ಭಾನುವಾರದ ಬಾಡೂಟ: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಧಮ್ ಬಿರಿಯಾನಿ ವಿಡಿಯೊ ವೈರಲ್

ಸ್ಟಾರ್‌ಗಳಿಗೆ ಬಿಡುವು ಸಿಗುವುದು ತೀರಾ ಕಡಿಮೆ. ಯಾವಾಗಲೂ ಸಿನಿಮಾ ಶೂಟಿಂಗ್, ಕಥೆ ಹೇಳುವುದರಲ್ಲೇ ಬ್ಯುಸಿಯಾಗಿರುತ್ತಾರೆ. ಕುಟುಂಬದ ಜೊತೆ ಕಾಲ ಕಳೆಯುವುದಕ್ಕೇ ಸಮಯ ಸಿಗುವುದಿಲ್ಲ. ಇಂತಹದರಲ್ಲಿ ಅಡುಗೆ ಮನೆಗೆ ಹೋಗುವುದು. ಅಲ್ಲಿ ಧಮ್ ಬಿರಿಯಾನಿ ಮಾಡುವುದು ತೀರಾ ಅಪರೂಪ ಅಂತಲೇ ಹೇಳಬೇಕು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಟಿ ಶೈಲಿಯಲ್ಲಿ ಬಿರಿಯಾನಿ ಮಾಡಿ ಅಭಿಮಾನಿಗಳ ಖುಷಿಗೆ ಕಾರಣರಾಗಿದ್ದಾರೆ.

ಕೊರೊನಾ ಕಾಲದಲ್ಲಿ ಸಿನಿಮಾ ಮಾಡಲು ಸಾಧ್ಯ ಆಗದೇ ಹೋದರೂ, ಸ್ಟಾರ್‌ಗಳಿಗೆ ಕುಟುಂಬದೊಂದಿಗೆ ಕಾಲ ಕಳೆಯಲು ಹೆಚ್ಚು ಸಮಯ ಸಿಕ್ಕಿತ್ತು. ಸಿನಿಮಾ ಕಥೆ ಕೇಳುವುದು ಬಿಟ್ಟರೆ, ಶೂಟಿಂಗ್‌ಗೆ ಅಂತ ಹೊರ ಹೋಗಲು ಆಗುತ್ತಿರಲಿಲ್ಲ. ಆ ವೇಳೆ ಕೆಲ ನಟರು ಅಡುಗೆ ಮಾಡುವುದನ್ನು ಕಲಿತಿದ್ದರು. ಹಾಗಂತ ಧ್ರುವ ಸರ್ಜಾ ಬಿರಿಯಾನಿ ಮಾಡಿದ್ದು, ಲಾಕ್‌ಡೌನ್ ಸಮಯದಲ್ಲಿ ಅಲ್ಲ. ಈ ವಿಡಿಯೋ ಕಳೆದೆರಡು ದಿನಗಳಿಂದ ಭಾರಿ ವೈರಲ್ ಆಗುತ್ತಿದೆ.

ಧ್ರುವ ಸರ್ಜಾ ಧಮ್ ಬಿರಿಯಾನಿ ರೆಸಿಪಿ

ಧ್ರುವ ಸರ್ಜಾ ಧಮ್ ಬಿರಿಯಾನಿ ರೆಸಿಪಿ

ಭಾನುವಾರ ಬಂತು ಅಂದರೆ, ನಾನ್ ವೆಜ್ ಪ್ರಿಯರಿಗೆ ಹಬ್ಬ. ರಜೆ ದಿನ ಬೆಳ್ಳಂಬೆಳ್ಳಗೆ ಮಾಂಸದಂಗಡಿ ಮುಂದೆ ಕ್ಯೂ ನಿಂತು, ಬಿರಿಯಾನಿ ಕನಸು ಕಾಣುವುದು ಕಾಮನ್. ಆದರೆ, ಈ ಭಾನುವಾರ ನಾಟಿ ಶೈಲಿಯಲ್ಲಿ ಬಿರಿಯಾನಿ ಮಾಡಿ ಸವೆಯುವುದಕ್ಕೆ ಧ್ರುವ ಸರ್ಜಾ ವಿಡಿಯೋ ನಿಮಗೆ ಪ್ರೇರಣೆ ನೀಡಲಿದೆ. ಆಕ್ಷನ್ ಪ್ರಿನ್ಸ್ ಹಳ್ಳಿ ಮನೆಯಲ್ಲಿ ಧಮ್ ಕಟ್ಟಿದ ಪಕ್ಕಾ ನಾಟಿ ಸ್ಟೈಲ್ ಧಮ್ ಬಿರಿಯಾನಿ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಧ್ರುವ ಚಿಕನ್ ಧಮ್ ಬಿರಿಯಾನಿ

