ದರ್ಶನ್‌ಗಾಗಿ ಅಪ್ಪನ ಸಿನಿಮಾ ರಿಮೇಕ್ ಮಾಡ್ತೀನಿ ಎಂದ ಅಭಿಷೇಕ್: ಯಾವುದಾ ಆ ಸಿನಿಮಾ? ದರ್ಶನ್ ಪ್ರತಿಕ್ರಿಯೆ ಏನು?

ಚಾಲೆಂಜಿಂಗ್‌ಸ್ಟಾರ್ ದರ್ಶನ್‌ಗೂ ಅಂಬಿ ಕುಟುಂಬಕ್ಕೂ ತೀರಾ ಹತ್ತಿರದ ನಂಟಿದೆ. ದರ್ಶನ್, ಅಂಬಿ ಕುಟುಂಬದ ಪ್ರಮುಖ ಭಾಗವೇ ಆಗಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್‌ರನ್ನು ತಂದೆಯ ಸ್ಥಾನದಲ್ಲಿ ಇಟ್ಟಿರೊ ದರ್ಶನ್ ಇಂದಿಗೂ ಅವರ ಕುಟುಂಬಕ್ಕೆ ಬೆಂಬಲವಾಗಿಯೇ ನಿಂತಿದ್ದಾರೆ.

ಇತ್ತ ಅಭಿಷೇಕ್ ಅಂಬರೀಶ್ ಕೂಡ ದರ್ಶನ್‌ರನ್ನು ತಮ್ಮ ಅಣ್ಣನಂತೆಯೇ ಭಾವಿಸಿದ್ದಾರೆ. ಹೀಗಾಗಿ 'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಪ್ರಚಾರದಲ್ಲಿ ಅಭಿಷೇಕ್ ಜೊತೆ ದರ್ಶನ್ ಕೂಡ ಪ್ರಚಾರಕ್ಕೆ ಇಳಿಸಿದ್ದಾರೆ. ತಮ್ಮಿಂದ ಅಭಿ ಸಿನಿಮಾಗೆ ಎಷ್ಟು ಪ್ರಚಾರ ಮಾಡುವುದಕ್ಕೆ ಸಾಧ್ಯನೋ ಅಷ್ಟು ಮಾಡುತ್ತಿದ್ದಾರೆ.

Abhishek Ambareesh has a desire to direct Darshan and it is a remake

ಇತ್ತೀಚೆಗೆ ಅಭಿಷೇಕ್ ಅಂಬರೀಶ್ ಹಾಗೂ ದರ್ಶನ್ ಇಬ್ಬರೂ 'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ದರ್ಶನ್‌ಗಾಗಿ ಸಿನಿಮಾವೊಂದನ್ನು ನಿರ್ದೇಶನ ಮಾಡುವ ಆಸೆಯಿದೆಯೆಂದು ಅಭಿಷೇಕ್ ಅಂಬರೀಶ್ ರಿವೀಲ್ ಮಾಡಿದ್ದಾರೆ. ಅದೂ ಅಂಬರೀಶ್ ನಟಿಸಿದ ಸಿನಿಮಾವನ್ನೇ ರಿಮೇಕ್ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಆ ಸಿನಿಮಾ ಯಾವುದು? ಅದಕ್ಕೆ ದರ್ಶನ್ ಏನಂದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ..

'ಬ್ಯಾಡ್ ಮ್ಯಾನರ್ಸ್' ಪ್ರಚಾರದಲ್ಲಿ ದರ್ಶನ್

ಅತಿಥಿ ಪಾತ್ರದಲ್ಲಿ ನಟಿಸಿರೋದು ಒಂದು ಕಡೆ. ಅದೇ ಯಾವುದಾದರೂ ಸಿನಿಮಾ ಹಿಂದೆ ದರ್ಶನ್ ನಿಂತಿದ್ದಾರೆ ಅಂದರೆ ಸಾಕು, ಆ ಸಿನಿಮಾ ತಂಡಕ್ಕೆ ಆನೆ ಬಲ ಬಂದಂತೆ. ಈಗ ಅಭಿಷೇಕ್ ಅಂಬರೀಶ್ ನಟಿಸಿರುವ 2ನೇ ಸಿನಿಮಾ 'ಬ್ಯಾಡ್ ಮ್ಯಾನರ್ಸ್‌ಗೂ ದರ್ಶನ್ ಬೆಂಬಲ ನೀಡಿದ್ದಾರೆ. ಈ ಸಂಬಂಧ ರಜಿನಿ ಎಕ್ಸ್‌ಪ್ರೆಸ್ ಯೂಟ್ಯೂಬ್ ಚಾನೆಲ್‌ಗೆ ಅಭಿಷೇಕ್ ಹಾಗೂ ದರ್ಶನ್ ಇಬ್ಬರೂ ಜಂಟಿಯಾಗಿ ಸಂದರ್ಶನ ನೀಡಿದ್ದಾರೆ. ಇದರಲ್ಲಿ ಹಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಅದರಲ್ಲಿ ಅಭಿಷೇಕ್ ನಟ ದರ್ಶನ್‌ಗೆ ನಿರ್ದೇಶನ ಮಾಡುವ ಬಗ್ಗೆ ಮಾತಾಡಿದ್ದಾರೆ.

