For Quick Alerts
  ALLOW NOTIFICATIONS  
  For Daily Alerts

  Actor Diganth : ನಟ ದಿಗಂತ್‌ಗೆ ಗೋವಾದಲ್ಲಿ ಅಪಘಾತ: ಹೇಗಿದೆ ಪರಿಸ್ಥಿತಿ?

  |

  ನಟ ದಿಗಂತ್‌ಗೆ ಚಿತ್ರೀಕರಣದ ವೇಳೆ ಅಪಘಾತಕ್ಕೆ ಈಡಾಗಿದ್ದು ಪರಸ್ಥಿತಿ ಗಂಭೀರವಾಗಿದೆ. ನಟ ದಿಗಂತ್ ಗೋವಾದಲ್ಲಿ ಪ್ರವಾಸದಲ್ಲಿದ್ದಾಗ ಈ ಘಟನೆ ನಡೆದಿದೆ.

  Recommended Video

  Summer Salt Flip ಮಾಡುವ ವೇಳೆ Diganthಗೆ ಗಂಭೀರ ಪೆಟ್ಟು | Diganth *Sandalwood

  ಗೋವಾದಲ್ಲಿ ನಟ ಆಪ್ತರು ಹಾಗೂ ಗೆಳೆಯರೊಡನೆ ಪ್ರವಾಸಕ್ಕೆ ತೆರಳಿದ್ದರು. ಟ್ರೆಕ್ಕಿಂಗ್ ಸೇರಿದಂತೆ ಇನ್ನಿತರೆ ಸಾಹಸ ಕ್ರೀಡೆಗಳಲ್ಲಿ ಅವರು ತೊಡಗಿಕೊಂಡಿದ್ದರು. ಸಾಹಸ ಕ್ರೀಡೆಗಳನ್ನು ಆಡುವ ವೇಳೆ ಅಚಾನಕ್ಕಾಗಿ ದಿಗಂತ್‌ ಅವರ ಕತ್ತಿಗೆ ತೀವ್ರ ಪೆಟ್ಟಾಗಿದೆ.

  ಗೋವಾದ ಬೀಚ್‌ನಲ್ಲಿ ಬ್ಯಾಕ್ ಫ್ಲಿಪ್ ಮಾಡುವ ವೇಳೆ ಆಯತಪ್ಪಿ ತಲೆ ಕೆಳಗಾಗಿ ಬಿದ್ದ ಪರಿಣಾಮ ದಿಗಂತ್ ಕುತ್ತಿಗೆಗೆ ತೀವ್ರ ಪೆಟ್ಟಾಗಿದೆ ಎನ್ನಲಾಗುತ್ತಿದೆ.

  ಘಟನೆ ನಡೆದ ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅವರ ಕತ್ತಿನ ಮೂಳೆಗೆ ತೀವ್ರ ಪೆಟ್ಟಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಿಗಂತ್ ಅವರನ್ನು ಏರ್ ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ತರಲಾಗುತ್ತಿದೆ. ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗುತ್ತದೆ ಎನ್ನಲಾಗುತ್ತಿದೆ.

  ಆದರೆ, ದಿಗಂತ್ ಗೋವಾದಲ್ಲಿ ಸೈಕಲ್‌ನಲ್ಲಿ ತೆರಳುವಾಗ ಅಪಘಾತವಾಗಿದ್ದು, ಪೆಟ್ಟಾಗಿದೆ. ಆದರೆ, ಆತಂಕ ಪಡುವ ಅಗತ್ಯವೇನು ಇಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ ಎಂದು ಕುಟುಂಬ ಮೂಲಗಳು ಸ್ಪಷ್ಟಪಡಿಸಿವೆ. ಅಸಲಿಗೆ ದಿಗಂತ್‌ಗೆ ಅಪಘಾತ ಆಗಿದ್ದು ಹೇಗೆ? ಅವರ ಪರಿಸ್ಥಿತಿ ಹೇಗಿದೆ?ಅನ್ನುವ ಸ್ಪಷ್ಟ ಚಿತ್ರಣ ಬೆಂಗಳೂರಿಗೆ ಬಂದ ಬಳಿಕ ಗೊತ್ತಾಗಲಿದೆ.

  ದಿಗಂತ್ ಬಹಳ ಫಿಟ್‌ ನಟರಾಗಿದ್ದು, ಹಲವು ಸಾಹಸಗಳನ್ನು ಯಾವುದೇ ಡ್ಯೂಪ್ ಇಲ್ಲದೆ ಮಾಡುವಂಥಹವರಾಗಿದ್ದಾರೆ. ಈ ಹಿಂದೆಯೂ ಹಲವು ಬಾರಿ ಅವರು ಅಪಾಯಕಾರಿ ಬ್ಲಾಕ್ ಫ್ಲಿಪ್‌ಗಳನ್ನು ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಇಂಥಹುದೇ ಸಾಹಸ ಅವರಿಗೆ ಕಂಟಕ ತಂದೊಂಡಿದ್ದಂತಿದೆ.

  ದಿಗಂತ್ ನಟಿಸಿರುವ 'ಗಾಳಿಪಟ 2' ಸಿನಿಮಾ ಬಿಡುಗಡೆ ಆಗಬೇಕಿದೆ. 'ಮಾರಿಗೋಲ್ಡ್', 'ಎಡಗೈ ಅಪಘಾತಕ್ಕೆ ಕಾರಣ' ಇನ್ನೂ ಕೆಲವು ಸಿನಿಮಾಗಳಲ್ಲಿ ದಿಗಂತ್ ನಟಿಸುತ್ತಿದ್ದಾರೆ. ಆದರೆ ಈಗ ದಿಗಂತ್ ಅಪಘಾತಕ್ಕೆ ಗುರಿಯಾಗಿದ್ದು ಅವರ ಆರೋಗ್ಯದ ಬಗ್ಗೆ ಆತಂಕ ಮೂಡಿದೆ.

  English summary
  Actor Diganth Manchale met with an accident while shooting for a Kannada movie in Goa. He is hospital life is in critical condition.
  Wednesday, June 22, 2022, 10:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X