ಅಮ್ಮನ ಹುಟ್ಟುಹಬ್ಬಕ್ಕೆ ಅಭಿಷೇಕ್ 4ನೇ ಸಿನಿಮಾ ಲಾಂಚ್: ಅಂಬಿ ಪುತ್ರ ಫುಲ್ ರೆಬೆಲ್!

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಒಂದೊಂದೇ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ. ಮೊದಲ ಸಿನಿಮಾ ಅಮರ್ ಬಳಿಕ ಅಭಿಷೇಕ್ ಎರಡನೇ ಸಿನಿಮಾ ಇನ್ನೂ ಬಿಡುಗಡೆಯಾಗಿಲ್ಲ. ಆಗಲೇ ಆಫರ್‌ಗಳು ಅಭಿಯನ್ನು ಹುಡುಕಿಕೊಂಡು ಬರುತ್ತಿವೆ.

ಸದ್ಯ ದುನಿಯಾ ಸೂರಿ ನಿರ್ದೇಶನದಲ್ಲಿ 'ಬ್ಯಾಡ್ ಮ್ಯಾನರ್ಸ್' ನಿರ್ಮಾಣ ಆಗುತ್ತಿದೆ. ಈಗಾಗಲೇ ಬಹುತೇಕ ಸಿನಿಮಾ ಶೂಟಿಂಗ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ. ಸೂರಿ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷನ್‌ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈ ಮಧ್ಯೆ ಯಂಗ್ ರೆಬೆಲ್‌ ಎರಡು ಸಿನಿಮಾಗಳು ಕಾಂಪಿಟೇಷನ್‌ನಲ್ಲಿ ಸೆಟ್ಟೇರುತ್ತಿದೆ.

ಶ್ರೀಮುರಳಿಗಾಗಿ 'ಮದಗಜ' ನಿರ್ದೇಶನ ಮಾಡಿದ್ದ ಮಹೇಶ್ ಕುಮಾರ್ ಮೂರನೇ ಸಿನಿಮಾಗೆ ರೆಡಿಯಾಗಿದ್ದಾರೆ. ರೆಬೆಲ್ ಸ್ಟಾರ್ ಪುತ್ರನ ನಾಲ್ಕನೇ ಸಿನಿಮಾಗೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಲಿದ್ದು, ಸಿನಿಮಾ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ಸುಮಲತಾ ಬರ್ತ್‌ಡೇಗೆ ಅಭಿ ಹೊಸ ಸಿನಿಮಾ

ಸುಮಲತಾ ಬರ್ತ್‌ಡೇಗೆ ಅಭಿ ಹೊಸ ಸಿನಿಮಾ

ಸ್ಯಾಂಡಲ್‌ವುಡ್‌ನಲ್ಲಿ ಕೆಲವು ದಿನಗಳಿಂದ ಮಹೇಶ್ ಕುಮಾರ್ ಹಾಗೂ ಅಭಿಷೇಕ್ ಅಂಬರೀಶ್ ಕಾಂಬಿನೇಷ್‌ ಸಿನಿಮಾ ಬಗ್ಗೆ ಟಾಕ್ ಎದ್ದಿತ್ತು. ಅದರಂತೆಯೇ ಕನ್ನಡದ ಯಂಗ್ ರೆಬಲ್ ಸ್ಟಾರ್ ನಾಲ್ಕನೇ ಸಿನಿಮಾ ಸೆಟ್ಟೇರುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಆಗಸ್ಟ್ 27 ರಂದು ಸುಮಲತಾ 59ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆ ದಿನದಂದು ಅಂಬಿ ಪುಣ್ಯಭೂಮಿಯಲ್ಲಿ ಅಭಿಷೇಕ್ ಅಂಬರೀಶ್ ನಾಲ್ಕನೇ ಸಿನಿಮಾದ ಫಸ್ಟ್ ಲುಕ್ ಹಾಗೂ ನಿರ್ಮಾಪಕರು ಯಾರು ಅನ್ನೋದನ್ನು ಚಿತ್ರತಂಡ ರಿವೀಲ್ ಮಾಡಲಿದೆ.

ವಾರಿಯರ್ ಅವತಾರದಲ್ಲಿ ಅಭಿಷೇಕ್

ವಾರಿಯರ್ ಅವತಾರದಲ್ಲಿ ಅಭಿಷೇಕ್

ಅಭಿಷೇಕ್ ಅಂಬರೀಶ್ ಹಿಂದಿನ ಸಿನಿಮಾಗಳಿಗಿಂತ ಇದು ವಿಭಿನ್ನ ಎನ್ನಲಾಗಿದೆ. ಸ್ಯಾಂಡಲ್‌ವುಡ್‌ನ ಯಂಗ್ ರೆಬೆಲ್‌ಸ್ಟಾರ್ ಸಿಕ್ಕಾಪಟ್ಟೆ ಖಡಕ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಫಸ್ಟ್ ಲುಕ್ ನೋಡಿದವರು ಇದೊಂದು ಐತಿಹಾಸಿಕ ಸಿನಿಮಾ ಫೀಲ್ ಕೊಡುತ್ತಿದ್ದು, ಅಭಿಷೇಕ್ ಅಂಬರೀಶ್ ವಾರಿಯರ್ ಲುಕ್ ಕೊಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಅಂದ್ಹಾಗೆ ಅಭಿಯ ನಾಲ್ಕನೇ ಸಿನಿಮಾವನ್ನು ಕನ್ನಡ ಟಾಪ್ ನಿರ್ಮಾಪಕರೊಬ್ಬರು ನಿರ್ಮಾಣ ಮಾಡುತ್ತಿದ್ದಾರೆ.

ಯಂಗ್ ರೆಬೆಲ್‌ಗೆ ದಿಗ್ಗಜರು ಸಾಥ್

ಯಂಗ್ ರೆಬೆಲ್‌ಗೆ ದಿಗ್ಗಜರು ಸಾಥ್

ಅಭಿಷೇಕ್ ಅಂಬರೀಶ್ ನಾಲ್ಕನೇ ಸಿನಿಮಾ ದೊಡ್ಡ ಮಟ್ಟದಲ್ಲಿ ಸೆಟ್ಟೇರಲಿದೆ. ಸದ್ಯಕ್ಕೆ ಸುಮಲತಾ ಹುಟ್ಟುಹಬ್ಬಕ್ಕೆ ಅಭಿ ಲುಕ್ ಹಾಗೂ ನಿರ್ಮಾಪಕರು ಯಾರು ಅನ್ನೋದನ್ನು ತಂಡ ರಿವೀಲ್ ಮಾಡುತ್ತಿದೆ. ಈ ಮಧ್ಯೆ ಅಭಿ ಸಿನಿಮಾಗೆ ದಕ್ಷಿಣ ಭಾರತದ ದಿಗ್ಗಜರು ಜೊತೆಯಾಗಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಅಭಿಷೇಕ್ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡರೆ, ದಿಗ್ಗಜರು ಸಿನಿಮಾದಲ್ಲಿ ಅಭಿಗೆ ಬೆಂಬಲವಾಗಿ ನಿಲ್ಲಲಿದ್ದಾರೆ. ಈ ಬಗ್ಗೆ ಪ್ರೊಡಕ್ಷನ್ ಹೌಸ್ ಶೀಘ್ರದಲ್ಲಿಯೇ ಅಧಿಕೃತ ಮಾಹಿತಿಯನ್ನು ಹೊರಹಾಕಲಿದೆ ಎನ್ನಲಾಗಿದೆ.

ಪ್ಯಾನ್ ಇಂಡಿಯಾ ಸಿನಿಮಾ

ಪ್ಯಾನ್ ಇಂಡಿಯಾ ಸಿನಿಮಾ

ಅಭಿಷೇಕ್ ಅಂಬರೀಶ್ ನಾಲ್ಕನೇ ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ 3ನೇ ಸಿನಿಮಾದ ಬಗ್ಗೆನೂ ಸುದ್ದಿ ಓಡಾಡುತ್ತಿದೆ. ಅಭಿಯ ಮೂರನೇ ಸಿನಿಮಾವನ್ನು 'ಪೈಲ್ವಾನ್' ಸಿನಿಮಾದ ನಿರ್ದೇಶಕ ಕೃಷ್ಣ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾ ಬಳಿಕ ನಾಲ್ಕನೇ ಸಿನಿಮಾ ಸೆಟ್ಟೇರಲಿದೆ ಅನ್ನೋದು ಇನ್‌ಸೈಡ್ ಸುದ್ದಿ. ಎಲ್ಲಕ್ಕಿಂತ ಹೆಚ್ಚಾಗಿ ಮಹೇಶ್ ಕುಮಾರ್ ನಿರ್ದೇಶಿಸುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಆಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದೆ.

More from Filmibeat

English summary
Abhishek Ambareesh Fourth Movie Will Be Launching On Sumalatha Ambareesh Birthday, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X