ದರ್ಶನ್‌ಗೆ ಆಕ್ಷನ್ ಕಟ್ ಹೇಳುವ ಆಸೆ

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಆಕ್ಷನ್ ಕಟ್ ಹೇಳಬೇಕು ಅನ್ನೋದು ಹಲವು ಮಂದಿಯ ಆಸೆ. ಆ ಆಸೆ ಈಡೇರಿದ್ದು ಅಂತ ಕೆಲವರಿಗೆ ಮಾತ್ರ. ಅಭಿಷೇಕ್ ಅಂಬರೀಶ್‌ಗೂ ಅದೇ ಆಸೆಯಿದೆ. ಚಾಲೆಂಜಿಂಗ್‌ ಸ್ಟಾರ್‌ಗೆ ಒಂದು ಸಿನಿಮಾ ಮಾಡ್ಬೇಕು. ಅದು ಅಪ್ಪನ ಸಿನಿಮಾವನ್ನೇ ರಿಮೇಕ್ ಮಾಡುತ್ತೇನೆ ಎಂದು ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.

Abhishek Ambareesh has a desire to direct Darshan and it is a remake

ದರ್ಶನ್‌ಗಾಗಿ 'ಮೃಗಾಲಯ' ರಿಮೇಕ್

"ಸಿನಿಮಾ ನಿರ್ದೇಶನ ಮಾಡೋದಾದ್ರೆ ನನಗೊಂದು ಆಸೆ. ಹೊಸ ಸಬ್ಜೆಕ್ಟ್ ಎಲ್ಲಾ ತಯಾರಿ ಮಾಡುವಷ್ಟು ಕ್ರಿಯೇಟಿವಿಟಿ ಇಲ್ಲ ಮೊದಲೇ ಹೇಳ್ತೀನಿ. ಒಂದು ರಿಮೇಕ್ ಮಾಡ್ತೀನಿ. ಯಾವ ಸಿನಿಮಾ ಅಂದ್ರೆ, ನನಗೆ ಗೊತ್ತು ಅದು ಅವರ ಫೇವರಿಟ್ ಸಿನಿಮಾ. ಮಾಡೋದಾದ್ರೆ, ದರ್ಶನ್ ಒಬ್ಬರೇ ಮಾಡೋಕೆ ಆಗೋದು. ರಿಯಲ್ ಲೈಫ್‌ಗೂ ಈ ಕ್ಯಾರೆಕ್ಟರ್‌ಗೂ ತುಂಬಾನೇ ಮ್ಯಾಚ್ ಆಗುತ್ತೆ. ಅಂಬರೀಶ್ ಅಣ್ಣಂದು ಮೃಗಾಲಯ ರಿಮೇಕ್ ಮಾಡುತ್ತೇನೆ. ಝೂ ನೂ ಬೇಡ ತೋಟದಲ್ಲೇ ಶೂಟಿಂಗ್ ಮಾಡುತ್ತೇನೆ." ಎಂದು ಅಭಿಷೇಕ್ ಅಂಬರೀಶ್ ಸಂದರ್ಶನದಲ್ಲಿ ಹೇಳಿದ್ದಾರೆ.

ದರ್ಶನ್ ಪ್ರತಿಕ್ರಿಯೆ ಏನು?

"ಬೆಳಗ್ಗೆ ಆರಾಮಾಗಿ ಎದ್ದು ವರ್ಕ್‌ಔಟ್ ಮಾಡಿಕೊಂಡು 10 ಗಂಟೆಗೆ ಸೆಟ್ಟಿಗೆ ಹೋಗು. ಬ್ರೇಕ್ ಫಾಸ್ಟ್ ಮಾಡು. 11 ಗಂಟೆಗೆ ಶೂಟಿಂಗ್ ಶುರು ಮಾಡು. 1 ಗಂಟೆಗೆ ಬ್ರೇಕ್ ಕೊಡ್ತಾರೆ. ಮತ್ತೆ 3 ಗಂಟೆಗೆ ಕರೀತಾರೆ. 6 ಗಂಟೆಗೆ ಮುಗಿಸಿ ಮನೆಗೆ ಬಾ. ಅದೇ ಡೈರೆಕ್ಟರ್ ಆದರೆ, 6 ಗಂಟೆಗೆ ಎದ್ದು ಹೋಗಬೇಕು. ಅದಕ್ಕೆ ಡೈರೆಕ್ಷನ್ ಮಾಡ್ತೀನಿ ಅಂದರೆ, ನಾನೇ ಬಿಡೋದಿಲ್ಲ" ಅಂತ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.

More from Filmibeat

English summary
Abhishek Ambareesh has a desire to direct Darshan; it is a remake. Do you know which movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X