Out of Syllabus: 'ಔಟ್ ಆಫ್ ಸಿಲಬಸ್' ಪಾಠ ಮಾಡಲು ಬಂದು ಅಚ್ಯುತ್ ಕುಮಾರ್
ಶಾಲೆ-ಕಾಲೇಜಿಗೆ ಹೋದರೆ, ಅಲ್ಲಿರೋ ಸಿಲಬಸ್ ಕವರ್ ಮಾಡಿದ್ರೆ ವಿದ್ಯೆ ಸಿಗುತ್ತೆ. ಅದರಿಂದ ಕೆಲಸ ಸಿಗುತ್ತೆ. ಎಲ್ಲಾ ಓಕೆ. ಆದರೆ, ನಮ್ಮ ಬದುಕು ನೆಮ್ಮದಿಯಾಗಿ ಸಾಗಲು ಶಿಕ್ಷಣ ಒಂದೇ ಸಾಕೇ..? ಅನ್ನೋದ ಪ್ರಶ್ನೆಗೆ ಉತ್ತರ ಏನು ಅನ್ನೋದು ಈಗ ಬಹುತೇಕ ಗೊತ್ತಾಗಿದೆ.
ಶಿಕ್ಷಣ ಸಿಕ್ಕಿದ ಕೂಡಲೇ ವ್ಯಕ್ತಿಯ ಬದುಕು ನೆಮ್ಮದಿಯಾಗಿ ಸಾಗುವುದಿಲ್ಲ. ಜೀವನ ಅಂದರೆ ಏನು ಅಂತ ಅರ್ಥ ಮಾಡಿಕೊಳ್ಳುವುದಕ್ಕೆ ಶಾಲಾ ಕಾಲೇಜುಗಳಲ್ಲೂ ಸಿಗದ ಶಿಕ್ಷಣ ಬೇಕು. ಅದನ್ನೇ ಸಿನಿಮಾ ಮೂಲಕ ಅರ್ಥ ಮಾಡಿಸೋಕೆ ಹೊರಟಿಕೆ ಇಲ್ಲೊಂದು ಟೀಮ್ ಹೊರಟಿದೆ.

ಕನ್ನಡ ಚಿತ್ರರಂಗದ ಹೊಸಬರು ಹಾಗೂ ಹಿರಿಯರು ಸೇರಿಕೊಂಡು 'ಔಟ್ ಆಫ್ ಸಿಲಬಸ್' ಪಾಠ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅದರದ್ದೇ ಒಂದು ಝಲಕ್ ಅನ್ನು ಸಿನಿಮಾ ತಂಡ ರಿಲೀಸ್ ಮಾಡಿದೆ. ಈ ದೃಶ್ಯಕ್ಕೆ ಸಿನಿಪ್ರೇಮಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಅಂದ್ಹಾಗೆ, 'ಔಟ್ ಆಫ್ ಸಿಲಬಸ್' ಸಿನಿಮಾದ ಸೃಷ್ಟಿಕರ್ತ ಪ್ರದೀಪ್ ದೊಡ್ಡಯ್ಯ. ಯುವ ಪೀಳಿಗೆಗೆ ಈ ಹೆಸರು ತುಂಬಾನೇ ಚಿರಪರಿಚಿತ. 'ಲೋಲ್ ಬಾಗ್' ಅನ್ನೋ ಕನ್ನಡದ ಸ್ಟ್ಯಾಂಡಪ್ ಕಾಮಿಡಿ ತಂಡದ ಸದಸ್ಯರಾಗಿದ್ದರು. ಹಾಸ್ಯದ ಮೂಲಕ ಜನರನ್ನು ರಂಜಿಸುತ್ತಿದ್ದರು. ಬಳಿಕ ಮೋಟಿವೇಷನಲ್ ಸ್ಪೀಕರ್ ಆಗಿ ಯುವ ಮನಸ್ಸುಗಳಿಗೆ ಹತ್ತಿರವಾಗಿದ್ದರು. ಇವರೇ ಈಗ 'ಔಟ್ ಆಫ್ ಸಿಲಬಸ್' ಸಿನಿಮಾಗೆ ಹೀರೊ ಹಾಗೂ ಡೈರೆಕ್ಟರ್.
ಈ ಸಿನಿಮಾ ಮೂಲಕ ಜೀವನ ಅಂದರೆ ಏನು ಅಂತ ಪ್ರೇಕ್ಷಕರಿಗೆ ಹೇಳುವುದಕ್ಕೆ ಹೊರಟಿದ್ದಾರೆ. ಹಾಗಂತ, ಇದು ಪಾಠ ಮಾಡೋ ಸಿನಿಮಾ ಅಲ್ಲ. ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಈ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಬದುಕಿನ ಕೆಲವು ಸಂದೇಶವನ್ನು ಸಾರಿವುದಕ್ಕೆ ಮುಂದಾಗಿದ್ದಾರೆ.

