For Quick Alerts
ALLOW NOTIFICATIONS  
For Daily Alerts

  'ಅಕಿರ' ವಿಮರ್ಶೆ: ಪ್ರೀತಿ-ಗೀತಿ, ಸೆಂಟಿಮೆಂಟ್ ವಗೈರ ವಗೈರ

  By Suneetha
  |

  ಶ್ರೀಮಂತ ಕುಟುಂಬದಲ್ಲಿ ಹುಟ್ಟುವ ನಾಯಕ ಅಖಿಲ್ ರಾಜ್ (ಅನೀಶ್ ತೇಜೇಶ್ವರ್) ಗೆ ಎಲ್ಲರೂ ಪ್ರೀತಿಯಿಂದ ಅಖಿಲ್ ಅಂತಾನೇ ಕರೆದರೆ, ನಾಯಕನ ಅಮ್ಮ ಮಾತ್ರ 'ಅಕಿರ' ಅಂತ ಕರೆಯುತ್ತಾರೆ.

  'ಅಕಿರ' ಹೆಸರಿನ ಅರ್ಥ ಏನಮ್ಮಾ ಅಂತ ಆ ಪುಟ್ಟ ಮಗು ಕೇಳಿದಾಗ ಅಮ್ಮ ಆ ಹೆಸರಿನ ಅರ್ಥ ಹೇಳಿದರೂ ಆ ಮುಗ್ದ ಮನಸ್ಸಿಗೆ ಆವಾಗ ಹೆಸರಿನ ಅರ್ಥ ತಿಳಿದಿರೋದಿಲ್ಲ. ತದನಂತರ ದೊಡ್ಡವನಾದ ಮೇಲೆ ಅದರ ಅರ್ಥ ಹುಡುಕುತ್ತಾ ಹೊರಟ ನಾಯಕ ಎಲ್ಲೆಲ್ಲೋ ಎಡವಿ ಬಿದ್ದು ಹಲವಾರು ಅನಾಹುತ ಮಾಡಿಕೊಳ್ಳುತ್ತಾನೆ.['ಫಿಲ್ಮಿಬೀಟ್' ವಿಶೇಷ; 'ಅಕಿರ' ನಾಯಕ ಅನೀಶ್ ಸಂದರ್ಶನ]

  ಪ್ರೀತಿ-ಗೀತಿ ಅಂತ ಹಿಂದೆ ಸುತ್ತುವ ನಾಯಕನ ಕೈಗೆ ಕೊನೆಗೆ ಏನು ದೊರೆಯುತ್ತೆ? ಮುಂದೆನಾಗುತ್ತೆ ಅನ್ನೋದನ್ನು ನೀವು ಚಿತ್ರಮಂದಿರದಲ್ಲೇ ನೋಡಿದರೆ ಚೆಂದ.

  'ನೀನೇ ಬರೀ ನೀನೇ' ಚಿತ್ರದ ನಂತರ ಒಂದು ವರ್ಷದ ಬಳಿಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಪ್ರತ್ಯಕ್ಷವಾಗಿರುವ ಅನೀಶ್ ತೇಜೇಶ್ವರ್ ಅವರು 'ಅಕಿರ' ಚಿತ್ರದ ಮೂಲಕ ಡ್ಯಾನ್ಸ್ ನಲ್ಲಿ ಅಕ್ಷರಶಃ ಶೈನ್ ಆಗಿದ್ದಾರೆ.[ನಾಲ್ಕು ತಿಂಗಳಲ್ಲಿ ನಾಲ್ಕೇ ಸಲ ಊಟ ಮಾಡಿದ್ರಂತೆ ಅನಿಶ್]

  'ಅಕಿರ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  Rating:
  3.0/5

  ಚಿತ್ರ: 'ಅಕಿರ'
  ನಿರ್ಮಾಣ: ಚೇತನ್, ಶ್ರೀಕಾಂತ್ ಪ್ರಸನ್ನ, ಎಸ್ ಎಸ್ ರೆಡ್ಡಿ
  ಕಥೆ-ಚಿತ್ರಕಥೆ-ನಿರ್ದೇಶನ: ನವೀನ್ ರೆಡ್ಡಿ
  ಸಂಗೀತ: ಅಜನೀಶ್ ಲೋಕನಾಥ್
  ಛಾಯಾಗ್ರಹಣ: ಯೋಗಿ
  ತಾರಾಗಣ: ಅನೀಶ್ ತೇಜೇಶ್ವರ್, ಕೃಷಿ ತಾಪಂಡ, ಅದಿತಿ ರಾವ್, ಅವಿನಾಶ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ವಿಶೇಷ ಪಾತ್ರದಲ್ಲಿ ಸಿಂಧು ಲೋಕನಾಥ್ ಮತ್ತು ಮುಂತಾದವರು.
  ಬಿಡುಗಡೆ: ಮೇ 6.

  ಚಿತ್ರದ ಕಥೆ ಏನು?

  ವಿದೇಶದಲ್ಲಿ ಓದು ಮುಗಿಸಿ ವಾಪಸ್ ಬೆಂಗಳೂರಿಗೆ ಬಂದು, ಇಲ್ಲಿ ಹುಡುಗಿಯೊಬ್ಬಳ ಪ್ರೀತಿಯಲ್ಲಿ ಸಿಲುಕಿ, ಆಕೆಯಿಂದ ದೂರವಾಗಿ, ಆಕೆಯ ಬಾಲ್ಯ ಗೆಳತಿಯ ಕೈಗೆ ಸಿಕ್ಕಿ ಅವಳ ಪ್ರೀತಿ ಗಳಿಸಿ ಕೊನೆಗೆ ಇಬ್ಬರೂ ತನ್ನ ಜೀವನದಲ್ಲಿ ಇಲ್ಲ, ಎಲ್ಲವೂ ಖಾಲಿ ಖಾಲಿ ಎಂದು ಕೈ ಚೆಲ್ಲಿ ಕುಳಿತುಕೊಳ್ಳುವ ಶ್ರೀಮಂತ ಹುಡುಗ ಅಖಿಲ್ ರಾಜ್ (ಅನೀಶ್ ತೇಜೇಶ್ವರ್) ಸುತ್ತು ಸುತ್ತುವ ಇಡೀ ಕಥೆಯೇ 'ಅಕಿರ'.[ಈ ವಾರ ತೆರೆಗೆ ಬರುತ್ತಿದೆ ಬಹುನಿರೀಕ್ಷಿತ ಸಿನಿಮಾ 'ಅಕಿರ']

  ಬ್ರೇಕ್ ಅಪ್ ನಲ್ಲಿ ಸಿನಿಮಾ ಶುರು

  ನಾರ್ವೆ ದೇಶದಲ್ಲಿ ಒಬ್ಬಂಟಿಯಾಗಿ ಕುಳಿತು ತನ್ನ ಫ್ಲ್ಯಾಶ್ ಬ್ಯಾಕ್ ಕಥೆಯನ್ನು ಪ್ರೇಕ್ಷಕರಿಗೆ ಎಳೆ-ಎಳೆಯಾಗಿ ಬಿಡಿಸಿಡುತ್ತಾ ಹೋಗುತ್ತಾನೆ ಚಿತ್ರದ ನಾಯಕ ಅಖಿಲ್ ರಾಜ್. ಸಿನಿಮಾ ಶುರುವಾಗುವಾಗಲೇ ಮದುವೆಗೆಂದು ಹಾರ ಕೈಯಲ್ಲಿ ಹಿಡಿದು ಬರುವ ನಾಯಕ ಅಖಿಲ್ ಗೆ ಆಘಾತ ಕಾದಿರುತ್ತದೆ. ಯಾಕೆಂದರೆ ಪ್ರೇಯಸಿ ಸಾಹಿತಿ (ಅದಿತಿ ರಾವ್) ಪ್ರೇಮ ನಿರಾಕರಿಸಿ ವಾಪಸ್ ಹೊರಟು ಹೋಗುತ್ತಾಳೆ.['ಅಕಿರ' ಚಿತ್ರದ ಕಥೆಗೆ ಕ್ಲೀನ್ ಬೌಲ್ಡ್ ಆದ ನಾಯಕಿಯರು.!]

