ಅನಾರೋಗ್ಯಕ್ಕೆ ತುತ್ತಾಗಿದ್ದ ದಾಸ ದರ್ಶನ್ ನೆಚ್ಚಿನ ಬಸವ ಇನ್ನಿಲ್ಲ

ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ನಟ ದರ್ಶನ್ ಅವರ ಪ್ರಚಾರ ಮೆರವಣಿಗೆಗೆ ಅಡ್ಡಗಟ್ಟಿದ್ದ ಚಾಲೆಂಜಿಗ್ ಸ್ಟಾರ್ ಅವರ ಅಚ್ಚುಮೆಚ್ಚಿನ ಬಸವ ಶುಕ್ರವಾರ ನಸುಕಿನಲ್ಲಿ ಸಾವನ್ನಪ್ಪಿದೆ. ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಬಸವ, ನೀರು, ಆಹಾರ ಸೇವಿಸಲಾಗದೆ ಮಲಗಿದ್ದಲ್ಲಿಂದ ಏಳಲಾಗದ ಸ್ಥಿತಿಗೆ ತಲುಪಿತ್ತು. ಅದು ಮತ್ತೆ ಚೇತರಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಹುಸಿಯಾಗಿದೆ.

Recommended Video

ಟ್ವಿಟ್ಟರ್ ನಲ್ಲಿ ದರ್ಶನ್ ಪತ್ನಿ ಬೇಸರ ಹೊರಹಾಕಿದ್ದು ಯಾಕೆ?? | Vijay Lakshmi | Sumalatha Ambareesh

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಷ್ ಪರ ನಟ ದರ್ಶನ್ ಪ್ರಚಾರ ಮಾಡುವ ಸಂದರ್ಭದಲ್ಲಿ ಕೆಆರ್ ನಗರದ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಈ ಬಸವ ರಸ್ತೆಗೆ ಅಡ್ಡಲಾಗಿ ನಿಂತು, ಯಾರೂ ಮುಂದೆ ಹೋಗದಂತೆ ತಡೆದಿತ್ತು. ಜನರು ಅದನ್ನು ಬೆದರಿಸಿ ಓಡಿಸಲು ಪ್ರಯತ್ನಿಸಿದರೂ ಅದು ಜಗ್ಗಿರಲಿಲ್ಲ. ಮುಂದೆ ಓದಿ...

ದರ್ಶನ್ ಸ್ಪರ್ಶಕ್ಕೆ ಸ್ಪಂದಿಸಿದ್ದ ಬಸವ

ದರ್ಶನ್ ಸ್ಪರ್ಶಕ್ಕೆ ಸ್ಪಂದಿಸಿದ್ದ ಬಸವ

ಉದ್ದನೆಯ ಕೊಂಬಿನ ಕಟ್ಟುಮಸ್ತಾದ ಗೂಳಿಯನ್ನು ಮುಟ್ಟಲು ಎಲ್ಲರೂ ಭಯಪಟ್ಟಿದ್ದರು. ಇದನ್ನು ಗಮನಿಸಿದ್ದ ನಟ ದರ್ಶನ್, ಪ್ರಚಾರ ವಾಹನದಿಂದ ಇಳಿದು ಬಂದು ಬಸವನ ಮೈಮುಟ್ಟಿದ್ದರು. ಬಸವ ಒಮ್ಮೆ ರೊಚ್ಚಿಗೆದ್ದಂತೆ ಕಂಡರೂ ದರ್ಶನ್ ಸ್ಪರ್ಧಿಸಿದ ನಂತರ ಯಾವುದೇ ಗದ್ದಲವೆಬ್ಬಿಸದೆ ಪಕ್ಕಕ್ಕೆ ನಡೆದಿತ್ತು.

ವೈರಲ್ ಆಗಿದ್ದ ವಿಡಿಯೋ

ವೈರಲ್ ಆಗಿದ್ದ ವಿಡಿಯೋ

ಬೇರೆ ಯಾವ ಜನರಿಗೂ ಬಗ್ಗದ್ದ ಬಸವ, ದರ್ಶನ್ ಮೈದಡವಿ ಮಾತನಾಡಿಸುತ್ತಿದ್ದಂತೆಯೇ ಅವರಿಗೆ ಗೌರವ ನೀಡಿದಂತೆ ಪಕ್ಕಕ್ಕೆ ಸರಿದು ವಾಹನ ತೆರಳಲು ಅವಕಾಶ ನೀಡಿದ್ದ ವಿಡಿಯೋ ವೈರಲ್ ಆಗಿತ್ತು. ಅಂದಿನಿಂದ ಗ್ರಾಮದಲ್ಲಿ ಈ ಬಸವನಿಗೆ ವಿಶೇಷ ಕಾಳಜಿ ಮಾಡಲಾಗುತ್ತಿತ್ತು.

ಚಿಕಿತ್ಸೆ ನೀಡಿದ್ದರು

ಚಿಕಿತ್ಸೆ ನೀಡಿದ್ದರು

ಆದರೆ ಈ ಬಸವನ ಆರೋಗ್ಯ ಕಳೆದ ಒಂದು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಹದಗೆಟ್ಟಿತ್ತು. ಗ್ರಾಮಸ್ಥರು ಪಶುವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಿದರೂ ಅದು ಚೇತರಿಸಿಕೊಂಡಿರಲಿಲ್ಲ. ಹುಲ್ಲು, ನೀರು ಸೇವಿಸದ ಕಾರಣ ಅದರ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿತ್ತು. ಇದರಿಂದ ಗ್ರಾಮಸ್ಥರು ದರ್ಶನ್ ಬಂದರೆ ಬಸವ ಸರಿಹೋಗುತ್ತಾನೆ ಎಂದು ಅಭಿಪ್ರಾಯಪಟ್ಟಿದ್ದರು.

ಚಿಕಿತ್ಸೆ ಫಲಿಸದೆ ಸಾವು

ಚಿಕಿತ್ಸೆ ಫಲಿಸದೆ ಸಾವು

ದರ್ಶನ್ ಕೂಡ ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಬಸವನ ಚಿಕಿತ್ಸೆಗೆ ನೆರವಾಗಿದ್ದರು. ಆದರೆ ಗ್ರಾಮಕ್ಕೆ ಖುದ್ದಾಗಿ ತೆರಳಿ ಬಸವನನ್ನು ಮಾತನಾಡಿಸಲು ಸಾಧ್ಯವಾಗಿರಲಿಲ್ಲ. ಶುಕ್ರವಾರ ನಸುಕಿನಲ್ಲಿ ಬಸವ ಕಾಳಮ್ಮನ ದೇವಸ್ಥಾನದ ಆವರಣದಲ್ಲಿ ಮೃತಪಟ್ಟಿದೆ.

More from Filmibeat

English summary
The ox which blocked the road of Darshan during Lok Sabha election campaign in Mandya, KR Nagar was died on Friday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X