'ಔಟ್ ಆಫ್ ಸಿಲಬಸ್' ಸಿನಿಮಾ ಮೂಲಕ ಪ್ರದೀಪ್ ದೊಡ್ಡಯ್ಯ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಕೆ ವಿಜಯಕಲಾ ಸುಧಾಕರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಸಿನಿಮಾ ಸೆಟ್ಟೇರಿತ್ತು. ಜೋಗಿ ಪ್ರೇಮ್ ಅತಿಥಿಯಾಗಿ ಬಂದು ಶುಭ ಹಾರೈಸಿದ್ದರು.
"ಜೀವನ ನಮಗೆ ಕಲಿಸೋ ಪಾಠ, ನಾವು ಓದುವ ಪುಸ್ತಕಗಳಲ್ಲಿ ಇರುವುದಿಲ್ಲ. ಅದು 'OUT OF SYLLABUS' ಎಂಬುದು ಈ ಸಿನಿಮಾ ಕಥೆಯ ಒನ್ ಲೈನ್ ಸ್ಟೋರಿ. ಈ ಸಿನಿಮಾದಲ್ಲಿ ಕನ್ನಡದ ಹಿರಿಯ ನಟ ಅಚ್ಯುತ್ ಕುಮಾರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಈಗ ರಿಲೀಸ್ ಆಗಿರೋ ಕ್ಯಾರೆಕ್ಟರ್ ಗ್ಲಿಂಪ್ಸ್ ಇವರದ್ದೇ.
ಅಂದ್ಹಾಗೆ 'ಔಟ್ ಆಫ್ ಸಿಲಬಸ್' ಸಿನಿಮಾದ ಸ್ಟೋರಿ ಸ್ವತ: ಪ್ರದೀಪ್ ದೊಡ್ಡಯ್ಯನವರದ್ದೇ. ಇನ್ನು ಪ್ರದೀಪ್‌ಗೆ ನಾಯಕಿ ಹೃತಿಕ ಶ್ರೀನಿವಾಸ್ ನಟಿಸಿದ್ದಾರೆ. ಇದು ಈ ನಟಿಗೆ ಎರಡನೇ ಸಿನಿಮಾ. ಈ ಸಿನಿಮಾ ಕ್ಯಾರೆಕ್ಟರ್ ಗ್ಲಿಂಪ್ಸ್‌ಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ.
ಪ್ರದೀಪ್ ಯುವಜನತೆಯ ಪಲ್ಸ್ ಹಿಡಿಯುವುದಕ್ಕಾಗಿ ಸುಮಾರು ಒಂದೂವರೆ ಲಕ್ಷ ಮಕ್ಕಳಿಗೆ ಮೋಟಿವೇಷನಲ್ ಸ್ಪೀಚ್ ನೀಡಿದ್ದಾರೆ. ಇವರು ಕಾಲೇಜಿಗೆ ಹೋದಾಗಲೆಲ್ಲಾ ವಿದ್ಯಾರ್ಥಿಗಳು ಲೈಫ್ ಅಂದರೆ ಏನು ಅನ್ನೋ ಪ್ರಶ್ನೆ ಕೇಳುತ್ತಿದ್ದರು. ಆಗ ವಿದ್ಯಾರ್ಥಿಗಳಿಗೆ ಜೀವನ ಅಂದ್ರೆ, ಔಟ್ ಆಫ್ ಸಿಲಬಸ್ ಅಂತ ಹೇಳುತ್ತಿದ್ದರು. ಅದಕ್ಕಾಗಿ ಸಿನಿಮಾಗೂ ಅದೇ ಟೈಟಲ್ ಇಟ್ಟಿದ್ದಾಗಿ ಪ್ರದೀಪ್ ಹೇಳಿಕೊಂಡಿದ್ದರು.


Click it and Unblock the Notifications











