Dhruva Sarja: ವರಮಹಾಲಕ್ಷ್ಮಿಯಂದೇ ಸಿಹಿ ಸುದ್ದಿ ನೀಡಿದ ಆಕ್ಷನ್ ಪ್ರಿನ್ಸ್.. 2ನೇ ಮಗುವಿನ ನಿರೀಕ್ಷೆ ಧ್ರುವ ದಂಪತಿ!
ಇಂದು (ಆಗಸ್ಟ್ 25) ವರಮಹಾಲಕ್ಷ್ಮಿ ಹಬ್ಬ. ನಾಡಿನ ಎಲ್ಲಾ ಕಡೆಗಳಲ್ಲಿ ಲಕ್ಷ್ಮಿ ಹಬ್ಬದ ಸಂಭ್ರಮ ಜೋರಾಗಿದೆ. ಹಾಗೆಯೇ ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಧ್ರುವ ಸರ್ಜಾ ದಂಪತಿ ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವೃತ್ತಿ ಬದುಕು ಅದ್ಭುತವಾಗಿ ಸಾಗಿದೆ. ಅದೇ ಇನ್ನೊಂದು ಕಡೆ ವೈಯಕ್ತಿಕ ಜೀವನದಲ್ಲೂ ಸಂಭ್ರಮ ಮನೆ ಮಾಡಿದೆ. ಸದ್ಯ ಧ್ರುವ ಸರ್ಜಾ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಸಿನಿಮಾ ಬಿಡುಗಡೆ ಸಜ್ಜಾಗಿದ್ದಾರೆ. ಇನ್ನೊಂದು ನಿರ್ಮಾಣದ ಹಂತದಲ್ಲಿದೆ.

ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಬಿಡುಗಡೆಯಾಗಬೇಕಿದೆ. ಹಾಗೇ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ 'ಕೆಡಿ' ನಿರ್ಮಾಣ ಹಂತದಲ್ಲಿದೆ. ಈ ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಅನ್ನೋದು ವಿಶೇಷ. ಈ ಬೆನ್ನಲ್ಲೇ ಧ್ರುವ ಸರ್ಜಾ ತಮ್ಮ ವಿಐಪಿಗಳಿಗೆ ಹಾಗೂ ಆತ್ಮೀಯರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.
2ನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಿಹಿಸುದ್ದಿಯನ್ನು ವರಮಹಾಲಕ್ಷ್ಮಿ ಹಬ್ಬದಂದು ಒಂದು ಸುಂದರ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ತಮ್ಮ ಕುಟುಂಬಕ್ಕೆ ಮತ್ತೊಂದು ಸರ್ಜಾ ಕುಡಿಯ ಆಗಮನ ಆಗುತ್ತಿರುವ ಖುಷಿಯಲ್ಲಿದ್ದಾರೆ. ಈ ಸಂಬಂಧ ಪತ್ನಿ ಹಾಗೂ ಮಗಳೊಂದಿಗೆ ಧ್ರುವ ಸರ್ಜಾ ಪ್ರತ್ಯಕ್ಷ ಆಗಿದ್ದಾರೆ.
ಎಷ್ಟು ತಿಂಗಳ ಗರ್ಭಿಣಿ? ಡೇಟ್ ಎಂದು?
ಧ್ರುವ ಸರ್ಜಾ ಪತ್ನಿ ಪ್ರೇರಣಾ ಈಗ ಎಂಟು ತಿಂಗಳ ತುಂಬು ಗರ್ಭಿಣಿ. ಎರಡನೇ ಬಾರಿ ತಂದೆ-ತಾಯಿಯಾಗುತ್ತಿರುವ ಖುಷಿಯಲ್ಲಿರೋ ಧ್ರುವ ದಂಪತಿ ಸೆಪ್ಟೆಂಬರ್ ಎರಡನೇ ವಾರ ಅಥವಾ ಮೂರನೇ ವಾರ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿ ಧ್ರುವ ಸರ್ಜಾ ಮನೆಯಲ್ಲೂ ಮನೆ ಮಾಡಿದ್ದು, ಇಡೀ ಕುಟುಂಬ ಮನೆಗೆ ತಮ್ಮ ಕುಡಿಯನ್ನು ಆಗಮನ ಮಾಡುವುದಕ್ಕೆ ಎದುರು ನೋಡುತ್ತಿದ್ದಾರೆ.
ಧ್ರುವ ಸರ್ಜಾ ಫ್ಯಾನ್ಸ್ ಸಂಭ್ರಮ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಖುಷಿ ವಿಷಯವನ್ನು ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಇನ್‌ಸ್ಟಾಗ್ರಾಂನಲ್ಲಿ ಕಮೆಂಟ್‌ಗ ಮೇಲೆ ಕಮೆಂಟ್ ಮಾಡುತ್ತಿದ್ದಾರೆ. "ಜೂನಿಯರ್ ಧ್ರುವ ಬಾಸ್ ಆನ್ ದಿ ವೇ" ಅಂತ ಡೈಲಾಗ್ ಬಿಡುತ್ತಿದ್ದಾರೆ. ಇನ್ನೊಬ್ಬರು "ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಅಣ್ಣ ಅತ್ತಿಗೆ ತಾಯಿ ಶ್ರೀ ಮಹಾಲಕ್ಷ್ಮಿ ದೇವಿ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಆರೋಗ್ಯ, ಸಂತೋಷ, ಐಶ್ವರ್ಯ, ನೆಮ್ಮದಿ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ. ಹಾಗೇ ಮತ್ತೊಬ್ಬರು " ನಿಮ್ಮ ಕುಟುಂಬಕ್ಕೆ ಸೇರಿಕೊಳ್ಳುತ್ತಿರುವ ಅತಿಥಿಗೆ ಪ್ರೀತಿ ಮತ್ತು ಶುಭಾಶಯಗಳು. ಜೈ ಧ್ರುವ ಬಾಸ್.. ಜೈ ಸರ್ಜಾ ಫ್ಯಾಮಿಲಿ" ಎಂದು ಕಮೆಂಟ್ ಮಾಡುತ್ತಿದ್ದಾರೆ.
ಸಿನಿಮಾಗಳಲ್ಲಿ ಧ್ರುವ ಫುಲ್ ಬ್ಯುಸಿ
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ಎರಡು ಬಿಗ್ ಬಜೆಟ್ ಸಿನಿಮಾಗಳಿದ್ದು, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಅಬ್ಬರಿಸುವುದಕ್ಕೆ ಸಜ್ಜಾಗಿದ್ದಾರೆ. ಅರ್ಜುನ್ ಸರ್ಜಾ ಕಥೆ ಬರೆದು, ಎ ಪಿ ಅರ್ಜುನ್ ನಿರ್ದೇಶಿಸಿದ 'ಮಾರ್ಟಿನ್' ರಿಲೀಸ್‌ಗೆ ರೆಡಿಯಾಗುತ್ತಿದೆ. ಹಾಗೇ ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ.


Click it and Unblock the Notifications











