು ದುಬಾರಿ ಸೆಟ್‌ಗಳನ್ನು ಎರಡೆರಡು ಸ್ಟುಡಿಯೋಗಳಲ್ಲಿ ಹಾಕಿ ಸಾಂಗ್ ಶೂಟ್ ಮಾಡಲಾಗಿದೆ. ಮೂರು, ನಾಲ್ಕು ದಿನಗಳಲ್ಲಿ ಈ ಸಾಂಗ್ ಮುಗಿಸಿಲ್ಲ. ಸುಮಾರು ಆರು ದಿನಗಳ ಕಾಲ ಅಭಿಷೇಕ್ ಅಂಬರೀಶ್ ಇಂಟ್ರುಡಕ್ಷನ್ ಸಾಂಗ್ ಅನ್ನು ಶೂಟ್ ಮಾಡಲಾಗಿದೆ.
ಈ ಹಾಡಿಗಾಗಿ ಒಂದು ತಿಂಗಳು ಅಭ್ಯಾಸ
ಅಭಿಷೇಕ್ ಅಂಬರೀಶ್ ಇಂಟ್ರುಡಕ್ಷನ್ ಸಾಂಗ್ ಅಂದ್ಮೇಲೆ ಹೆಜ್ಜೆ ಹಾಕಲೇಬೇಕು. ಅದರಲ್ಲೂ ಸೆಟ್ಟಲ್ಲಿ ಕ್ಲಾಸಿ ಮಾಸ್ ಸಾಂಗ್ ಅಂದ್ಮೇಲೆ ಸ್ಟೆಪ್ಸ್ ಇರಲೇಬೇಕು. ಹೀಗಾಗಿ ಅಭಿಷೇಕ್ ಅಂಬರೀಶ್‌ಗೆ ಸುಮಾರು ಒಂದು ತಿಂಗಳ ಕಾಲ ಡ್ಯಾನ್ಸ್ ಪ್ರಾಕ್ಟಿಸ್ ಮಾಡಿಸಲಾಗಿತ್ತು. ಕೊರಿಯೋಗ್ರಾಫರ್ ಧನು 'ಬ್ಯಾಡ್ ಮ್ಯಾನರ್ಸ್' ಇಂಟ್ರುಡಕ್ಷನ್ ಸಾಂಗ್‌ಗೆ ಆಕ್ಷನ್ ಕಟ್ ಹೇಳಿದ್ದು, ಯಂಗ್ ರೆಬೆಲ್ ಸ್ಟಾರ್ ಮಸ್ತ್ ಸ್ಟೆಪ್ಟ್ ಹಾಕಿ ಅಭಿಮಾನಿಗಳನ್ನು ರಂಜಿಸಿದ್ದಾರೆ.
'ಬ್ಯಾಡ್ ಮ್ಯಾನರ್ಸ್' ಸಿನಿಮಾವನ್ನು 160ಕ್ ಅಧಿಕ ದಿನ ಶೂಟಿಂಗ್ ಮಾಡಲಾಗಿದೆ. ಅಭಿಷೇಕ್ ಎರಡನೇ ಸಿನಿಮಾಗೆ ದುಬಾರಿ ಮೊತ್ತದ ಹಣ ಖರ್ಚು ಮಾಡಿ ಶೂಟ್ ಮಾಡಲಾಗಿದೆ. ಅಂದ್ಹಾಗೆ ಚರಣ್ ರಾಜ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್ ಅಂಬರೀಶ್ ರುಧ್ರ ಅನ್ನೋ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಮೂಲಗಳ ಪ್ರಕಾರ, ಅಂಬರೀಶ್ ಹುಟ್ಟುಹಬ್ಬಕ್ಕೆ, ಏಪ್ರಿಲ್ 29ರಂದು ಬ್ಯಾಡ್ ಮ್ಯಾನರ್ಸ್ ರಿಲೀಸ್ ಮಾಡುವ ಆಲೋಚನೆಯನ್ನು ದುನಿಯಾ ವಿಜಯ್ ಮಾಡುತ್ತಿದ್ದಾರೆ.


Click it and Unblock the Notifications











