ಕುಮಾರಸ್ವಾಮಿ ಹೋಮ್ ಬ್ಯಾನರಿನಲ್ಲಿ ಸಿನಿಮಾ ಮಾಡಿದ್ದೇನೆ: ರಮ್ಯಾ
ಅಸಲಿಗೆ ಕುಮಾರಸ್ವಾಮಿ, ಜೆಡಿಎಸ್ ಮತ್ತು ರಮ್ಯಾ ನಡುವಣ ವಾಕ್ಸಮರ ಇದೇನು ಹೊಸತಲ್ಲ. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ರಮ್ಯಾ ವಿರುದ್ದ 'ಪ್ರಣಾಳ ಶಿಶು' ಪದ ಪ್ರಯೋಗ ನಡೆದಿತ್ತು.
ರಮ್ಯಾ ಮಾಧ್ಯಮದ ಮುಂದೆ ಅತ್ತೂ ಆಗಿತ್ತು, ಕುಮಾರಸ್ವಾಮಿ ನಂತರ ಈ ಪದ ಪ್ರಯೋಗಕ್ಕೆ ಕ್ಷಮೆಯನ್ನೂ ಯಾಚಿಸಿದ್ದರು. ಈಗ ಜಿಲ್ಲಾ, ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಮತ್ತೆ ಎಚ್ದಿಕೆ ಮತ್ತು ರಮ್ಯಾ ನಡುವಣ ವಾಕ್ಸಮರ ವೈಯಕ್ತಿಕ ಮಟ್ಟಕ್ಕೆ ಬಂದು ನಿಂತಿದೆ. (ಸಭ್ಯತೆ ಮಿತಿಮೀರಿದ ಎಚ್ಡಿಕೆ, ರಮ್ಯಾ ವಾಕ್ಸಮರ)
ಕಲಾವಿದರು ಸಿನಿಮಾ ರಂಗದಲ್ಲೇ ಇರಬೇಕು ಅದು ಬಿಟ್ಟು ಅಂಥವರಿಗೆ ರಾಜಕೀಯ ಏಕೆ ಬೇಕು ಎಂದು ಕುಮಾರಸ್ವಾಮಿ ಪ್ರಶ್ನೆಗೆ ಉತ್ತರಿಸುತ್ತಿದ್ದ ರಮ್ಯಾ, ರಾಜಕೀಯಕ್ಕೆ ಬರುವ ಮೊದಲು ಕುಮಾರಸ್ವಾಮಿ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿಯವರು ರಾಜಕೀಯಕ್ಕೆ ಬರುವ ಮೊದಲು ಸಿನಿಮಾ ಡಿಸ್ಟ್ರಿಬ್ಯೂಟರ್ ಆಗಿ ನಂತರ ನಿರ್ಮಾಪಕರಾಗಿದ್ದವರು ಎನ್ನುವುದನ್ನು ಮರೆಯಬಾರದು, ನಾನೇ ಕುಮಾರಸ್ವಾಮಿ ಹೋಮ್ ಬ್ಯಾನರಿನ ಎರಡು ಚಿತ್ರದಲ್ಲಿ ನಟಿಸಿದ್ದೇನೆಂದು ರಮ್ಯಾ ತಿರುಗೇಟು ನೀಡಿದ್ದಾರೆ. ಮುಂದಿನ ಸ್ಲೈಡ್ ಕ್ಲಿಕ್ಕಿಸಿ..

ಸಿನಿಮಾದವರು ರಾಜಕೀಯಕ್ಕೆ ಬರಬಾರದೆಂದು ಕಾನೂನು ಇದೆಯಾ
ಸಿನಿಮಾ ರಂಗದವರು ರಾಜಕೀಯಕ್ಕೆ ಬರಬಾರದು ಎಂದು ಏನಾದರೂ ಕಾನೂನು ಇದೆಯಾ? ಇದ್ದರೆ ಕುಮಾರಸ್ವಾಮಿಯವರು ತಮ್ಮನ್ನು ತಾನು ಮೊದಲು ಪ್ರಶ್ನಿಸಿಕೊಳ್ಳಲಿ ಎಂದು ಮಂಡ್ಯದಲ್ಲಿ ಕುಮಾರಸ್ವಾಮಿಗೆ ರಿವರ್ಸ್ ಹೊಡೆದಿದ್ದಾರೆ.

ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿಯವರು ಎಚ್ಡಿಕೆ ಪತ್ನಿ ಎನ್ನುವುದು ಓಪನ್ ಸೀಕ್ರೆಟ್. ಇವರು ಸಿನಿಮಾದಲ್ಲಿ ನಟಿಸುತ್ತಿಲ್ವಾ? ಕುಮಾರಸ್ವಾಮಿಯವರ ಮಗ ಸಿನಿಮಾದಲ್ಲಿ ನಟಿಸುತ್ತಿಲ್ವಾ? ಇವರಿಗೆ ಒಂದು ಕಾನೂನು ಇನ್ನೊಬ್ಬರಿಗೆ ಇನ್ನೊಂದು ಕಾನೂನಾ ಎಂದು ಮಾಧ್ಯಮವರ ಮುಂದೆ ಕುಮಾರಸ್ವಾಮಿಯವರನ್ನು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ನಿರ್ಮಾಪಕ/ಹಂಚಿಕೆದಾರರಾಗಿದ್ದ ಸಿನಿಮಾಗಳು
ಚಂದ್ರ ಚಕೋರಿ, ಸೂರ್ಯವಂಶ, ಗಲಾಟೆ ಅಳಿಯಂದ್ರು, ಪ್ರೇಮೋತ್ಸವ ಮುಂತಾದ ಚಿತ್ರವು ಕುಮಾರಸ್ವಾಮಿ/ಅನಿತಾ ಕುಮಾರಸ್ಬಾಮಿ ಒಡೆತನದ ಚೆನ್ನಾಂಬಿಕ ಫಿಲಂಸ್ ಬ್ಯಾನರಿನಲ್ಲಿ ಮೂಡಿಬಂದಿತ್ತು.

ನಾನು ಎರಡು ಸಿನಿಮಾದಲ್ಲಿ ನಟಿಸಿದ್ದೇನೆ
ಕುಮಾರಸ್ವಾಮಿ ಬ್ಯಾನರಿನ ಎರಡು ಚಿತ್ರಗಳಲ್ಲಿ ನಾನು ನಾಯಕಿಯಾಗಿ ನಟಿಸಿದ್ದೆ. ಒಂದು ಸೇವಂತಿ ಸೇವಂತಿ (ರಮ್ಯಾ ಹೇಳಿದ ಪ್ರಕಾರ) ಇನ್ನೊಂದು ಲಕ್ಕಿ (ರಾಧಿಕಾ ನಿರ್ಮಾಪಕಿ) ಚಿತ್ರದಲ್ಲಿ ನಟಿಸಿದ್ದೇನೆಂದು ರಮ್ಯಾ ಮಂಡ್ಯದಲ್ಲಿ ಹೇಳಿದ್ದಾರೆ.


Click it and Unblock the Notifications