"ಬಜರಂಗದಳದ ಹುಡುಗರನ್ನು ಬದಲಿಸಿ ಇಲ್ಲ ಬಾರಿಸಿ": "ಮಾಜಿ ಡಾನ್‌ನಿಂದ ಅಹಿಂಸೆ ನಿರೀಕ್ಷಿಸಲು ಸಾಧ್ಯವೇ?" ಎಂದ ಚೇತನ್
'ಆದಿನಗಳು' ನಟ ಚೇತನ್ ಕುಮಾರ್ ಸಿನಿಮಾಗಿಂತ ಹೆಚ್ಚಾಗಿ ಹೋರಾಟಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅಕ್ರಮ, ಅಸಮಾನತೆ, ಹಿಂಸೆ ವಿರುದ್ಧ ಸಮರ ಸಾರಿದ್ದಾರೆ. ಈ ಹಿಂದೆ ಕೂಡ ಹಲವರ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದರು. ಈಗ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಅವರಿಗೆ ತಿರುಗೇಟು ನೀಡುತ್ತಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಅವರ ವಿರುದ್ಧ ಟೀಕೆ ಮಾಡುತ್ತಿದ್ದರು. ಅವರ ಕಾರ್ಯ ವೈಖರಿಯನ್ನು ವಿರೋಧಿಸಿದ್ದರು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರ ವಿರುದ್ಧವೂ ಸಮರ ಮುಂದುವರೆಸಿದ್ದಾರೆ. ಈ ಮಧ್ಯೆ ಸಿನಿಮಾಗೆ ಅವಕಾಶ ಕೊಟ್ಟ ಅಗ್ನಿಶ್ರೀಧರ್ ವಿರುದ್ಧವೂ ಕಿಡಿ ಕಾರಿದ್ದಾರೆ.

ಅಷ್ಟಕ್ಕೂ ಅಗ್ನಿ ಶ್ರೀಧರ್ ವಿರುದ್ಧ ಚೇತನ್ ತಿರುಗಿಬಿದ್ದಿದ್ದೇಕೆ? ಅಗ್ನಿ ಶ್ರೀಧರ್ ಅಂತಹದ್ದೇನು ಹೇಳಿಕೆ ಕೊಟ್ಟಿದ್ದಾರೆ? ಮಾಜಿ ಡಾನ್, ಅಹಿಂಸೆ ಹೀಗೆ ಕಿಡಿ ಕಾರಿದ್ದೇಕೆ ಚೇತನ್ ಅಹಿಂಸಾ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಅಗ್ನಿ ಶ್ರೀಧರ್‌ಗೆ ಚೇತನ್ ತಿರುಗೇಟು
ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಅದರಲ್ಲೂ ಫೇಸ್‌ಬುಕ್ ಮೂಲಕ ಕೆಲವು ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಕೆಲವರ ವಿರುದ್ಧ ಟೀಕೆ ಮಾಡುತ್ತಾರೆ. ಈಗ ಅಗ್ನಿ ಶ್ರೀಧರ್ ಅವರ ಹೇಳಿಕೆಯನ್ನು ವಿರೋಧಿಸಿ, ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚೇತನ್ ಕುಮಾರ್‌ಗೆ 'ಆದಿನಗಳು' ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದೇ ಅಗ್ನಿಶ್ರೀಧರ್. ಈ ಬಗ್ಗೆ ಹೇಳುತ್ತಲೇ ಅಗ್ನಿ ಶ್ರೀಧರ್ ಅವರು ಇತ್ತೀಚೆಗೆ ದ್ರಾವಿಡ ಪಡೆ ಹಾಗೂ ಬಜರಂಗ ದಳದ ಬಗ್ಗೆ ಕೊಟ್ಟ ಹೇಳಿಕೆಗಳನ್ನು ವಿರೋಧಿಸಿದ್ದಾರೆ. ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಹೇಳಿಕೆಗಳನ್ನು ಖಂಡಿಸಿದ್ದಾರೆ. ಅಷ್ಟಕ್ಕೂ ಚೇತನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಏನಿದೆ? ತಿಳಿಯಲು ಮುಂದೆ ಓದಿ.
