'ಆಕ್ಟ್ 1978' ಬಳಿಕ '19.20.21'ರಲ್ಲಿ ಕೂತೂಹಲ ಕೆರಳಿಸಿದ ಮಂಸೋರೆ: ಶೀಘ್ರದಲ್ಲೇ ಸಿನಿಮಾ ರಿಲೀಸ್!
ಪಕ್ಕಾ ಕಮರ್ಷಿಯಲ್ ಸಿನಿಮಾಗಳ ಭರಾಟೆಯ ನಡುವೆಯೂ ಕನ್ನಡ ಚಿತ್ರರಂಗಕ್ಕೆ ವಿಶಿಷ್ಟ ಚಿತ್ರಗಳನ್ನು ನೀಡುತ್ತಿರುವ ನಿರ್ದೇಶಕ ಮಂಸೋರೆ. ಈಗಾಗಲೇ 'ಹರಿವು', 'ನಾತಿಚರಾಮಿ', 'ಆಕ್ಟ್ 1978' ಅಂತಹ ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಇಂತಹ ವಿಶಿಷ್ಟ ಪ್ರಯತ್ನಕ್ಕೆ ರಾಷ್ಟ್ರಪಶಸ್ತಿ ಕೂಡ ನಿರ್ದೇಶಕ ಮಂಸೋರೆ ಮುಡಿಗೇರಿದೆ.
ಕೆಲವೇ ವರ್ಷಗಳ ಹಿಂದೆ 'ಆಕ್ಟ್ 1978' ಸಿನಿಮಾ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಈ ಗೆಲುವಿನ ಬೆನ್ನಲ್ಲೇ ಮತ್ತೊಂದು ವಿಶೇಷ ಸಂದೇಶವುಳ್ಳ ಕಥೆಯ ಮೂಲಕ ಸಿನಿಪ್ರಿಯರನ್ನು ಹೊಸ ಸಿನಿಮಾ ತೋರಿಸಲು ಮಂಸೋರೆ ಮುಂದಾಗಿದ್ದಾರೆ. ಅದುವೇ '19.20.21'. ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಕೆರಳಿಸಿರುವ ಈ ಸಿನಿಮಾ ಈಗ ರಿಲೀಸ್‌ಗೆ ರೆಡಿಯಾಗಿದೆ.
'19.20.21' ಸಿನಿಮಾದ ಹೊಸ ಪೋಸ್ಟರ್ ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿದೆ. '19.20.21' ಪಾತ್ರಗಳನ್ನು ಪ್ರೇಕ್ಷಕರಲ್ಲಿ ಕುತೂಹಲವನ್ನೂ ಮೂಡಿಸುತ್ತಿವೆ. ಮಂಸೋರೆ ಈ ಹಿಂದೆ ನಿರ್ದೇಶಿಸಿದ ಸಿನಿಮಾಗಳಂತೆ ಇದೂ ಕೂಡ ಭಿನ್ನ ಅನ್ನೋದಕ್ಕೆ ಸಾಕ್ಷಿ ಸಿಕ್ಕಿವೆ. ಮತ್ತೊಂದು ಗಂಭೀರ ವಿಷಯವನ್ನು ತೆರೆಮೇಲೆ ತರುವುದಕ್ಕೆ ಹೊರಟಿದ್ದಾರೆ ಅನ್ನೋದು ಸಾಬೀತಾಗಿದೆ.

ಮಂಸೋರೆ ನಿರ್ದೇಶಿಸಿದ '19.20.21' ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಕಥೆಯನ್ನುಹೆಣೆಯಲಾಗಿದೆ. ಇದೊಂತರಾ ಸೋಶಿಯಲ್ ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ. ಸದ್ಯ ಸಿನಿಮಾದ ಶೂಟಿಂಗ್ ಮುಗಿಸಿ, ಕೊನೆ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಎಲ್ಲಾ ಕೆಲಸಗಳು ಮುಗಿದ ಬಳಿಕ ಸಿನಿಮಾ ಬಿಡುಗಡೆಗೆ ತಯಾರಿ ನಡೆಸಲಾಗುತ್ತೆ. ಆದರೆ ಅದಕ್ಕೂ ಮುನ್ನ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ ಚಿತ್ರತಂಡ.
ಈ ಸಿನಿಮಾದಲ್ಲಿ ರಂಗಭೂಮಿ ಕಲಾವಿದರ ದೊಡ್ಡ ಸಮಾಗಮವೇ ಆಗಿದೆ. ಶೃಂಗ ಬಿ ವಿ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪತ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಯಲ್ಲಾಪುರ, ಧಾರವಾಡ, ಮಂಗಳೂರು, ಕುಂದಾಪುರ ಸೇರಿದಂತೆ ಹಲವು ಕಡೆಗಳಲ್ಲಿ ಈ ಸಿನಿಮಾವನ್ನು ಶೂಟಿಂಗ್ ಮಾಡಲಾಗಿದೆ.

ಶಿವು ಬಿ ಕೆ ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಬಿಂದು ಮಾಲಿನಿ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಹಾಗೂ ಅವಿನಾಶ್ ಜಿ ಸಂಭಾಷಣೆ ಬರೆದಿದ್ದಾರೆ. ಹಾಗೇ ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಸ್ಕ್ರೀನ್ ಪ್ಲೇ ಹಾಗೂ ಕಿರಣ್ ಕಾವೇರಪ್ಪ ಅವರ ಸಾಹಿತ್ಯ ಚಿತ್ರಕ್ಕಿದೆ. '19.20.21' ಚಿತ್ರವನ್ನು ದೇವರಾಜ್ ಆರ್ ನಿರ್ಮಾಣ ಮಾಡಿದ್ದಾರೆ.


Click it and Unblock the Notifications