ಡಿಸ್ಚಾರ್ಜ್ ಆದ ಬಳಿಕ ದರ್ಶನ್ ಮೊದಲ ಪ್ರತಿಕ್ರಿಯೆ

ನಟ ದರ್ಶನ್ ಮೈಸೂರಿನ ಕೊಲಂಬಿಯ ಏಷ್ಯಾ ಆಸ್ಪತ್ರೆಯಿಂದ ಇಂದು ಡಿಸ್ಜಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ದರ್ಶನ್ ಘಟನೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

''ಕಾರಿನಲ್ಲಿ ಆರು ಜನ ಇದ್ದರು ಎಂದು ಸುದ್ದಿ ಬಂತು. ಆದರೆ, ಅದೆಲ್ಲ ಸುಳ್ಳು. ನನ್ನ ಕಾರಿನಲ್ಲಿ ಇರುವುದು 5 ಸೀಟ್. ಅದಕ್ಕೂ ಹೆಚ್ಚು ಜನರನ್ನು ನಾನು ಎಂದು ಕೂರಿಸುವುದಿಲ್ಲ. ತಿರುವಿನಲ್ಲಿ ಕಾರು ಇರುವುದು ಬೇಡ ಎಂದು ಬೇರೆ ಕಡೆ ತೆಗೆದುಕೊಂಡು ಹೋಗಿದ್ದರು. ಈ ಘಟನೆಯ ಬಗ್ಗೆ ಮತ್ತೆ ಸಂಪೂರ್ಣವಾಗಿ ಮಾತನಾಡುತ್ತೇನೆ'' ಎಂದಿದ್ದಾರೆ ದರ್ಶನ್.

ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ ಅವರು ''ನನ್ನನ್ನು ಚೆನ್ನಾಗಿ ನೋಡಿಕೊಂಡ ಡಾಕ್ಟರ್ ಗಳಿಗೆ ಧನ್ಯವಾದ. ಒಂದು ತಿಂಗಳು ವಿಶ್ರಾಂತಿ ಹೇಳಿದ್ದಾರೆ. ಅದರಲ್ಲಿ ಚಿತ್ರದ ಡಬ್ಬಿಂಗ್ ಕೆಲಸಗಳನ್ನು ಮುಗಿಸುತ್ತೇನೆ.'' ಎಂದು ತಿಳಿಸಿದ್ದಾರೆ.

actor darshan spoke about his health condition after discharge

ಉಳಿದಂತೆ, ದರ್ಶನ್ ಗೆ ಚಿಕಿತ್ಸೆ ನೀಡಿದ ಡಾಕ್ಟರ್ ''ದರ್ಶನ್ ಈಗ ಚೆನ್ನಾಗಿದ್ದಾರೆ. ಅವರು ರಿಯಲ್ ಲೈಫ್ ಹೀರೋ. ತುಂಬ ಬೇಗ ಅವರು ಗುಣಮುಖರಾದರು. ಕೈನ ಒಂದು ಜಾಗದಲ್ಲಿ ಮೂಳೆ ಮುರಿದಿದೆ. ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿ ಆಗಿದೆ.'' ಎಂದು ಹೇಳಿದ್ದಾರೆ.

ಘಟನೆಯ ಹಿನ್ನಲೆ :
ಕಳೆದ ಸೋಮವಾರ ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್, ರಾಯ್ ಆಂಟೋನಿ ಕಾರಿನಲ್ಲಿ ಪ್ರಯಾಣ ಮಾಡುವ ವೇಳೆ ಅಪಘಾತಕ್ಕಿಡಾಗಿದ್ದರು. ಮೈಸೂರಿನ ಹೊರ ವಲಯದ ಹಿನಕಲ್ ಬಳಿಯ ರಿಂಗ್ ರಸ್ತೆ ಯಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿತ್ತು.

More from Filmibeat

English summary
Kannada actor Darshan spoke about his health condition. He discharged from Columbia Asia Hospital today (September 29th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X