ದೊಡ್ಡಣ್ಣ ವಿವಾಹ ಆಗಿದ್ದು ಯಾವಾಗ? ಇವರ ಆಮಂತ್ರಣ ಪತ್ರಿಕೆ ಹೇಗಿದೆ? ಮದುವೆ ಫೋಟೋ ನೋಡಿದ್ದೀರಾ?
ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ನಾಲ್ಕುವರೆ ದಶಕಗಳ ಕಾಲ ಸಿನಿಪ್ರಿಯರನ್ನು ರಂಚಿಸಿದ್ದಾರೆ. ಖಳನಾಯಕನಾಗಿ, ಹಾಸ್ಯ ನಟನಾಗಿ ವಿವಿಧ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈಗಲೂ ಸಿನಿಮಾ ಹಾಗೂ ಕಿರುತೆರೆಯಲ್ಲಿ ಸಿನಿಪ್ರಿಯರನ್ನು ರಂಜಿಸುತ್ತಲೇ ಇದ್ದಾರೆ. ದೊಡ್ಡಣ್ಣ ಅದೆಷ್ಟೋ ಸಿನಿಮಾಗಳಲ್ಲಿ ಪ್ರೇಕ್ಷಕರಿಗೆ ಕೋಪ ತರಿಸಿದ್ದಾರೆ, ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿದ್ದಾರೆ. ಎಂತಹದ್ದೇ ರೋಲ್ ಕೊಟ್ಟರೂ ಲೀಲಾಜಾಲವಾಗಿ ಮಾಡಬಲ್ಲ ನಟ.
ಇಂದು (ಜೂನ್ 25) ಕನ್ನಡ ಚಿತ್ರರಂಗದ ಈ ಹಿರಿಯ ನಟ 50ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಇದ್ದಾರೆ. ಇದೇ ದಿನ ಅಂದರೆ, ಜೂನ್ 29, 1975ರಂದು ಗುರು ಹಿರಿಯರ ಸಮ್ಮುದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ಐದು ದಶಕಗಳಿಂದಲೂ ಸುಖ ಸಂಸಾರ ನಡೆಸಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ದೊಡ್ಡಣ್ಣ ಅವರ ಮದುವೆ ಹಾಗೂ ಆಮಂತ್ರಣ ಪತ್ರಿಕೆಯ ಫೋಟೊ ಇಲ್ಲಿದೆ.

ದೊಡ್ಡಣ್ಣ ಅವರಿಗೆ ಈ ಮದುವೆ ಇಷ್ಟವಿರಲಿಲ್ಲ. ಇಬ್ಬರು ಅಣ್ಣಂದಿರ ಒತ್ತಡದ ಮೇರೆಗೆ ದೊಡ್ಡಣ್ಣ ಮದುವೆ ಆಗುವುದಕ್ಕೆ ಮುಂದಾಗಿದ್ದರು. ಆದರೆ, ಮದುವೆ ಆದ ಬಳಿಕವೂ ಕೆಲವು ದಿನಗಳ ಕಾಲ ಹೆಂಡತಿ ಮೇಲೆ ಸಿಟ್ಟು ಮಾಡಿಕೊಂಡಿದ್ದರು. ಅದಕ್ಕೆ ಕಾರಣವೇನು? ಅನ್ನೋದನ್ನು ಪತ್ನಿ ಶಾಂತಾ ಅವರು 'ವೀಕೆಂಡ್ ವಿಥ್ ರಮೇಶ್' ಕಾರ್ಯಕ್ರಮದಲ್ಲಿ ರಿವೀಲ್ ಮಾಡಿದ್ದರು. ಇನ್ನು ದೊಡ್ಡಣ್ಣ ಕೂಡ ತಮ್ಮ ಮದುವೆ ಬಗ್ಗೆ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ದೊಡ್ಡಣ್ಣ ಹಾಗೂ ಶಾಂತಾ ಅವರ ಮದುವೆ ಅರಸೀಕೆರೆಯಲ್ಲಿ ನಡೆದಿತ್ತು. ವಧು ಅವರ ಮನೆಯಲ್ಲಿಯೇ ಜೂನ್ 29, 1975ರಂದು ಭಾನುವಾರ ನಡೆದಿತ್ತು. ಜುಲೈ ಒಂದರಂದು ಹಾಸನದಲ್ಲಿರುವ ಜಾವಣ್ಣಹಳ್ಳಿ ಮಠದಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದರು. ದೊಡ್ಡಣ್ಣ ಅವರ ಮದುವೆಯ ಆಮಂತ್ರಣ ಪತ್ರಿಕೆ ಹೀಗಿದೆ ನೋಡಿ.
ಕನ್ನಡದ ಹಿರಿಯ ನಟ ದೊಡ್ಡಣ್ಣ ಅವರು ತಮ್ಮ ವೃತ್ತಿ ಬದುಕಿನಲ್ಲಿ ಅಷ್ಟೇ ಅಲ್ಲ, ವೈವಾಹಿಕ ಜೀವನದಲ್ಲೂ ಯಶಸ್ಸಿ ಕಂಡಿದ್ದಾರೆ. ಮದುವೆ ಆಗುವಾಗ ಹುಡುಗಿ ಚೆನ್ನಾಗಿಲ್ಲ ಅಂತ ದೂರಿದ್ದರೂ ಬಳಿಕ ಅವರನ್ನೇ ಪ್ರೀತಿಸಿ ಸುಖ ಸಂಸಾರವನ್ನು ನಡೆಸಿಕೊಂಡು ಬಂದಿದ್ದಾರೆ. ಇತ್ತೀಚೆಗೆ ನೀಡಿದ ಕೆಲವು ಸಂದರ್ಶನಗಳಲ್ಲಿ ಖುದ್ದಾಗಿ ದೊಡ್ಡಣ್ಣ ಅವರೇ ಈ ಮದುವೆ ಇಷ್ಟವಿರಲಿಲ್ಲ. ಅದಕ್ಕೆ ಈಗ ನನ್ನ ಹೆಂಡ್ತಿಗೆ ಬೇಸರವಿದೆ ಎಂದು ಹೇಳಿಕೊಂಡಿದ್ದರು.