ಧ್ರುವ ಚಿಕನ್ ಧಮ್ ಬಿರಿಯಾನಿ

ಧ್ರವ ಸರ್ಜಾ ಹಳ್ಳಿಮನೆಯಲ್ಲಿ ಧಮ್ ಕಟ್ಟಿ ಬಿರಿಯಾನಿ ಮಾಡಿದ ವಿಡಿಯೋ ಇದಾಗಿದೆ. ಸೌದೆ ಒಲೆಯ ಮುಂದೆ ಬೆಂಕಿಗೆ ಗಾಳಿ ಊದುತ್ತಾ ನಾಟಿ ಶೈಲಿಯಲ್ಲಿ ಬಿರಿಯಾನಿ ಮಾಡಿದ ವಿಡಿಯೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಹೀಗಾಗಿ ಧ್ರುವ ಸರ್ಜಾ ಫ್ಯಾನ್ಸ್‌ಗೆ ಈ ವಿಡಿಯೋ ಧಮ್ ಬಿರಿಯಾನಿ ತಿಂದಷ್ಟೇ ಅನುಭವ ಆಗಿದೆ. ತಮ್ಮ ನೆಚ್ಚಿನ ನಟನನ್ನು ಈ ಅವತಾರದಲ್ಲಿ ನೋಡಿ ಫುಲ್ ಹಿರಿ ಹಿರಿ ಹಿಗ್ಗಿದ್ದಾರೆ.

ವರ್ಕ್‌ಔಟ್ ವೀಡಿಯೊನೂ ವೈರಲ್

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜಿಮ್‌ನಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಸಿನಿಮಾ ಬಿಟ್ಟರೆ ವರ್ಕ್‌ಔಟ್. ವರ್ಕ್‌ಔಟ್ ಬಿಟ್ಟರೆ ಸಿನಿಮಾ. ಇದು ಧ್ರುವ ಸರ್ಜಾ ಡೈಲಿ ರೊಟೀನ್. ಏನನ್ನು ಬೇಕಾದರೂ ಮಿಸ್ ಮಾಡುತ್ತಾರೆ. ಆದರೆ ಜಿಮ್‌ನಲ್ಲಿ ದೇಹವನ್ನು ದಂಡಿಸುವುದನ್ನು ಮಾತ್ರ ಮಿಸ್ ಮಾಡಿಕೊಳ್ಳುವುದಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಅವರು ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವ ವಿಡಿಯೋ ಆಗಾಗ ಸಿಗುತ್ತಲೇ ಇರುತ್ತೆ. ಇತ್ತೀಚೆಗೆ ಜಿಮ್‌ನಲ್ಲಿ ಪುಟ್ಟ ಬಾಲಕಿಯ ಜಿಮ್ ಕ್ರೇಜ್ ಕಂಡು ಮೆಚ್ಚುಗೆ ವ್ಯಕ್ತಪಡಿಸಿಗದ್ದರು. ಆ ವಿಡಿಯೋ ಕೂಡ ಈಗ ವೈರಲ್ ಆಗಿದೆ.

ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿ

ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿ

ಪೊಗರು ಬಳಿಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಎ ಪಿ ಅರ್ಜುನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಡಬಲ್ ಶೇಡ್‌ನಲ್ಲಿ ಕಾಣಿಸಿಕೊಳ್ಳಿದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ. 'ಮಾರ್ಟಿನ್' ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾವನ್ನು ನೋಡಬಹುದಾಗಿದೆ. ಈ ವರ್ಷ 'ಮಾರ್ಟಿನ್' ಸಿನಿಮಾ ನೋಡಲು ಧ್ರುವ ಅಭಿಮಾನಿಗಳು ಕಾದು ಕೂತಿದ್ದಾರೆ.

More from Filmibeat

English summary
Action prince Dhruva Sarja making chicken dum Biriyani video goes viral. Pogaru actor making treditional dum Biriyani in his native place.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X