Jaggesh: ನವರಸನಾಯಕನ ಪಾದದ ಮೂಳೆ ಮುರಿತ.. 6 ವಾರ ನಡಿಗೆಗೆ ದಿಗ್ಬಂಧನ!

ನವರಸನಾಯಕ ಜಗ್ಗೇಶ್ ಏನಾದರೂ ಒಂದು ಕೆಲಸ ಮಾಡುತ್ತಾ ಬ್ಯುಸಿಯಾಗಿರುತ್ತಾರೆ. ಸಿನಿಮಾ, ರಾಜಕೀಯ ಅಂತ ಓಡಾಡಿಕೊಂಡಿದ್ದ ನಟ ಕೆಲವು ದಿನಗ ಕಾಣೆಯಾಗಿದ್ದರು. ವಿಧಾನಸಭೆ ಚುನಾವಣೆ ಬಳಿಕ ಕೊಂಚ ರಿಲ್ಯಾಕ್ಸ್ ಆಗಿದ್ದ ಜಗ್ಗೇಶ್ ದಿಢೀರನೇ ತಮ್ಮ ಅಭಿಮಾನಿಗಳಿಗೆ ಬೇಸರದ ಸುದ್ದಿ ಕೊಟ್ಟಿದ್ದಾರೆ.

ವಿಧಾನಸಭೆ ಚುನಾವಣೆ ಬಳಿಕ ಜಗ್ಗೇಶ್ ಕೆಲಕಾಲ ಅಮೆರಿಕಾಗೆ ತೆರಳಿದ್ದರು. ಅಲ್ಲಿ ಒಂದಿಷ್ಟು ದಿನ ಪ್ರವಾಸ ಮಾಡಿದ್ದರು. ಕೆಲವೇ ದಿನಗಳ ಹಿಂದಷ್ಟೇ ಬೆಂಗಳೂರಿಗೆ ಹಿಂತಿರುಗಿದ್ದರು. ಆದ್ರೀಗ ಅಚಾತುರ್ಯದಿಂದ ಜಗ್ಗೇಶ್ ಪಾದದ ಮೂಳೆ ಮುರಿದುಕೊಂಡು ವಿಶ್ರಾಂತಿ ಪಡೆಯುತ್ತಿದ್ದಾರೆ.

Actor Cum MP Navarasanayaka Jaggesh injured his leg; the doctor suggested 6-week rest

ತಮ್ಮ ಅಭಿಮಾನಿಗಳಿಗೆ ಜಗ್ಗೇಶ್ ಈ ವಿಷಯವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. "ಸಣ್ಣ ಅಚಾತುರ್ಯ ನಡಿಗೆಯಿಂದ ಪಾದದ ಮೂಳೆ ಮುರಿತ.. 6 ವಾರದ ದಿಗ್ಬಂಧನದ ನಡಿಗೆಗೆ" ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಫ್ಯಾನ್ಸ್‌ಗೆ ವಿಷಯ ಮುಟ್ಟಿಸಿದ ಜಗ್ಗೇಶ್

ಇದೇ ಟ್ವೀಟ್‌ನಲ್ಲಿ ಜಗ್ಗೇಶ್ ಕಾಲಿಗೆ ಪೆಟ್ಟು ಮಾಡಿಕೊಂಡ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ನಡೆಯುವ ವೇಳೆ ಅಚಾನಕ್ ಆಗಿ ಪೆಟ್ಟು ಮಾಡಿಕೊಂಡಿದ್ದು, ವೈದ್ಯರ ಸಲಹೆಯಂತೆ 6 ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಆ ಬಳಿಕ ಮತ್ತೆ ರಾಜಕೀಯ ಹಾಗೂ ಸಿನಿಮಾ ಕೆಲಸಗಳಲ್ಲಿ ಭಾಗಿಯಾಗಲಿದ್ದಾರೆ.

