ಮಗಳ 7 ತಿಂಗಳ ಸುಂದರ ಜರ್ನಿ ಹಂಚಿಕೊಂಡ ಧ್ರುವ ಸರ್ಜಾ:"ಸರ್ಜಾ ವಂಶದ ಪುಟ್ಟ ರಾಜಕುಮಾರಿ" ಎಂದ ಫ್ಯಾನ್ಸ್
ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎರಡೆರಡು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿ. ಈಗಾಗಲೇ ಎ ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾ ಬಿಡುಗಡೆಗೆ ಕೊನೆಯ ಹಂತದ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಇನ್ನೊಂದು ಪ್ರೇಮ್ ನಿರ್ದೇಶನದಲ್ಲಿ 'ಕೆಡಿ' ಶೂಟಿಂಗ್ ನಡೆಯುತ್ತಿದೆ.
'ಮಾರ್ಟಿನ್' ಧ್ರುವ ಸರ್ಜಾ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಆಕ್ಷನ್ ಪ್ರಿನ್ಸ್ ಈ ಸಿನಿಮಾದ ಮೇಲೆ ಹೋಪ್ ಇಟ್ಟುಕೊಂಡಿದ್ದಾರೆ. ಹಾಗಂತ ಕೇವಲ ಸಿನಿಮಾ ಅಂತ ಬ್ಯುಸಿಯಾಗಿಲ್ಲ. ಫ್ಯಾಮಿಲಿ ಜೊತೆನೂ ಕಾಲ ಕಳೆಯುತ್ತಿದ್ದಾರೆ.

ಅದರಲ್ಲೂ ಮಗಳು ಹುಟ್ಟಿದ ಮೇಲಂತೂ ಧ್ರುವ ಸರ್ಜಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಗಳೊಂದಿಗೆ ಹೆಚ್ಚು ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅದೇ ಮೊದಲ ಬಾರಿಗೆ ಧ್ರುವ ಸರ್ಜಾ ಮಗಳ ಫೋಟೊಗಳನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಮಗಳನ್ನು ಅದೇ ಮೊದಲ ಬಾರಿಗೆ ಕಂಡು ಪುಳಕಿತರಾಗಿದ್ದರು.
ಅಪ್ಪನಿಗೆ ಮಗಳೇ ವಿಐಪಿ
ಧ್ರುವ ಸರ್ಜಾ ಮೇ 15ರಂದು ತಮ್ಮ ಅಭಿಮಾನಿಗಳ ಜೊತೆ ಅದೇ ಮೊದಲ ಬಾರಿಗೆ ಮಗ ಫೋಟೊ ಹಂಚಿಕೊಂಡಿದ್ದರು. ಈ ಇನ್‌ಸ್ಟಾಗ್ರಾಂನಲ್ಲಿ ಶೇರ್ ಆಗುತ್ತಿದ್ದಂತೆ ಫ್ಯಾನ್ ಧ್ರುವ ಹಾಗೂ ಅವರ ಮಗಳಿಗೆ ಶುಭ ಹಾರೈಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಮಗಳ ಫೋಟೊವನ್ನು ವೈರಲ್ ಮಾಡಿದ್ದರು.
2022 ಅಕ್ಟೋಬರ್ 5 ರಂದು ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು ಬಿಟ್ಟರೆ, ಮಗಳ ಮುಖವನ್ನು ತೋರಿಸಿರಲಿಲ್ಲ. ಈಗ ಮಗಳಿಗೆ 7 ತಿಂಗಳು. ಈಗ ಮಗಳ ಒಂದೊಂದೇ ಫೋಟೊಗಳನ್ನು ಶೇರ್ ಮಾಡಿ ಖುಷಿ ಪಡುತ್ತಿದ್ದಾರೆ.
ಇತ್ತೀಚೆಗಿನ ಫೋಟೊ ಹಂಚಿಕೊಂಡ ಧ್ರುವ
ಏಳು ದಿನಗಳ ಹಿಂದಷ್ಟೇ ಪುತ್ರಿ ಜನಿಸಿದ ಕೆಲವೇ ದಿನಗಳ ಫೋಟೊವನ್ನು ಶೇರ್ ಮಾಡಿದ್ದರು. ಮಗಳೊಂದಿಗಿನ ಜರ್ನಿಯ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಹುಟ್ಟಿದಾಗಿನಿಂದ ಇಲ್ಲಿವರೆಗೂ ಕೆಲವು ಮಧುರ ಕ್ಷಣಗಳನ್ನು ಆ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಶೇರ್ ಮಾಡಿ, "ನಮ್ಮ ಬದುಕಲ್ಲಿ ಬಂದು ಈ ಪುಟ್ಟ ಬೆಳಕಿಗೆ ಧನ್ಯರಾಗಿದ್ದೇವೆ. ನಮ್ಮ ಮಗಳು" ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಖುಷಿಯಿಂದ ಕಮೆಂಟ್ ಮಾಡುತ್ತಿದ್ದಾರೆ. "ಸರ್ಜಾ ವಂಶದ ಪುಟ್ಟ ರಾಜಕುಮಾರಿ" ಅಂತ ಕಮೆಂಟ್ ಮಾಡಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಮಗಳಿಗೆ ಇನ್ನೂ ಹೆಸರಿಟ್ಟಿಲ್ಲ
ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ತಮ್ಮ ಮಗುವಿಗೆ ಇನ್ನೂ ನಾಮಕರಣ ಮಾಡಿಲ್ಲ. 7 ತಿಂಗಳ ಬಳಿಕ ಫೋಟೊ ರಿವೀಲ್ ಮಾಡಿರೋ ಧ್ರುವ ಸರ್ಜಾ, ಮಗಳಿಗೆ ಏನು ಹೆಸರಿಡಬಹುದು? ಅಂತ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಧ್ರುವ ಸರ್ಜಾ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೊದಲು 'ಮಾರ್ಟಿನ್' ರಿಲೀಸ್ ಆಗುತ್ತಿದೆ. ಆ ಬಳಿಕ ಜೋಗಿ ಪ್ರೇಮ್ ನಿರ್ದೇಶಿಸುತ್ತಿರುವ 'ಕೆಡಿ' ಸಿನಿಮಾ ಬಿಡುಗಡೆಯಾಗಲಿದೆ. ಸದ್ಯ 'ಮಾರ್ಟಿನ್' ಸಿನಿಮಾದ ಸಣ್ಣಪುಟ್ಟ ದೃಶ್ಯ ಹಾಗೂ ಹಾಡುಗಳ ಚಿತ್ರೀಕರಣ ನಡೆಯುತ್ತಿದೆ. ಅತ್ತ 'ಕೆಡಿ' ಸಿನಿಮಾದ ಚಿತ್ರೀಕರಣದಲ್ಲೂ ಭಾಗಿಯಾಗುತ್ತಿದ್ದಾರೆ.


Click it and Unblock the Notifications