"ನಾನು ಮೊದಲು ಹುಡುಗಿಯನ್ನು ನೋಡಿರಲಿಲ್ಲ. ನನ್ನ ಹೆಂಡತಿಗೆ ಇವತ್ತಿಗೂ ಸಿಟ್ಟು ಬರುತ್ತೆ. ತಾಳಿ ಕಟ್ಟಬೇಕಿದ್ದರೆ ನಾನು ಅವಳನ್ನು ನೋಡಿದ್ದೆ. ನಾನು ಹುಡುಗಿ ನೋಡುವ ಹೊತ್ತಿಗೆ ಹುಡುಗಿ ಚೆನ್ನಾಗಿಲ್ಲ ಅಂದೆ ನಮ್ಮ ಅಣ್ಣನಿಗೆ. ಅವನು ರಪ್ ಅಂತ ಹೊಡೆದ. ಇಂತಹ ಒಳ್ಳೆಯ ಹುಡುಗಿ ಸಿಕ್ಕಿರೋದು ನಿನ್ನ ಏಳು ಜನ್ಮದ ಪುಣ್ಯ ಅಂತ ತಿಳ್ಕೋ. ಅವನಲ್ಲೇನೋ ಏಟು ತಿಂದು ಬಂದಿದ್ದಾಯ್ತು." ಎಂದು ದೊಡ್ಡಣ್ಣ ಹೇಳಿದ್ದರು.
ದೊಡ್ಡಣ್ಣ ಅವರ ಅಣ್ಣ ಅವರ ಅಮ್ಮನ ಹತ್ತಿರ ಹುಡುಗಿ ಚೆನ್ನಾಗಿಲ್ಲ ಎಂದು ಹೇಳಿದ ಸರಿಯಾಗಿ ಕೊಟ್ಟಿದ್ದೇನೆ ಎಂದು ಹೇಳಿದ್ದರು. ಆಗ ಅವರ ಅಮ್ಮ ಕೂಡ ದೊಡ್ಡಣ್ಣ ಅವರಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದರು. "ನಿನ್ನಂತಹ ಪಾಪರ್ ನನ್ನ ಮಗನಿಗೆ ಯಾರು ಹೆಣ್ಣು ಕೊಡುತ್ತಿದ್ದರು. ಅದೇನೋ ತಾಯಿ ಇಲ್ಲದ ಹುಡುಗಿ ಒಪ್ಪಿಕೊಂಡಿದೆಯಲ್ಲ. ಅದು ನಿನ್ನ ಪುಣ್ಣ" ಎಂದು ದೊಡ್ಡಣ್ಣನ ಬಳಿ ಬಿಲ್ಡಪ್ ಕೊಟ್ಟಿದ್ದರಂತೆ.
ದೊಡ್ಡಣ್ಣ ಅವರ ಪತ್ನಿ ಶಾಂತಾ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ದೊಡ್ಡಣ್ಣಗೆ ಈ ಮದುವೆ ಯಾಕೆ ಇಷ್ಟ ಆಗಿರಲಿಲ್ಲ ಎಂದು ರಿವೀಲ್ ಮಾಡಿದ್ದಾರೆ. ''ಅವರು ಯಾವುದೋ ಒಂದು ಹುಡುಗೀನ ಲವ್ ಮಾಡಿದ್ರು. ಅದನ್ನ ಇಟ್ಕೊಂಡು ಆರು ತಿಂಗಳು ಸಿಟ್ಟಾಗಿದ್ದರು. ಅದಕ್ಕೆ ನನ್ನ ಮೇಲೆ ಹಾಗೆ ಮಾಡ್ತಿದ್ರು. ಆಮೇಲೆ ಸರಿ ಹೋದರು. ನನ್ನ ಜೊತೆ ಎಲ್ಲಾ ಹಂಚಿಕೊಂಡಿದ್ದಾರೆ. ಯಾವುದನ್ನೂ ಮುಚ್ಚಿಟ್ಟುಕೊಂಡಿಲ್ಲ'' ಎಂದು ದೊಡ್ಡಣ್ಣ ಅವರ ಪತ್ನಿ ಶಾಂತ ಹೇಳಿದ್ದಾರೆ.


Click it and Unblock the Notifications