  ಜೀವನವೇ ಬೇಸರ

  ಇದರಿಂದ ಮನನೊಂದ ನಾಯಕನಿಗೆ ಇಡೀ ಜೀವನವೇ ಬೇಸರವಾಗಿ ದುಃಖ ಮರೆಯಲು ಸ್ನೇಹಿತರ ಜೊತೆ ಗೋವಾಕ್ಕೆ ಹೊರಡುತ್ತಾನೆ. ಅಲ್ಲಿ ನಾಯಕನಿಗೆ ತನ್ನದೇ ರೀತಿಯಲ್ಲಿ ಪ್ರೀತಿ ಮುರಿದುಕೊಂಡು ಬಂದಿರುವ ಲವ್ ಅಲಿಯಾಸ್ ಲಾವಣ್ಯ (ಕೃಷಿ ತಾಪಂಡ) ಸಿಗುತ್ತಾಳೆ. ಅಲ್ಲಿಂದ ಅವರಿಬ್ಬರ ಸ್ನೇಹ ಶುರುವಾಗುತ್ತದೆ.

  ಶಾಕ್ ಮತ್ತು ಸರ್ ಪ್ರೈಸ್

  ಗೋವಾದಿಂದ ಒಂದು ವಾರಗಳ ಬಳಿಕ ಮತ್ತೆ ಬೆಂಗಳೂರಿಗೆ ವಾಪಸಾಗುವ ನಾಯಕ ಅಖಿಲ್ ಗೆ ಅಲ್ಲೊಂದು ಶಾಕ್ ಮತ್ತು ಸರ್ ಪ್ರೈಸ್ ಕಾದಿರುತ್ತದೆ. ತನ್ನ ತಂದೆ (ಅವಿನಾಶ್) ಮಗನಿಗೆ ಬುದ್ದಿ ಕಲಿಸಬೇಕೆಂದು ಮನೆಯಿಂದ ಆಚೆ ಹಾಕಿ ಕಾರು ಕಿತ್ತುಕೊಳ್ಳುತ್ತಾರೆ. ಇದರಿಂದ ಅಕ್ಷರಶಃ ಬೀದಿ ಬಸವಣ್ಣ ಆಗುವ ಅಖಿಲ್ ಮುಂದೇನು ಮಾಡುತ್ತಾನೆ ಅನ್ನೋದು ಬಾಕಿ ಉಳಿದಿರುವ ಕಥೆ.

  ಪಕ್ಕಾ ಲವ್ ಕಮ್ ರೋಮ್ಯಾಂಟಿಕ್ ಸಿನಿಮಾ

  ಆರಂಭದಲ್ಲಿ ಒಂಚೂರು ಫೈಟ್ ಬಿಟ್ಟರೆ, ಇನ್ನುಳಿದಂತೆ ಪಕ್ಕಾ ಲವ್ ಕಮ್ ರೋಮ್ಯಾಂಟಿಕ್ ಜೊತೆಗೆ ಬ್ರೇಕ್ ಅಪ್ ಇರೋ 'ಅಕಿರ' ಸಿನಿಮಾ ಸಂಫೂರ್ಣ ಹಾಡುಮಯವಾಗಿದೆ ಅಂದರೆ ತಪ್ಪಾಗಲ್ಲ.

  ಅನೀಶ್ ತೇಜೇಶ್ವರ್ ನಟನೆ?

  'ಪೊಲೀಸ್ ಕ್ವಾರ್ಟಸ್' ಚಿತ್ರದ ಖ್ಯಾತಿಯ ನಟ ಅನೀಶ್ ಅವರು ಪಕ್ಕಾ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲು ತಮ್ಮ ಕೈಮೀರಿ ಪ್ರಯತ್ನ ಮಾಡಿದ್ದಾರೆ. ಚೂರೇ ಚೂರು ಫೈಟ್ ಇದ್ದರೂ ಅದನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಇನ್ನುಳಿದಂತೆ ಸಖತ್ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದ್ದು, ಡ್ಯಾನ್ಸ್ ಪ್ರೀಯರಿಗೆ ಖಂಡಿತ ಅನೀಶ್ ಹಿಡಿಸುತ್ತಾರೆ.

  ನಟಿ ಅದಿತಿ ರಾವ್ ಹೇಗೆ?

  ಚಿತ್ರದಲ್ಲಿ ಸಾಹಿತಿ ಎಂಬ ಹೆಸರಿನಲ್ಲಿ ನಾಯಕ ಅಖಿಲ್ ಮನಗೆಲ್ಲುವ 'ಡವ್' ಚಿತ್ರದ ಖ್ಯಾತಿಯ ನಟಿ ಅದಿತಿ ರಾವ್ ಅವರು ತಮ್ಮ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತೆರೆಯ ಮೇಲೆ ಇದ್ದಷ್ಟು ಹೊತ್ತು ತಮ್ಮ ನಟನೆಯ ಮೂಲಕ ಪ್ರೇಕ್ಷಕರಿಗೆ ಬೋರಾಗದಂತೆ ಕಾಪಾಡಿದ್ದಾರೆ.

  ನಟಿ ಕೃಷಿ ತಾಪಂಡ ಒಕೆನಾ?

  ನಾಯಕ ಅಖಿಲ್ ರೋಡಿಗೆ ಬಿದ್ದಾಗ ಆತನ ಸ್ನೇಹಿತೆಯಾಗಿ ಆತನ ಪ್ರತಿಯೊಂದು ಬೇಕು-ಬೇಡಗಳನ್ನು ನೋಡಿಕೊಳ್ಳುವ ಲಾವಣ್ಣ ಅಲಿಯಾಸ್ ಲವ್ ತಮ್ಮ ಖಿಲಾಡಿ ಅಭಿನಯದ ಮೂಲಕ ಮನೆಗೆಲ್ಲುತ್ತಾರೆ. ಆದರೆ ನಟನೆಯಲ್ಲಿ ಇನ್ನೂ ಪಳಗಬೇಕು ಅನ್ನೋದು ಅಲ್ಲಲ್ಲಿ ಸ್ಪಷ್ಟವಾಗುತ್ತಿತ್ತು.

  ಇನ್ನುಳಿದವರು?

  ಉಳಿದಂತೆ ನಾಯಕನ ತಂದೆಯ ಪಾತ್ರ ವಹಿಸಿದ ಅವಿನಾಶ್ ಅವರು ತಮಗೆ ವಹಿಸಿದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ರಾಜಕೀಯ ವ್ಯಕ್ತಿಯಾಗಿ ರಂಗಾಯಣ ರಘು ತೆರೆಯ ಮೇಲೆ ಸ್ವಲ್ಪ ಹೊತ್ತು ಇದ್ದರೂ ಪ್ರೇಕ್ಷಕರ ಗಮನವನ್ನು ಜಾಸ್ತಿ ಸೆಳೆದಿದ್ದಾರೆ.

  ಕಾಮಿಡಿ ಇಲ್ಲವೇ ಇಲ್ಲ

  ಒಂದೇ ದೃಶ್ಯದಲ್ಲಿ ಬುಲೆಟ್ ಪ್ರಕಾಶ್ ಅವರು ಹಾಗೆ ಬಂದು ಹೀಗೆ ಹೋಗಿ ಕಾಮಿಡಿ ಮಾಡಿ ಹೋಗೋದು ಬಿಟ್ಟರೆ ರಂಗಾಯಣ ರಘು ಸ್ವಲ್ಪ ನಗಿಸುತ್ತಾರೆ. ಇನ್ನುಳಿದಂತೆ ಇಡೀ ಚಿತ್ರದಲ್ಲಿ ಕಾಮಿಡಿ ಅಷ್ಟೊಂದು ಇಲ್ಲವೇ ಇಲ್ಲ.

  ಬರೀ ಲವ್ ಸೆಂಟಿಮೆಂಟ್

  ಆಕ್ಷನ್-ಕಾಮಿಡಿ ಅನ್ನೋ ಪದಗಳು ಈ ಚಿತ್ರದಲ್ಲಿ ಇಲ್ಲವೇ ಇಲ್ಲ. ಅಪ್ಪಟ ಲವ್ ಸೆಂಟಿಮೆಂಟ್, ಕಣ್ಣೀರು, ಬ್ರೇಕ್ ಅಪ್ ವಗೈರ ವಗೈರ.

  ಸಂಗೀತ ಹೇಗಿದೆ?

  ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತಕ್ಕೆ ಸ್ವಲ್ಪ ಮಾರ್ಕ್ಸ್ ಕೊಡಬಹುದು. ಸರಿಯಾದ ಸನ್ನಿವೇಶಗಳಲ್ಲಿ ಹಾಡು ಇದ್ದರೂ ಕೂಡ, ನೋಡುವ ಪ್ರೇಕ್ಷಕರಿಗೆ ಅಲ್ಲಲ್ಲಿ ಹಾಡುಗಳನ್ನು ತುರುಕಿದಂತೆ ಭಾಸವಾಗುತ್ತಿತ್ತು. ಪುನೀತ್ ಅವರು ಹಾಡಿರುವ 'ಕಣ್ಣ ಸನ್ನೆಯಿಂದಲೇನೇ' ಹಾಡು ಕೊಂಚ ಗುನುಗುವಂತಿದೆ. ಬಿಟ್ಟರೆ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚೆನ್ನಾಗಿದೆ.

  ಪ್ಲಸ್-ಮೈನಸ್ ಪಾಯಿಂಟ್

  ಪದೇ ಪದೇ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಪ್ರೇಕ್ಷಕರನ್ನು ಅಲ್ಲಲ್ಲಿ ಕನ್ ಫ್ಯೂಸ್ ಮಾಡಿದ್ದಾರೆ. ಹಾಗೂ ಇಡೀ ಚಿತ್ರದಲ್ಲಿ ಬರೀ ಹಾಡುಗಳೇ ತುಂಬಿಕೊಂಡಿರುವುದು ಚಿತ್ರದ ಮೈನಸ್ ಪಾಯಿಂಟ್. ಚಿತ್ರದ ಆರಂಭದಿಂದ ಅಂತ್ಯದವರೆಗೂ ಯಾರ ನಟನೆಯೂ ಅತಿರೇಕ ಎನಿಸದೇ ಇರೋದು ಇಡೀ ಚಿತ್ರದ ಪ್ಲಸ್ ಪಾಯಿಂಟ್.

  'ಅಕಿರ' ಹೆಸರಿನ ಅರ್ಥ

  'ಒಬ್ಬ ವ್ಯಕ್ತಿ ತನ್ನ ನೋವು-ನಲಿವು, ಆಸೆ-ಆಕಾಂಕ್ಷೆ, ಕೋಪ-ಹತಾಶೆ, ಪ್ರೀತಿ-ಪ್ರೇಮ, ಎಲ್ಲವನ್ನೂ ತ್ಯಾಗ ಮಾಡಿ ಬೇರೆಯವರು ಚೆನ್ನಾಗಿರಬೇಕೆಂದು ಬಯಸುತ್ತಾರೋ ಅಂತವರಿಗೆ 'ಅಕಿರ' ಎನ್ನುತ್ತಾರೆ ಅಂತ ನಾಯಕನ ಅಮ್ಮ ವಿವರಿಸುತ್ತಾರೆ.

  ಕೊನೆಯ ಮಾತು..

  ಪಕ್ಕಾ ಲವ್ ಸ್ಟೋರಿ ಆಧಾರಿತ ಸಿನಿಮಾ. ಪ್ರೇಮಿಗಳು ತಮ್ಮ-ತಮ್ಮ ನಡುವೆ ಸುಖಾ-ಸುಮ್ಮನೆ ಯಾಕೆ ಜಗಳ ಬರುತ್ತೆ ಅನ್ನೋದನ್ನ ಈ ಸಿನಿಮಾ ನೋಡಿ ಅರ್ಥ ಮಾಡಿಕೊಳ್ಳಬಹುದು. ಮಾತ್ರವಲ್ಲದೆ ತಪ್ಪು ಅರ್ಥಗಳಿಂದ ಸಂಬಂಧಗಳು ದೂರವಾಗುತ್ತದೆ ಅನ್ನೋದು ಈ ಚಿತ್ರದಲ್ಲಿ ಸ್ಪಷ್ಟವಾಗಿದೆ. ಅಡ್ಡಿ ಇಲ್ಲ ಪ್ರೇಮಿಗಳು ಹಾಗೂ ಇಡೀ ಫ್ಯಾಮಿಲಿ ಒಂದಾಗಿ ಕುಳಿತು ನೋಡಬಹುದಾದ ಸಿನಿಮಾ. ಫ್ರೀ ಇದ್ದರೆ ಒಂದು ಬಾರಿ ನೋಡಿ.

  English summary
  'Akira'-Kannada Movie Review. A Kannada Film directed by Naveen Reddy. Kannada Actor Anish Tejeshwar, Actress Adithi Rao, Actress Krishi Thapanda are in the lead role.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more