"ಮಾಜಿ ಡಾನ್‌ನಿಂದ ಅಹಿಂಸೆ ನಿರೀಕ್ಷಿಸಲು ಸಾಧ್ಯವೇ?"
ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್ ಹೇಳಿದ್ದಾರೆನ್ನಲಾದ ಹೇಳಿಕೆಯನ್ನು ಚೇತನ್ ಪೋಸ್ಟ್ ಮಾಡಿದ್ದರು. "ಪ್ರತಿ ಊರಲ್ಲಿ ದ್ರಾವಿಡ ಪಡೆ ಆರಂಭಿಸಿ, ಬಜರಂಗದ ಹುಡುಗರನ್ನು ಬದಲಿಸಿ ಇಲ್ಲ ಬಾರಿಸಿ" ಎಂದಿರುವ ಅಗ್ನಿ ಶ್ರೀಧರ್ ಹೇಳಿಕೆಯನ್ನು ಪೋಸ್ಟರ್ ಮಾಡಿ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
"ಅಗ್ನಿ ಶ್ರೀಧರ್ ಹೇಳುತ್ತಾರೆ: ಪ್ರತಿ ಊರಿಲ್ಲಿ ದ್ರಾವಿಡ ಪಡೆ ಆರಂಭಿಸಿ; ಬಜರಂಗದಳದ ಹುಡುಗರನ್ನು ಬದಲಿಸಿ, ಇಲ್ಲಾ ಬಾರಿಸಿ. ಶ್ರೀಧರ್ ಅವರು ನನಗೆ ನೀಡಿದ ಚಲನಚಿತ್ರದ ಅವಕಾಶಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಆದರೆ, ಹಿಂಸಾಚಾರಕ್ಕೆ ಅವರ ಈ ಪ್ರಚೋದನೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ. (ಮಾಜಿ) ಭೂಗತ ಲೋಕದ ಡಾನ್‌ನಿಂದ ನಾವು ಎಂದಾದರೂ ಸಾಮಾಜಿಕ ಸದಾಚಾರ ಅಥವಾ ಅಹಿಂಸೆಯನ್ನು (Non Violence) ನಿರೀಕ್ಷಿಸಬಹುದೇ" ಎಂದು ನಟ ಚೇತನ್ ಕುಮಾರ್ ಪ್ರಶ್ನಿಸಿದ್ದಾರೆ.
ಪ್ರತಿಕ್ರಿಯೆ ಏನು?
ಅಗ್ನಿ ಶ್ರೀಧರ್ ವಿರುದ್ಧ ಚೇತನ್ ಕುಮಾರ್ ತಿರುಗಿಬಿದ್ದಿದ್ದಾರೆ. ಈ ಬಗ್ಗೆ ಅಗ್ನಿ ಶ್ರೀಧರ್ ಪ್ರತಿಕ್ರಿಯೆ ಏನು? ಅನ್ನೋದನ್ನು ಇನ್ನಷ್ಟೇ ತಿಳಿಯಬೇಕಿದೆ. ಅಲ್ಲದೇ ಅಗ್ನಿ ಶ್ರೀಧರ್ ಅವರು ಯಾವ ಸಂದರ್ಭದಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಅದರ ಮೂಲ ಉದ್ದೇಶವೇನು? ಅನ್ನೋದನ್ನು ತಿಳಿಯೋದು ಮುಖ್ಯ.
ಚೇತನ್ ಕುಮಾರ್ ಹೇಳಿದ ಮಾಜಿ ಡಾನ್‌ನಿಂದ ಅಹಿಂಸೆ ನಿರೀಕ್ಷೆ ಮಾಡಲು ಸಾಧ್ಯವೇ? ಅನ್ನೋ ಹೇಳಿಕೆಗೆ ಅಗ್ನಿಶ್ರೀಧರ್ ಪ್ರತಿಕ್ರಿಯೆ ಹೇಗಿರುತ್ತೆ? ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆಯೇ ಅನ್ನೋದನ್ನು ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.


Click it and Unblock the Notifications











