ಡಲ್ ಹೊಡೀತಿದ್ದ ಗೋಲ್ಡನ್ ಸ್ಟಾರ್ ಚಿಲ್ಲಾಗಿದ್ದಾರೆ

By ಜೀವನರಸಿಕ

'ರೋಮಿಯೋ' ಚಿತ್ರ ಮಾಡಿದ್ದ ಪಿ.ಸಿ.ಶೇಖರ್ ಅಂಡ್ ಟೀಂ ಮತ್ತೆ ಗೋಲ್ಡನ್ ಸ್ಟಾರ್ ಗಣೇಶ್ ಗೆ ಗಾಳ ಹಾಕಿದೆ. ನಿರ್ದೇಶಕ ಪಿ.ಸಿ.ಶೇಖರ್ ಮತ್ತು ಗಣೇಶ್ ಹೊಸ ಚಿತ್ರದ ಮೂಲಕ ಮತ್ತೆ ಒಂದಾಗ್ತಿದ್ದಾರೆ. ಹೊಸ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ. ಆದ್ರೆ ಚಿತ್ರ ನವೆಂಬರ್ ಮೊದಲವಾರದಿಂದ ಶೂಟಿಂಗ್ ಶುರು ಮಾಡಲಿದೆ ಅಂದಿದ್ದಾರೆ ಶೇಖರ್.

ಈಗ ರಂಗಾಯಣ ರಘು, ಸಾಧು ಕೋಕಿಲ ಕಾಂಬಿನೇಷನ್ ಕಾಮಿಡಿ ಥ್ರಿಲ್ಲರ್ 'ಚಡ್ಡಿದೋಸ್ತ್' ರಿಲೀಸ್ ಗೆ ಕಾಯ್ತಿರೋ ಪಿಸಿ ಶೇಖರ್ ರೋಮಿಯೋದಲ್ಲಿ ಯಶಸ್ಸು ಕಾಣದಿದ್ರು ಮತ್ತೊಮ್ಮೆ ಮಳೆ ಹುಡುಗನ ಕಾಂಬಿನೇಷನ್ ನಲ್ಲಿ ಗೆಲ್ಲೋ ಉತ್ಸಾಹದಿಂದ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ.

ಸದ್ಯದಲ್ಲೆ ಚಿತ್ರದ ಉಳಿದ ಮಾಹಿತಿ ಹೊರಬಿಳಿಲಿದೆ. ಇದರೆ ಜೊತೆಗೆ ಗಮನಿಸಬೇಕಾದ ಮತ್ತೊಂದು ಅಂಶ ಅಂದ್ರೆ ಒಂದೆರೆಡು ವರ್ಷ ಡಲ್ ಹೊಡೀತಿದ್ದ ಗೋಲ್ಡನ್ ಸ್ಟಾರ್ ಚಿಲ್ಲಾಗಿದ್ದಾರೆ. ಈಗ ಗಣೇಶ್ ಕೈಯ್ಯಲ್ಲಿ ಸಾಲು ಸಾಲು ಚಿತ್ರಗಳಿವೆ. ಗೋಲ್ಡನ್ ಸ್ಟಾರ್ ಚಿತ್ರಗಳ ಡೀಟೈಲ್ಸ್ ಸ್ಲೈಡ್ನಲ್ಲಿದೆ ನೋಡ್ತಾ ಹೋಗಿ.

ಸಕ್ಕರೆ ಸ್ವೀಟ್ ಲವ್ ಸ್ಟೋರಿ

ಸಕ್ಕರೆ ಸ್ವೀಟ್ ಲವ್ ಸ್ಟೋರಿ

ಸಕ್ಕರೆ-ಗಣೇಶ್ ಚಿಕ್ಕಮಗಳೂರ ಚಿಕ್ಕಮಲ್ಲಿಗೆ ದೀಪಾ ಸನ್ನಿಧಿ ಅಭಿನಯದ ಸ್ವೀಟ್ ಲವ್ ಸ್ಟೋರಿ. ಅಕ್ಟೋಬರ್ ಎರಡನೇ ವಾರದಲ್ಲಿ ತೆರೆಗೆ ಬರೋಕೆ ರೆಡಿಯಾಗಿದೆ.

ಮತ್ತೆ ಒಂದಾದ ಚೆಲುವಿನ ಚಿತ್ತಾರ ಜೋಡಿ

ಮತ್ತೆ ಒಂದಾದ ಚೆಲುವಿನ ಚಿತ್ತಾರ ಜೋಡಿ

ಶ್ರಾವಣಿ ಸುಬ್ರಹ್ಮಣ್ಯ-ಚೆಲುವಿನ ಚಿತ್ತಾರದ ಜೋಡಿ ಗಣೇಶ್ ಅಮೂಲ್ಯಾ ಮತ್ತೆ ಒಂದಾಗಿರೋ ಚಿತ್ರ. ಈ ಚಿತ್ರ ಕೂಡ ಅಕ್ಟೋಬರ್ ನಲ್ಲಿ ತೆರೆಗಪ್ಪಳಿಸಲಿದೆ.

ರಚಿತಾ ರಾಮ್ ಜೊತೆ ದಿಲ್ ರಂಗೀಲಾ

ರಚಿತಾ ರಾಮ್ ಜೊತೆ ದಿಲ್ ರಂಗೀಲಾ

ದಿಲ್ ರಂಗೀಲಾ- ಮಳೆಯಲಿ ಜೊತೆಯಲಿ ಚಿತ್ರದ ನಂತರ ಪ್ರೀತಂ ಗುಬ್ಬಿ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಕಾಂಬಿನೇಷನ್ ಒಂದಾಗ್ತಿರೋ ಚಿತ್ರ. ಇಲ್ಲಿ ಗಣೇಶ್ ಗೆ 'ಬುಲ್ ಬುಲ್' ಬೆಡಗಿ ರಚಿತಾರಾಮ್ ಜೋಡಿ.

ಶೀಘ್ರದಲ್ಲೇ ಹೊಸ ಚಿತ್ರಕ್ಕೆ ಡೀಟೇಲ್ಸ್

ಶೀಘ್ರದಲ್ಲೇ ಹೊಸ ಚಿತ್ರಕ್ಕೆ ಡೀಟೇಲ್ಸ್

ರೋಮಿಯೋ ಟೀಂ ಜೊತೆ ಮತ್ತೊಂದು ಚಿತ್ರ- ಈಗ ರೋಮಿಯೋ ಟೀಂನ ಜೊತೆ ಗಣೇಶ್ ಮತ್ತೆ ಒಂದಾಗಿದ್ದು ಹೊಸ ಚಿತ್ರದ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.

ಬ್ರೇಕ್ ನಿರೀಕ್ಷೆಯಲ್ಲಿ ಗಣೇಶ್

ಬ್ರೇಕ್ ನಿರೀಕ್ಷೆಯಲ್ಲಿ ಗಣೇಶ್

ಮಿಸ್ಟರ್ 420 ಹಾಗೂ ಆಟೋರಾಜ ಚಿತ್ರಗಳು ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಸಾಧಿಸಲಿಲ್ಲ. ಈಗ ಗೋಲ್ಡನ್ ಸ್ಟಾರ್ ಗಣೇಶ್ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ.

More from Filmibeat

English summary
Golden Star Ganesh new film confirmed with director PC Shekhar. Ganesh's yet to be titled film is expected to kick-start soon. Meanwhile his Sakkare, Shravani Subramanya are set for release. The actor is hopefully get big break soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X