ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮೀಯನಾಗಿದ್ದ ಗೆಳೆಯನ ಸಾವು: "ಇಂದು ದುಃಖದ ದಿನ" ಎಂದು ಭಾವುಕರಾದ ಚೇತನ್

'ಆದಿನಗಳು' ಖ್ಯಾತಿಯ ನಟ ಚೇತನ್ ಕುಮಾರ್ ಸೋಶಿಯಲ್ ಮೀಡಿಯಾದ ಹಿಂದೂತ್ವದ ವಿರುದ್ಧವಾಗಿ ಸಮರ ಸಾರಿದ್ದರು. ಇವರು ಮಾಡಿದ ಪೋಸ್ಟ್‌ಗಳು, ಹೇಳಿಕೆಗಳು ಕೆಲವರ ಕಣ್ಣುಗಳನ್ನು ಕೆಂಪಾಗಿದ್ದವು. ಈ ಸಂಬಂಧ ಚೇತನ್ ಅವರನ್ನು ಬಂಧಿಸಲಾಗಿತ್ತು.

ಈ ಸಂಬಂಧ ಒಂದು ವಾರಗಳ ಕಾಲ ಪರಪ್ಪನ ಅಗ್ರಹಾರದಲ್ಲಿ ಇರಬೇಕಾಯಿತು. ಆ ವೇಳೆ ಜೈಲಿನಲ್ಲಿ ಅಹಿಂಸಾ ಚೇತನ್‌ಗೆ ಶಾಂತಪ್ಪ ಎನ್ನುವವರು ಆತ್ಮೀಯರಾಗಿದ್ದರು. ಜೈಲಿನಲ್ಲಿ ಇದ್ದಷ್ಟು ದಿನ ಅವರೊಂದಿಗೆ ಹೆಚ್ಚು ಕಾಲ ಕಳೆದ ಚೇತನ್ ಇಂದು ದುಃಖದ ಸಂಗತಿಯನ್ನು ಹಂಚಿಕೊಂಡಿದ್ದಾರೆ.

Actor Ahimsa Chetan get emotional after his jailmate death in Bengaluru

ಚೇತನ್ ಜೈಲಿನಲ್ಲಿದ್ದಾಗ ಆತ್ಮೀಯರಾಗಿದ್ದ ಶಾಂತಪ್ಪ ಇಂದು (ಮೇ 12) ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಜೈಲ್ಲಿ ಅರ್ಥಗರ್ಭಿತ ಹಾಡುಗಳನ್ನು ಹಾಡುತ್ತಿದ್ದಂತೆ. ಇದರಲ್ಲಿ 'ಒಳಿತು ಮಾಡುವ ಮನುಸ' ಹಾಡು ನನಗೆ ಸದಾ ನೆನಪಿದೆ ಎಂದು ಚೇತನ್ ಭಾವುಕರಾಗಿ ಬರೆದುಕೊಂಡು ಫೇಸ್ ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

"ಇಂದು ದುಃಖದ ದಿನ.. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ವಾರದಲ್ಲಿ ನನ್ನ ಆತ್ಮೀಯ ಗೆಳೆಯನಾಗಿದ್ದ ಶಾಂತಪ್ಪ (35) ಇಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಜೈಲಿನಲ್ಲಿ ಶಾಂತಪ್ಪನವರ ಹಾಡುಗಳೇ ನನಗೆ ಆಸರೆಯಾಗಿದ್ದವು. ಅವರ ಧ್ವನಿಯಲ್ಲಿ 'ಒಳಿತು ಮಾಡು ಮನುಸ' ನನಗೆ ಸದಾ ನೆನಪಿದೆ. ಕಳೆದ ವರ್ಷದಿಂದ ಅವರ ಕುಟುಂಬದ ಸದಸ್ಯ ಆನಂದ ಮತ್ತು ನಾನು ವೈದ್ಯಕೀಯವಾಗಿ ಮತ್ತು ದಿನನಿತ್ಯದ ಜೀವನಾಂಶಕ್ಕಾಗಿ ಅವರಿಗೆ ಬೆಂಬಲ ನೀಡುತ್ತಿದ್ದೇವೆ. ಶಾಂತಪ್ಪ ನನ್ನ ಹೃದಯದಲ್ಲಿ ಯಾವಾಗಲೂ ಉಳಿಯುತ್ತಾರೆ." ಎಂದು ಚೇತನ್ ಫೇಸ್ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಕಳೆದ ಒಂದು ವರ್ಷಗಳಿಂದ ಸ್ವತ: ಹಾಗೂ ಶಾಂತಪ್ಪ ಕುಟುಂಬ ಸದಸ್ಯ ಆನಂದ್ ಎಂಬುವವರು ಇವರಿಗೆ ವೈದ್ಯಕೀಯ ನೆರವು ನೀಡುತ್ತಿದ್ದುದಾಗಿ ಹೇಳಿದ್ದಾರೆ. ಜೈಲಿನ ಗೆಳಯ ಕೊನೆಯುಸಿರೆಳೆದ ದು:ಖದ ವಿಷಯವನ್ನು ಹಂಚಿಕೊಂಡಿದ್ದು, ಅವರ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

"ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ.
ಸಾವರ್ಕರ್ ಹೇಳಿಕೆ: ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗ ಭಾರತೀಯ ರಾಷ್ಟ್ರ ಪ್ರಾರಂಭವಾಯಿತು-ಇದು ಒಂದು ಸುಳ್ಳು.
1992ರಲ್ಲಿ: ಬಾಬರಿ ಮಸೀದಿ ರಾಮನ ಜನ್ಮಭೂಮಿ-ಇದು ಒಂದು ಸುಳ್ಳು.
ಈಗ 2023ರಲ್ಲಿ: ಉರಿಗೌಡ, ನಂಜೇಗೌಡರು ಟಿಪ್ಪುವನ್ನು ಕೊಂದರು-ಇದು ಕೂಡ ಒಂದು ಸುಳ್ಳು.
ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು-ಸತ್ಯವೇ ಸಮಾನತೆ"
ಹೀಗೆಂದು ಚೇತನ್ ಪೋಸ್ಟ್ ಮಾಡಿದ್ದರು. ಈ ಸಂಬಂಧ ಐಪಿಸಿ ಸೆಕ್ಷನ್‌ 295A 505Bರಡಿ ಪ್ರಕರಣ ದಾಖಲಾಗಿತ್ತು.

More from Filmibeat

English summary
Actor Ahimsa Chetan get emotional after his jailmate death in Bengaluru, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X