»   » ವಿಷಾದದೊಂದಿಗೆ ಫೇಸ್ ಬುಕ್ಕಿಗೆ ಜಗ್ಗೇಶ್ ಗುಡ್ ಬೈ

ವಿಷಾದದೊಂದಿಗೆ ಫೇಸ್ ಬುಕ್ಕಿಗೆ ಜಗ್ಗೇಶ್ ಗುಡ್ ಬೈ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಚಿತ್ರ ಉಪ್ಪಿ 2 ಚಿತ್ರದ ಒಂದು ಹಾಡಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ನವರಸನಾಯಕ ಜಗ್ಗೇಶ್ ಪ್ರಕಟಿಸಿದ ಸ್ಟೇಟಸ್ಸಿಗೆ ಹಲವಾರು ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು.

  ಉಪೇಂದ್ರ ಅಭಿಮಾನಿಗಳ ವಿರೋಧದ ಟ್ವೀಟಿಗೆ, ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಜಗ್ಗೇಶ್ ಉತ್ತರವನ್ನೂ ನೀಡಿದ್ದರು. ಉಪೇಂದ್ರ ಮತ್ತು ತನ್ನ ಅಂದಿನ ದಿನದ ಒಡನಾಟದ ಸಹಿತ ಕೆಲವೊಂದು ವಿಷಯವನ್ನು ಜಗ್ಗೇಶ್ ಬಿಚ್ಚಿಟ್ಟಿದ್ದರು. (ಫೇಸ್ ಬುಕ್ ನಲ್ಲಿ ಜಗ್ಗೇಶ್ ಬಯಲು ಮಾಡಿದ ಸತ್ಯ)

  ಫೇಸ್ ಬುಕ್ ನಲ್ಲಿ ತನ್ನ ಕೊನೇ ವಿಷಾದದ ಸ್ಟೇಟಸ್ ಹಾಕುವ ಮೂಲಕ ಸಾಮಾಜಿಕ ಜಾಲ ತಾಣಕ್ಕೆ ಗುಡ್ ಬೈ ಹೇಳುತ್ತಿದ್ದೇನೆಂದು ಜಗ್ಗೇಶ್ ಹೇಳಿದ್ದಾರೆ. ಜಗ್ಗೇಶ್ ಹಾಕಿರುವ ಸ್ಟೇಟಸ್ ಅನ್ನು ಯಥಾವತ್ತಾಗಿ ಸ್ಲೈಡಿನ ಇಲ್ಲಿ ಪ್ರಕಟಿಸಲಾಗಿದೆ. ಇದೀಗ ಜಗ್ಗೇಶ್ ಅವರು ಫೇಸ್ ಬುಕ್ ಅಕೌಂಟನ್ನು ಡಿಆಕ್ಟಿವೇಟ್ ಮಾಡಿದ್ದಾರೆ. ಇನ್ನು ಅವರು ಸಿಗುವುದು ಸಿನೆಮಾದಲ್ಲಿ ಮಾತ್ರ!

  "ಕೆಲ ಆತ್ಮೀಯರು ನನ್ನನ್ನು ಕಲಾಭಿಮಾನಿಗಳ ಜೊತೆ ಆತ್ಮೀಯವಾಗಿ ಬೆರೆಯಲು ನೀವು ಜಾಲತಾಣಕ್ಕೆ ಬಂದಿರಿ, ನೇರನುಡಿ ಗುಣದವರು ಸಾಮಾನ್ಯವಾಗಿ ಸಾರ್ವಜನಿಕವಾಗಿ ಸಿಗೋದು ತಪ್ಪು ಎಂದು ವಾದಿಸುತ್ತಿದ್ದರು. ಮುಂದೆ ಓದಿ.

