»   » ಯಡಿಯೂರಪ್ಪ ಭೇಟಿಗೆ 'ಗಣೇಶ' ಬಂದ.. ಏನ್ ಏನ್ ತಂದ?

ಯಡಿಯೂರಪ್ಪ ಭೇಟಿಗೆ 'ಗಣೇಶ' ಬಂದ.. ಏನ್ ಏನ್ ತಂದ?

Posted By:
Subscribe to Filmibeat Kannada

ಬಿಜೆಪಿ ರಾಜ್ಯಾಧ್ಯಕ್ಷರಾಗಿ 4ನೇ ಬಾರಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಸ್ಯಾಂಡಲ್ ವುಡ್ ನ ನಟ ಗೋಲ್ಡನ್ ಸ್ಟಾರ್ ಗಣೇಶ್ ಮತ್ತವರ ಪತ್ಮಿ ಶಿಲ್ಪಾ ಗಣೇಶ್ ಹಾಗೂ ನಟಿ ರಕ್ಷಿತಾ ಮತ್ತು ಅವರ ಪತಿ ನಿರ್ದೇಶಕ ಕಮ್ ನಟ ಜೋಗಿ ಪ್ರೇಮ್ ಅವರು ಭೇಟಿ ಮಾಡಿ ಶುಭಾಶಯ ತಿಳಿಸಿದ್ದಾರೆ.

ನಟ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ಬಿಜೆಪಿ ಪಕ್ಷದಲ್ಲಿ ಸಕ್ರೀಯರಾಗಿ ಪಾಲ್ಗೊಂಡಿರುವವರು. ನಿರ್ಮಾಪಕಿ ಶಿಲ್ಪಾ ಗಣೇಶ್ ಅವರು ಏಪ್ರಿಲ್ 2013ರಲ್ಲಿ ಬಿಜೆಪಿ ಪಕ್ಷವನ್ನು ಸೇರಿದ್ದಾರೆ. ಇವರು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಸಂಘದ ಉಪಾಧ್ಯಕ್ಷೆಯಾಗಿದ್ದಾರೆ.[ಚಿತ್ರಗಳು : ಬಿಎಸ್&ವೈಗೆ ಅಧ್ಯಕ್ಷ ಪಟ್ಟ, ಬಿಜೆಪಿ ಕಚೇರಿ ಮುಂದೆ ದೀಪಾವಳಿ]

Actor Ganesh and Actress Rakshita to meet BSY

ಆದರೆ ಗಣೇಶ್ ಅವರು ರಾಜಕೀಯದಲ್ಲಿ ಅಷ್ಟಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿಲ್ಲವಾದರೂ, ತಮ್ಮ ಪತ್ನಿಗೆ ಪ್ರೋತ್ಸಾಹ ಕೊಡುತ್ತಾರೆ. ಈ ನಿಟ್ಟಿನಲ್ಲಿ ನೂತನವಾಗಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿಎಸ್ ವೈ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು.

ಇನ್ನು ಇವರು ಮಾತ್ರವಲ್ಲದೇ ನಟಿ ರಕ್ಷಿತಾ ದಂಪತಿಗಳು ಕೂಡ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಶುಭ ಕೋರಿದರು.[ಬೇವು ಉಂಡಿದ್ದ ಯಡಿಯೂರಪ್ಪಗೆ ಯುಗಾದಿ ಬೆಲ್ಲ: ರಾಜ್ಯಾಧ್ಯಕ್ಷರಾಗಿ ಆಯ್ಕೆ]

ನಟಿ ರಕ್ಷಿತಾ ಅವರು ಬಿಜೆಪಿ ಪಕ್ಷದಲ್ಲಿ ಸದಸ್ಯೆ ಆಗಿರುವುದರಿಂದ ಅವರು ಯಡಿಯೂರಪ್ಪ ಅವರಿಗೆ ಅವರ ನಿವಾಸಕ್ಕೆ ಪತಿ ಪ್ರೇಮ್ ಅವರ ಜೊತೆ ಖುದ್ದಾಗಿ ಭೇಟಿ ನೀಡಿ ಶುಭ ಕೋರಿದ್ದಾರೆ.

ತಾರೆಗಳು ಬಿ.ಎಸ್ ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ಚಿತ್ರಗಳನ್ನು ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ...

-
-
'ರಾಜಾಹುಲಿ' ಬಿಎಸ್ ವೈ ಮನೆಯಲ್ಲಿ ಚಂದನವನದ ತಾರೆಯರು.!

'ರಾಜಾಹುಲಿ' ಬಿಎಸ್ ವೈ ಮನೆಯಲ್ಲಿ ಚಂದನವನದ ತಾರೆಯರು.!

-
-
-
-
English summary
BS Yedurupappa was selected as the state BJP chief it was not just Shilpa who went to congratulate him personally but also Ganesh. And director Prem and his actress wife Rakshita went to congratulate him personally.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada