Happy Birthday Darshan: ನಟ ದರ್ಶನ್‌ಗೆ ಹುಟ್ಟುಹಬ್ಬದ ಸಂಭ್ರಮ: 45ನೇ ವಸಂತಕ್ಕೆ ಕಾಲಿಟ್ಟ ದಾಸ!

ಇಂದು ನಟ ದರ್ಶನ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಮೂಲಕ ದರ್ಶನ್ 45ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದರ್ಶನ್ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು, ಮತ್ತು ಪ್ರೀತಿ ಪಾತ್ರರಿಂದ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ.

ಈ ಬಾರಿ ಕೂಡ ನಟ ದರ್ಶನ್ ಅವರು ಅದ್ದೂರಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ.‌ ಕೊರೊನಾ ಕಾರಣಕ್ಕೆ ಕಳೆದ‌ ಬಾರಿಯೂ ಅವರು ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.

ನಟ ದರ್ಶನ್ ಹುಟ್ಟುಹಬ್ಬದ ವಿಶೇಷ: ದಾಖಲೆ ಬರೆದ CDP!
ದರ್ಶನ್ ಬರ್ತ್‌ಡೇ ದಿನ ಬಂತೂ ಅಂದ್ರೆ ಸಾಕು ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಮನೆ ಮುಂದೆ ಜಮಾಯಿಸಿಬಿಡುತ್ತಾರೆ. ಕೇಕ್, ಹೂವಿನ ಹಾರ ಹಿಡಿದು ಬೆಳಗಾಗುವವರೆಗೂ ನಿಂತು ಬಿಡುತ್ತಾರೆ. ದರ್ಶನ್ ಕೂಡ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ. ಆದರೆ, ದರ್ಶನ್ ಈ ರೀತಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಇಂದು ಫೆಬ್ರವರಿ 16 ದರ್ಶನ್ 45ನೇ ಬರ್ತ್‌ಡೇ ಆಚರಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳಿಗಾಗಿ ವಿಡಿಯೋ ಮೂಲಕ ಸಂದೇಶ ರವಾನೆ ಮಾಡಿದ್ದಾರೆ.

Actor Challenging Star Darshan Celebrating 45th Birthday
ಅಭಿಮಾನಿಗಳ ಜೊತೆ ದರ್ಶನ್ ಬರ್ತ್‌ಡೇ ಆಚರಣೆ ಇಲ್ಲ!

ದರ್ಶನ್ ಹುಟ್ಟುಹಬ್ಬದಂದು ದೂರ ದೂರದ ಊರಿಂದ ಅಭಿಮಾನಿಗಳು ಬರುತ್ತಾರೆ. ಆದರೆ, ಕಳೆದ 2 ವರ್ಷಗಳಿಂದ ದರ್ಶನ್ ಅಭಿಮಾನಿಗಳನ್ನು ಹುಟ್ಟುಹಬ್ಬದಂದು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಕೂಡ ಬರ್ತ್‌ಡೇ ಆಚರಿಸಿಕೊಳ್ಳದೆ ಇರಲು ನಿರ್ಧರಿಸಿದ್ದಾರೆ. "ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ. 2021ರ ಕರಾಳ ದಿನಗಳು ಮತ್ತೆ ಮರುಕಳಿಸದಿರಲಿ, ಕೋವಿಡ್ ಇಂದ ಸಂಪೂರ್ಣವಾಗಿ ನಮ್ಮ ಜನತೆ ಚೇತರಿಸಿಕೊಳ್ಳಲಿ ಎಂಬ ಕಾರಣದಿಂದ ನನ್ನ ಹುಟ್ಟುಹಬ್ಬವನ್ನು ಈ ಬಾರಿಯೂ ಸಹ ಸರಳವಾಗಿರಲೆಂದು ನಿರ್ಧರಿಸಿದ್ದೇನೆ. ಈ ಬಾರಿಯೂ ಬೆಂಗಳೂರಿನಲ್ಲಿ ನಾನು ಈ ಸಮಯದಲ್ಲಿರುವುದಿಲ್ಲ. ಬಹಳಷ್ಟು ದೂರದಿಂದ ಮನೆಯ ಹತ್ತಿರ ಬಂದು ನಿರಾಶರಾಗದಿರಿ. ನಿಮ್ಮೆಲ್ಲರನ್ನು ನೋಡಿ ಮುಖಾಮುಖಿಯಾಗುವ ಹಂಬಲವೂ ನನಗೂ ಸಾಕಷ್ಟಿದೆ. ಇವೆಲ್ಲದಕ್ಕೂ ಸದ್ಯದ ಪರಿಸ್ಥಿತಿ ಸೂಕ್ತವಲ್ಲವೆಂಬುದು ನನ್ನ ಭಾವನೆ. ಆದಷ್ಟು ಬೇಗ ನಿಮ್ಮೆಲ್ಲರನ್ನು ಭೇಟಿ ಮಾಡುವೆ ಎಂದು ನಂಬಿದ್ದೇನೆ. ನನ್ನ ಬಗ್ಗೆ ಇಷ್ಟೆಲ್ಲಾ ಪ್ರೀತಿ ಅಭಿಮಾನ ಇಟ್ಟಿರುವ ನೀವು ನನ್ನ ಈ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ." ದರ್ಶನ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

More from Filmibeat

English summary
Actor Challenging Star Darshan Turns 45 On This Birthday
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X