ಪೊಲೀಸ್ ಕಸ್ಟರಿ ಅಂತ್ಯ; 13 ವರ್ಷಗಳ ಬಳಿಕ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ರನ್ನು ಪೊಲೀಸರು ಬಂಧಿಸಿದ್ದರು. ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಅವರ ಗ್ಯಾಂಗ್ ಅನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಹಿಂದೆ ನ್ಯಾಯಾಧೀಶರ ಬಳಿ ದರ್ಶನ್ ಸೇರಿದಂತೆ ನಾಲ್ಕು ಮಂದಿಯನ್ನು ಕಸ್ಟಡಿಗೆ ನೀಡುವಂತೆ ಪೊಲೀಸ್ ಕೇಳಿಕೊಂಡಿದ್ದರು. ನ್ಯಾಯಾಧೀಶರು ಕೂಡ ಎರಡು ದಿನಗಳ ಕಾಲ ಕಸ್ಟಡಿಗೆ ನೀಡಿದ್ದರು.
ಇಂದು (ಜೂನ್ 22) ಪೊಲೀಸ್ ಕಸ್ಟಡಿ ಮುಗಿದ ಬೆನ್ನಲ್ಲೇ ದರ್ಶನ್ ಸೇರಿದಂತೆ ನಾಲ್ಕು ಮಂದಿಯನ್ನು 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು. ಪೊಲೀಸರು ತನಿಖೆ ಮುಗಿಸಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲು ಸಮ್ಮತಿಸುತ್ತಾರೆ ಎಂಬ ಸುದ್ದಿ ಹಬ್ಬಿಸಲಾಗಿತ್ತು. ನಿರೀಕ್ಷೆಯಂತೆ ದರ್ಶನ್ ಸೇರಿದಂತೆ ಉಳಿದ ಮೂವರಿಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆರೋಪ ಹೊರಡಿಸಿದ್ದಾರೆ.

ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲನೇ ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಎರಡನೇ ಆರೋಪಿ ದರ್ಶನ್ ಸೇರಿದಂತೆ ಪ್ರದೋಶ್, ವಿನಯ್ ಹಾಗೂ ಧನರಾಜ್‌ರನ್ನು ಎರಡು ದಿನ ಹೆಚ್ಚುವರಿಯಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಈಗ ಪೊಲೀಸ್ ಕಸ್ಟಡಿ ಅವಧಿ ಮುಗಿಯುತ್ತಿದ್ದಂತೆ ಜುಲೈ 4ನೇ ತಾರೀಕಿನವರೆಗೂ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ದರ್ಶನ್‌ಗೆ ನ್ಯಾಯಾಂಗ ಬಂಧದ ಹಿನ್ನೆಲೆಯಲ್ಲಿ ದರ್ಶನ್ ಹಾಗೂ ಸಂಗಡಿಗರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿಕೊಡಲಾಗುತ್ತಿದೆ. ಈ ಮೂಲಕ 13 ವರ್ಷಗಳ ಬಗ್ಗೆ ಮತ್ತೆ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದಂತಾಗುತ್ತೆ. ಈ ಹಿಂದೆ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು.
2011ರಲ್ಲಿ ದರ್ಶನ್ ತನ್ನ ಪತ್ನಿ ವಿಜಯಲಕ್ಷ್ಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಈ ಸಂಬಂಧ ದರ್ಶನ್ ಮೇಲೆ ದೂರ ದಾಖಲಾಗಿತ್ತು. ಈ ವೇಳೆ ಕೂಡ ದರ್ಶನ್ 14 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಇಂದು (ಜೂನ್ 22, 2024) ಮತ್ತೆ ಪರಪ್ಪನ ಅಗ್ರಹಾರದ ಜೈಲು ಸೇರಿದ್ದಾರೆ. ಆದರೆ, ಈ ಬಾರಿ 14 ದಿನಗಳಿಗಿಂತಲೂ ಹೆಚ್ಚು ಸಮಯ ಜೈಲಿನಲ್ಲಿ ಕಾಲ ಕಳೆಯಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ದರ್ಶನ್, ಎ 14 ಪ್ರದೋಷ್, ಎ 10 ವಿನಯ್, ಎ 9 ಧನರಾಜ್ ಮೊಬೈಲ್ ಅನ್ನು ಅನ್‌ಸೀಲ್ ಮಾಡಿ ತನಿಖೆ ಮಾಡುವುದಕ್ಕೆ ಪರ್ಮಿಷನ್ ನೀಡಲಾಗಿದೆ. ಈ ಮೂಲಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಪೋನ್‌ನಲ್ಲಿ ಸಿಗಬಹುದೆಂದು ನಿರೀಕ್ಷೆ ಮಾಡಲಾಗಿದೆ.
ಅಲ್ಲದೆ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸೇರಿದಂತೆ ಸಾಕ್ಷಿದಾರರಿಗೆ ದರ್ಶನ್ ಸಹಚರರಿಂದ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ. ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಸಂಬಂಧ ಎರಡು ಗುಂಪುಗಳಾಗಿದೆ. ಈ ಸಂಬಂಧ ಎರಡು ಗುಂಪುಗಳನ್ನು ಪ್ರತ್ಯೇಕ ಜೈಲು ನೀಡಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.


Click it and Unblock the Notifications