  ನಾನು ನಿಷ್ಠುರವಾದಿ

  ಅದಕ್ಕೆ ನಾನು, ಇಲ್ಲಾ ನೇರ ನುಡಿ ನಿಷ್ಠುರವಾದಿ ಅನ್ನೋದು ಗೊತ್ತು ಆದರೂರು ನನ್ನ ಬಗ್ಗೆ ಜನರಿಗೆ ಅರಿವಿದೆ ಎಂದು ಅಭಿಮಾನಿಗಳ ಪರ ವಾದ ಮಾಡಿದ್ದೆ. ಕಾರಣ ನಂಬಿಕೆ... ಆದರೆ ನನ್ನ ಒಂದು ಮಾತಿಗೆ ಸಹಸ್ರಾರು ಅರ್ಥ ಹುಡುಕಿ ಅರಂಭದ ಶತಮಾನದ ಅನುಭವದ ದಿಕ್ಕು ತಪ್ಪಿಸಿ ಮಡಿಯಿಂದ ಇದ್ದ ನನ್ನ FB ಜಾಗದಲ್ಲಿ ಬಹುತೇಕ ಅವಿವೇಕಿಗಳು ಮಲಮೂತ್ರ ವಿಸರ್ಜನೆ ಮಾಡಿಬಿಟ್ಟರು.

  ಕೆಲವರಿಗೆ ನನ್ನ ಪ್ರಶ್ನೆ

  ಅಂತವರಿಗೆ ಒಂದು ಪ್ರಶ್ನೆ... ನನ್ನನ್ನು ಸೇರಿ ಎಲ್ಲರನ್ನೂ ಹುಟ್ಟಿಸಿದ್ದು ತಂದೆ ತಾಯಿ ಹೊರತು ಯಾವ ನಟನೂ ಅಲ್ಲಾ... ಕಲೆ ಸಂತೋಷಕ್ಕೆ... ಕಲಾವಿದ ಕಲೆಯ ರಾಯಭಾರಿ ಹೊರತು ನಮ್ಮನ್ನ ಹುಟ್ಟಿಸಿದ ಅಪ್ಪ ಅಲ್ಲ...

  ಸಂಖ್ಯೆ ಸಾವಿರ ದಾಟಿಲ್ಲ

  ಒಂದು ಅನಿಸಿಕೆ ವಿಷಯಾಂಯರತರ ಮಾಡಿ ತೆಗೆದುಕೊಂಡ ತಿರುವು ಅರಗಿಸಲು ಕಷ್ಟವಾಯಿತು, ಇದರ ಸಂಖ್ಯೆ 6 ಕೋಟಿಯಾಗಿದ್ದರೆ ನಾನು ಮೌನವಾಗುತ್ತಿದ್ದೆ ಆದರೆ ಅದರ ಸಂಖ್ಯೆ ಸಾವಿರ ದಾಟಿಲ್ಲ... ನಗುವುದೋ ಅಳುವುದೋ ನೀವೇ ಹೇಳಿ...

  ಅಮಾಯಕ ಯುವಕರಿಗೆ ಸಿನಿಮಾ ಚಾನ್ಸ್

  ಇತ್ತೀಚೆಗೆ ಕೆಲವರು ಜಾಲತಾಣ ಬಲ್ಲ ಅಮಾಯಕ ಯುವಕರಿಗೆ ಸಿನಿಮಾ ಚಾನ್ಸ್ ಕೊಡಿಸುವ ಆಸೆ ತೋರಿಸಿ ತಮ್ಮ ಮನೆಯ ಗ್ಯಾರೇಜಿನಲ್ಲಿ ತಮ್ಮ ಪುಂಗಿ ಊದುವ ಪಡೆ ಸೃಷ್ಟಿಸಿ ದಿನ ಬೆಳಗಾದರೆ ಢಂಗೂರ ಭಾರಿಸಿ ಒಂದು ಬಾಯಿಂದ ಸಾವಿರ ಬಾಯಿಗೆ ವಿಷಯ ದಾಟಿಸಿ ಉಳಿಯಲು ಯತ್ನಿಸುತ್ತಾರೆ.. ನಮ್ಮ ದೇಶದಲ್ಲಿ ಮಾಸ್ ಹಿಸ್ಟೀರಿಯಾ ಸೃಷ್ಟಿಸುವ ಕಲೆ ಯಾರಿಗೆ ಗೊತ್ತೋ ಅವನೇ ಸೂಪರ್ ಮ್ಯಾನ್ ಇಲ್ಲ ಸ್ಪೈಡರ್ ಮ್ಯಾನ್ನ್...