ನವರಸನಾಯಕ ಜಗ್ಗೇಶ್ ಪ್ರತಿ ತಮ್ಮ ಬದುಕಿನ ಪ್ರಮುಖ ಘಟನೆಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಕೆಟ್ಟದ್ದು, ಒಳ್ಳೆಯದ್ದು, ಸುಖ, ದು:ಖ, ಬೇಸರದ ಸಂಗತಿ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಅಂತೆಯೇ ಈ ಪಾದದ ಮೂಳೆ ಮುರಿದ ಬಗ್ಗೆನೂ ಹೇಳಿಕೊಂಡಿದ್ದಾರೆ.

ಓಡುತ್ತಿರೋ ಸುದ್ದಿಯೇನು?

ಜಗ್ಗೇಶ್ ಕಾಲಿಗೆ ಪಟ್ಟು ಮಾಡಿಕೊಂಡ ಸಂಗತಿಯನ್ನು ಹಂಚಿಕೊಳ್ಳುತ್ತಿದ್ದಂತೆ, ನೆಟ್ಟಿಗರು ಹಾಗೂ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬೇಡ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಈ ಮಧ್ಯೆ ಕಾಲಿಗೆ ಪೆಟ್ಟಾಗಿದ್ದೇಕೆ? ಅನ್ನೋ ಬಗ್ಗೆ ಬೇರೆ ಸುದ್ದಿನೇ ಓಡಾಡುತ್ತಿದೆ.

ಚುನಾವಣೆ ಬಳಿಕ ಜಗ್ಗೇಶ್ ಅಮೆರಿಕಾಗೆ ತೆರಳಿದ್ದು ಗೊತ್ತೇ ಇದೆ. ಅಲ್ಲಿಂದ ಹಿಂತಿರುಗುವಾಗ ಜಗ್ಗೇಶ್ ಕಾಲಿಗೆ ಪೆಟ್ಟಾಗಿದೆ ಎಂದು ಕೆಲವರೆಡೆ ವರದಿಯಾಗಿದೆ. ಜಗ್ಗೇಶ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಷ ಮಾಡಿದ್ದರಿಂದ ಕಾಲಿಗೆ ಪೆಟ್ಟಾಗಿದ್ದು, ಇವರೊಂದಿಗೆ ಪ್ರಯಾಣಿಸುತ್ತಿದ್ದ ಹಲವರಿಗೆ ಪೆಟ್ಟಾಗಿದೆ ಎಂದು ಹೇಳಾಗುತ್ತಿದೆ. ಆದರೆ, ಈ ಬಗ್ಗೆ ಜಗ್ಗೇಶ್ ಅಧಿಕೃತ ಮಾಹಿತಿ ನೀಡಿಲ್ಲ.

ಸಿನಿಮಾ-ರಾಜಕೀಯದಲ್ಲಿ ಬ್ಯುಸಿ

ಜಗ್ಗೇಶ್ ತಮ್ಮ ಪತ್ನಿ ಪರಿಮಳ ಅವರೊಂದಿಗೆ ಇತ್ತೀಚೆಗೆ ನೂತನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದರು. ಡಿಕೆಶಿಗೆ ಶುಭ ಹಾರೈಸಿದ್ದರು. ಆ ವೇಳೆ ಅವರ ಕಾಲಿಗೆ ಪೆಟ್ಟಾದಂತೆ ಕಂಡುಬಂದಿಲ್ಲ. ಏನೇ ಇದ್ದರೂ, ಈ ಬಗ್ಗೆ ಜಗ್ಗೇಶ್ ಟ್ವಿಟರ್‌ನಲ್ಲೇ ಮುಂದಿನ ದಿನಗಳಲ್ಲಿ ಸ್ಪಷ್ಟೀಕರಣ ಕೊಡುವ ಸಾಧ್ಯತೆಯಿದೆ.

ಸದ್ಯ ಜಗ್ಗೇಶ್ ಅಭಿನಯದ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಬಿಡುಗಡೆಯಾಗಿದ್ದು, ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಮಧ್ಯೆನೇ ರಾಜ್ಯಸಭಾ ಸದಸ್ಯರೂ ಆಗಿದ್ದು, ರಾಜಕೀಯದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ.

More from Filmibeat

English summary
Actor Cum MP Navarasanayaka Jaggesh injured his leg; the doctor suggested 6-week rest, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X