"ಕಾಲ ಸಂದರ್ಭ ನೋಡಿ ಕೊಡ್ತೀವಿ ಅಂತ ಹೇಳಿದ್ದೆ..ಕೊಟ್ಟೇ ಕೊಡ್ತೀವಿ.. ಬಿಡಲ್ಲ"; ಧನ್ವೀರ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಟ ಧನ್ವೀರ್ ಸಿನಿಮಾ 'ಹಯಗ್ರೀವ' ಇತ್ತೀಚೆಗೆ ರಿಲೀಸ್ ಆಗಿತ್ತು. ಆ ಸಿನಿಮಾವೀಗ 25 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಧನ್ವೀರ್ ತಮ್ಮ ತಂಡದೊಂದಿಗೆ ಚಿತ್ರಮಂದಿರದ ಮುಂದೆ 25 ದಿನಗಳ ಸಂಭ್ರಮವನ್ನು ಆಚರಿಸಿದ್ದಾರೆ. ಈ ವೇಳೆ ಧನ್ವೀರ್ ಅವರನ್ನು ನೋಡುವುದಕ್ಕೆ ಅವರ ಅಭಿಮಾನಿ ಬಳಗ ಸೇರಿತ್ತು.
ಧನ್ವೀರ್ ವೃತ್ತಿ ಬದುಕಿನಲ್ಲಿ ಇದು ವಿಶೇಷ ಸಿನಿಮಾ. ಮೊದಲ ಸಿನಿಮಾದಿಂದಲೂ ಮಾಸ್ ಹೀರೋ ಆಗಿಯೇ ಗುರುತಿಸಿಕೊಂಡಿರುವ ಧನ್ವೀರ್ ಈ ಬಾರಿ ಕೊಂಚ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದರು. 'ಹಯಗ್ರೀವ' ಸಿನಿಮಾ ಕೇವಲ ಮಾಸ್ ಸಿನಿಮಾ ಅಷ್ಟೇ ಅಲ್ಲ. ಒಂದೊಳ್ಳೆ ಕಂಟೆಂಟ್ ಅನ್ನು ಇಟ್ಟುಕೊಂಡು ನಿರ್ಮಿಸಿದ ಸಿನಿಮಾ ಆಗಿತ್ತು. ಇಲ್ಲಿವರೆಗೂ ಧನ್ವೀರ್ ಸಿನಿಮಾ ನೋಡಿಕೊಂಡು ಬಂದಿದ್ದ ಪ್ರೇಕ್ಷಕರಿಗೆ ಈ ಸಿನಿಮಾ ವಿಭಿನ್ನವಾಗಿ ಕಂಡಿತ್ತು.

'ಹಯಗ್ರೀವ' ಸಿನಿಮಾ ರಿಲೀಸ್ ದಿನ ಸಾಕಷ್ಟು ಸಮಸ್ಯೆ ಆಗಿತ್ತು. ಸೆನ್ಸಾರ್ ಕಾಪಿ ಸಿಗದೆ, ಮೊದಲ ದಿನವೇ ಎರಡು ಶೋಗಳ ಬಳಿಕ ಸಿನಿಮಾವನ್ನು ರಿಲೀಸ್ ಮಾಡಬೇಕಾಯ್ತು. ಈಗ ಇದರ ಹಿಂದೆ ಯಾರ ಕೈವಾಡವಿದೆಯೋ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದ್ದರು. ಈಗ 25 ದಿನಗಳನ್ನು ಪೂರೈಸಿರುವ ಸಮಯದಲ್ಲಿ ಮತ್ತೆ ಅದೇ ಮಾತನ್ನು ಧನ್ವೀರ್ ಪುರುಚ್ಛರಿಸಿದ್ದಾರೆ. ಅದೇನು ಹೇಳಿದ್ದಾರೆಂದು ನೋಡುವುದಾರೇ,
ಧನ್ವೀರ್‌ಗೆ ತಮ್ಮ ಸಿನಿಮಾ 25 ದಿನಗಳನ್ನು ಪೂರೈಸಿದ್ದಕ್ಕೆ ಖುಷಿಯಿದೆ. ಕಥೆ ಮಾಡುವಾಗಲೇ ಆ ಕಾನ್ಫಿಡೆನ್ಸ್ ಇತ್ತು ಎಂದು ಹೇಳಿದ್ದಾರೆ. "ನಾನು ಥಿಯೇಟರ್‌ಗೆ ಬಂದಾಗ ಅಲ್ಲಿನವರು ಹೇಳುತ್ತಿದ್ದರು. 25 ದಿನಗಳಾಗಿಯೇ ಒಂದೂವರೆ ವರ್ಷ ಆಯ್ತು ಅಂತ. ಕನ್ನಡ ಚಿತ್ರರಂಗಕ್ಕೆ ಇದೊಂದು ಒಳ್ಳೆಯ ಬೆಳವಣಿಗೆ ಅಲ್ವ. ಇದು ನಮ್ಮ ಇಂಡಸ್ಟ್ರಿಗೆ ಒಳ್ಳೆಯ ಬೆಳವಣಿಗೆ ಅನಿಸುತ್ತೆ. ಅದರಲ್ಲೂ ನಮ್ಮ ಸಿನಿಮಾ ಮೂಲಕ ಆಗಿದ್ದು ಇನ್ನೂ ಒಳ್ಳೆಯ ಬೆಳವಣಿಗೆ. ನಾನು ಕಥೆ ಮಾಡುವಾಗ ಕಾನ್ಫಿಡೆನ್ಸ್ ಇತ್ತು. ಜನರು ಒಪ್ಪಿಕೊಳ್ಳುತ್ತಾರೆ ಅಂತ ಗೊತ್ತಿತ್ತು. ಆದರೆ, ಈ ಮಟ್ಟಕ್ಕೆ ಒಪ್ಪಿಕೊಳ್ಳುತ್ತಾರೆ ಅಂತ ಗೊತ್ತಿರಲಿಲ್ಲ. ತುಂಬಾನೇ ಖುಷಿಯಾಗುತ್ತಿದೆ." ಎಂದು ಧನ್ವೀರ್ ಹೇಳಿದ್ದಾರೆ.
'ಹಯಗ್ರೀವ' ಸಿನಿಮಾ 25 ದಿನಗಳನ್ನು ಪೂರೈಸಿದ ಈ ಸಮಯದಲ್ಲಿ ಮೊದಲ ದಿನ ಆದ ಸಮಸ್ಯೆ ಬಗ್ಗೆ ಮತ್ತೆ ಗುಡುಗಿದ್ದಾರೆ. "ನಾನು ಕಥೆ ಕೇಳುವಾಗ ಮೊದಲು ಕ್ಯಾರೆಕ್ಟರ್ ಅನ್ನು ನೋಡುತ್ತೇನೆ. ಅದನ್ನು ಇಷ್ಟ ಪಟ್ಟರೆ, ಕಥೆ ಇಷ್ಟ ಆಗುತ್ತೆ ಅಂತ. ಕಥೆ ಕೇಳುವಾಗಲೇ ಇಂಟ್ರೆಸ್ಟಿಂಗ್ ಆಗಿದ್ದರಿಂದ ಇದನ್ನು ಮಾಡಲೇ ಬೇಕು ಅಂತ ಮಾಡಿದೆ. ಸಿನಿಮಾ 25 ದಿನ ಓಡಿದ್ದು ತುಂಬಾನೇ ಖುಷಿಯಿದೆ. ಯಾಕಂದ್ರೆ ಇಷ್ಟು ಪಟ್ಟ ಶ್ರಮ ಎಲ್ಲವೂ ಕೈ ಹಿಡಿದಿದೆ. ಆಮೇಲೆ ಮೊದಲ ದಿನ ಕೆಲವು ಶೋಗಳನ್ನು ತಡೆ ಹಿಡಿದಿದ್ರಲ್ಲ. ಅದನ್ನೆಲ್ಲ ಮೀರಿ 25 ದಿನಗಳು ಬರುತ್ತಿದೆ ಅಂದರೆ, ಖುಷಿಯಿದೆ. ಅದೇನೋ ಹೇಳ್ತಾರಲ್ಲ ಆಗೋದೆಲ್ಲ ಒಳ್ಳೆಯದಕ್ಕೆ ಅಂತ ಹಾಗೇ ಆಗಿದೆ. ಎಲ್ಲಾ ಒಳ್ಳೆಯದೇ ಆಗಿದೆ." ಎಂದು ಧನ್ವೀರ್ ಹೇಳಿದ್ದಾರೆ.

ಇನ್ನು ಮೊದಲ ದಿನ ಹೆಸರು ರಿವೀಲ್ ಮಾಡುತ್ತೇನೆ ಎಂದು ಧನ್ವೀರ್ ಹೇಳಿದ್ದರು. ಅದಕ್ಕೂ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ಅವರು ಹೆಸರು ಹೇಳುವಷ್ಟೆಲ್ಲ ತೂಕವಿಲ್ಲ. ನನ್ನ ಬಾಯಿಯಲ್ಲಿ ಅವರ ಹೆಸರು ಬರುವಷ್ಟು ಯೋಗ್ಯತೆನೂ ಅವರಲ್ಲಿ ಇಲ್ಲ. ಅದಕ್ಕೆ ನಾನು ಹೇಳೋದೂ ಇಲ್ಲ. ಕಾಲ ಸಂದರ್ಭ ನೋಡಿ ಕೊಡ್ತೀವಿ ಅಂತ ಹೇಳಿದ್ದೆ. ಕೊಟ್ಟೇ ಕೊಡ್ತೀವಿ. ಅವರನ್ನು ಬಿಡಲ್ಲ" ಎಂದು ಹೇಳಿದ್ದಾರೆ.
ಇತ್ತೀಚೆಗೆ ಧನ್ವೀರ್ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದರು. ಆ ಸಮಯದಲ್ಲೂ ಸಿನಿಮಾ ಚೆನ್ನಾಗಿ ಹೋಗ್ತಿದೆಯಾ? ಎಂದು ದರ್ಶನ್ ವಿಚಾರಿಸಿಕೊಂಡಿದ್ದಾಗಿ ಹೇಳಿದ್ದಾರೆ. "ಇಲ್ಲ ಅವರಿಗೂ ಖುಷಿಯಿದೆ. ಹೇಗೆ ಹೋಗ್ತಿದೆ ಸಿನಿಮಾ ಅಂತ ಕೇಳಿದರು. ಚೆನ್ನಾಗಿ ಹೋಗ್ತಿದೆ ಅಂದೆ. ಅದಕ್ಕೆ ಅವರಿಗೆ ಖುಷಿಯಿದೆ. ಅವರು ಇರುವ ಪರಿಸ್ಥಿತಿಯಲ್ಲಿ ನಾನು ಏನು ಚರ್ಚೆ ಮಾಡಲಿ. ಅಂತಹದ್ದೇನು ಆಗಿಲ್ಲ" ಎಂದು ಹೇಳಿದ್ದಾರೆ.


Click it and Unblock the Notifications