  ಯುವಮಿತ್ರರಿಗೆ ಒಂದು ಕಿವಿ ಮಾತು

  ನನಗೆ ಇದ್ಯಾವುದು ಗೊತ್ತಿಲ್ಲ, ಬದಲಾಗಿ ಅನ್ನಿಸಿದ್ದು ನೇರವಾಗಿ ನಾನೇ ಹೇಳುವುದು ಗೊತ್ತು ಬಿಟ್ಟರೆ ನಗಿಸುವುದು ಗೊತ್ತು, ಹಾಗಾಗಿ ಯುವಮಿತ್ರರಿಗೆ ಒಂದು ಕಿವಿ ಮಾತು, ದಯಮಾಡಿ ವ್ಯರ್ಥ ಮಾತಿಗಿಂತ ನಿಮ್ಮ ತಂದೆ ತಾಯಿಯ ಕನಸನ್ನು ಸಾಕಾರಗೊಳಿಸುವ ಮಕ್ಕಳಾಗಿ...

  ರಾಜಣ್ಣ ಹೇಳಿದ್ದು

  ನಿಮಗೆ ಇಲ್ಲದಾಗ ಕೊಡಲು ಯಾವ ನಟನು ಬರೋಲ್ಲ... ಅಕಸ್ಮಾತ್ ಬಂದರೆ ಜನ್ಮಕೊಟ್ಟವರು ಮಾತ್ರ ಬರುತ್ತಾರೆ... ಇಷ್ಟು ದಿನ ಅನಿಸಿದ್ದು ಹಂಚಿಕೊಂಡೆ, ಮುಂದೆ ಯಾಕೋ ಮನಸಿಲ್ಲ... ರಾಜಣ್ಣನ ಮಾತೆ ನಿಜ, ಕಲಾವಿದ ಕೈಗೆ ಸಿಗಬಾರದು ಅನ್ನೋದು... ನನಗೆ ಗೊತ್ತು, ನನ್ನ ಪ್ರೀತಿಸುವ ಆತ್ಮಗಳಿಗೆ ಆಗುವ ಅನುಭವ... ನನಗೂ ಮಾತಾಡೋಕೆ ನೀವಿದ್ರಿ... ಪರವಾಗಿಲ್ಲ, ಪ್ರೀತಿ ಮನಸಿನಲ್ಲಿ ಇರಲಿ... ಆಭಿಮಾನ ಕಲೆಗಾಗಿ ಇರಲಿ.

  ತೆರೆಯ ಮೇಲೆ ಸಿಗುವೆ

  1934 ರಲ್ಲಿ ಶುರುವಾದದ್ದೆ ಸಿನಿಮಾ... ಬಂದು ಹೋದವರಲ್ಲಿ ನಾವುಗಳು ಒಬ್ಬರು... ನಟ ಶಾಶ್ವತ ಅಲ್ಲ, ಕಲೆ ಮಾತ್ರ ಶಾಶ್ವತ... ನನ್ನ ಕೊನೆ ಸ್ಟೇಟಸ್... ಮುಂದೆ ತೆರೆ ಮೇಲೆ ಮಾತ್ರ ಸಿಗುವೆ..

  English summary
  Navarasa Nayaka Jaggesh has bid farewell to Facebook with a sad note. Controversy surrounding Uppi 2 had initiated war of words between Jaggesh and Upendra fans. While Jaggesh has been out spoken, Upendra has kept himself in silent mode.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more