Breaking news: ಹಿರಿಯ ನಟ-ಮಾಜಿ ಸಚಿವ ಬಿ. ಸಿ. ಪಾಟೀಲ್ ಅಳಿಯ ಆತ್ಮಹತ್ಯೆಗೆ ಶರಣು

ದಾವಣಗೆರೆ: ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಮಾಜಿ ಶಾಸಕ ಬಿ. ಸಿ. ಪಾಟೀಲ್ ಅವರ ಅಳಿಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲ ಪುತ್ರಿ ಸೌಮ್ಯಾ ಅವರ ಪತಿ ಕೆಜಿ ಪ್ರತಾಪ್ ಕುಮಾರ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು.

ಬಿ.ಸಿ.ಪಾಟೀಲ್ ಅಳಿಯ ಕೆ.ಜಿ.ಪ್ರತಾಪ್ ಕುಮಾರ್ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರಾ ಬಳಿಯ ಅರಣ್ಯ ಪ್ರದೇಶದಲ್ಲಿ ಕಾರು ನಿಲ್ಲಿಸಿ ವಿಷ ಸೇವಿದ್ದರು. ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾದರೂ, ಚಿಕಿತ್ಸೆ ಫಲಿಸಿದೆ ಕೊನೆಯುಸಿರೆಳೆದಿದ್ದಾರೆ.

Actor and Politician BC Patil Son in Law Prathap Kumar Suicide near Davangere

ಅರಕೆರಾ ಬಳಿಯ ಕಾಡಿನ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ವಿಷ ಸೇವಿಸಿದ್ದರು. ಅಲ್ಲಿನ ಸ್ಥಳಿಯರು ಬಿ ಸಿ ಪಾಟೀಲ್ ಅಳಿಯ ಕೆ.ಜಿ.ಪ್ರತಾಪ್ ಕುಮಾರ್ ಅವರನ್ನು ಅಸ್ವಸ್ಥರಾಗಿರುವುದನ್ನು ಕಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಕೆ.ಜಿ.ಪ್ರತಾಪ್ ಕುಮಾರ್ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ ಬಳಿಕ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಿ ಸಿ ಪಾಟೀಲ್ ಅಳಿಯ ಕೆ.ಜಿ.ಪ್ರತಾಪ್ ಕುಮಾರ್ ದಾವಣಗೆರೆಯ ಕತ್ತಲಗೇರಿ ಗ್ರಾಮದ ನಿವಾಸಿಯಾಗಿದ್ದರು. ಪ್ರತಾಪ್ ಕುಮಾರ್ ಬಿ.ಸಿ ಪಾಟೀಲ್ ಪತ್ನಿ ವನಜಾ ಅವರ ಸಹೋದರ. ಕಳೆದ 12 ವರ್ಷಗಳ ಹಿಂದೆ ಬಿ. ಸಿ. ಪಾಟೀಲ್ ಮೊದಲ ಪುತ್ರಿ ಸೌಮ್ಯಾ ಅವರನ್ನು ವಿವಾಹವಾಗಿದ್ದರು.

ಸೌಮ್ಯ ಅವರನ್ನು ಮದುವೆಯಾದ ಬಳಿಕ ಪ್ರತಾಪ್ ಕುಮಾರ್, ಬಿ.ಸಿ.ಪಾಟೀಲ್ ಅವರ ಮನೆಯ ಅಳಿಯನಾಗಿ, ಕೃಷಿಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು. ಅವರ ರಾಜಕೀಯ ಕೆಲಸಗಳನ್ನು ಸಹ ನೋಡಿಕೊಳ್ಳುತ್ತಿದ್ದರು. ಸೌಮ್ಯಾರನ್ನು ವಿವಾಹವಾದ ಬಳಿಕ ಹಿರೇಕೆರೂರಿನಲ್ಲಿಯೇ ವಾಸವಿದ್ದರು. ಮಗನಂತೆ ಇದ್ದ ಅಳಿಯ ಪ್ರತಾಪ್ ಕುಮಾರ್ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಬಿಸಿ ಪಾಟೀಲ್ ಶಿವಮೊಗ್ಗಕ್ಕೆ ಬಂದಿದ್ದಾರೆ.

ಬಿ. ಸಿ. ಪಾಟೀಲ್ ಅಳಿಯ ಕೆ.ಜಿ.ಪ್ರತಾಪ್ ಕುಮಾರ್ (41) ಯಾವ ಕಾರಣಕ್ಕೆ ಇಂತಹ ನಿರ್ಧಾರಕ್ಕೆ ಮುಂದಾದರು ಅನ್ನೋದು ಇನ್ನೂ ಗೊತ್ತಿಲ್ಲ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

More from Filmibeat

English summary
BC Patil Son-in-Law Prathap Kumar Suicide near Davangere
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X