»   » 'ಅಕಿರ' ಖ್ಯಾತಿಯ ನಟನಿಗೆ ಹುಟ್ಟುಹಬ್ಬದ ಸಂಭ್ರಮ

'ಅಕಿರ' ಖ್ಯಾತಿಯ ನಟನಿಗೆ ಹುಟ್ಟುಹಬ್ಬದ ಸಂಭ್ರಮ

Written By:
Subscribe to Filmibeat Kannada

'ನಮ್‌ ಎರಿಯಲ್‌ ಒಂದ್ ದಿನ' ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಶೈನ್‌ ಡ್ಯಾನ್ಸರ್ 'ಅನಿಶ್ ತೇಜೇಶ್ವರ್' ಬೆಳ್ಳಿ ತೆರೆಯಲ್ಲಿ ಹೆಚ್ಚಾಗಿ ಗುರುತಿಸಿ ಕೊಂಡಿದ್ದು 'ಅಕಿರ' ಚಿತ್ರದ ಮೂಲಕ.['ಅಕಿರ' ವಿಮರ್ಶೆ: ಪ್ರೀತಿ-ಗೀತಿ, ಸೆಂಟಿಮೆಂಟ್ ವಗೈರ ವಗೈರ]

anish teheswar

'ನೀನೇ ಬರೀ ನೀನೇ', ಪೊಲೀಸ್ ಕ್ವಾಟರ್ಸ್' ನಂತಹ ಸಿನಿಮಾಗಳಲ್ಲಿ ಅಭಿನಯಿಸಿದರು 'ಅನಿಶ್ ತೇಜಶ್ವರ್' ಗೆ ಬ್ರೇಕ್‌ ಕೊಟ್ಟಿದ್ದು ಮಾತ್ರ ಬಿಗ್‌ ಬಜೆಟ್ ಸಿನಿಮಾ 'ಅಕಿರ'. ನಾರ್ವೆ ಸೇರಿದಂತೆ ಕಣ್ಣು ಕೋರೈಸುವ ಸುಂದರ ತಾಣಗಳಲ್ಲಿ ಅನಿಶ್ ತೇಜೇಶ್ವರ್ ಅಭಿನಯದ ಈ ಚಿತ್ರವನ್ನು ಚಿತ್ರೀಕರಣ ಮಾಡಲಾಗಿತ್ತು. ಸರಿ.. ಅನಿಶ್ ಬಗ್ಗೆ ಇಷ್ಟೆಲ್ಲಾ ಏಕೆ ಪೀಠಿಕೆ ಅನ್ನೋ ಪ್ರಶ್ನೆ ನಿಮ್ಮಲ್ಲಿ ಶುರುವಾಗಿರಬಹುದು ಅಲ್ವಾ? ಅವರ ಬಗ್ಗೆ ಹೇಳಲು ಕಾರಣ ಇಷ್ಟೆ. ಇಂದು (ಜನವರಿ 12) ಅನಿಶ್ ತೇಜೇಶ್ವರ್ ಹುಟ್ಟು ಹಬ್ಬ.[ಶಂಕರ್ ನಾಗ್ ಹುಟ್ಟೂರಿನ ಕಥೆ ಹೇಳುತ್ತಾ 'ನಾಗರಕಟ್ಟೆ'?]


anish tejeswar

ಕನ್ನಡ ಫಿಲ್ಮಿಬೀಟ್ ಕಡೆಯಿಂದ 'ಅನಿಶ್ ತೇಜೇಶ್ವರ್' ಗೆ ಹುಟ್ಟು ಹಬ್ಬದ ಶುಭಾಶಯಗಳು. ಇಂದು ಅನಿಶ್ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಫೇಸ್‌ಬುಕ್‌ ಲೈವ್ ನಲ್ಲಿ ಸಂಜೆ 7 ಗಂಟೆಗೆ ಸಿಗಲಿದ್ದಾರಂತೆ. ಯಾರು ಬೇಕಾದರು ಅವರ ಜೊತೆ ಮಾತನಾಡಬಹುದು. ಅಂದಹಾಗೆ ಈ ವರ್ಷ ಅನಿಶ್ ತೇಜೇಶ್ವರ್ ಅಭಿನಯದಲ್ಲಿ ಮೂಡಿಬರಲಿರುವ 'ಮಾಂಜಾ' ಸಿನಿಮಾಗೆ ಬೆಸ್ಟ್ ಆಫ್‌ ಲಕ್.

English summary
Kannada Film Actor Anish Tejeswar made a debut with 2010 Kannada film Namm Areal Ondh Dina. Today he was celebrating his Birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada