For Quick Alerts
  ALLOW NOTIFICATIONS  
  For Daily Alerts

  'ಚಡ್ಡಿದೋಸ್ತ್' ಚಿತ್ರದ ಟ್ರೇಲರ್ ಸೂಪರ್ ಹಿಟ್

  By Rajendra
  |

  ಈ ಚಿತ್ರದ ಟ್ರೇಲರ್ ಚೆನ್ನಾಗಿದೆ ಅಂದ್ರೆ ಇನ್ನು ಸಿನಿಮಾ ಸೂಪರ್ ಆಗಿರುತ್ತದೆ ಬಿಡು ಗುರು ಎಂಬ ಮಾತುಗಳು ಹಲವಾರು ಸಲ ಸಾಬೀತಾಗಿವೆ. ಈಗ ಅಂತಹದ್ದೇ ಮಾತುಗಳು ರಂಗಾಯಣ ರಘು ಹಾಗೂ ಸಾಧು ಕೋಕಿಲ ಅಭಿನಯದ ಕಾಮಿಡಿ ಚಿತ್ರ ಚಡ್ಡಿ ದೋಸ್ತ್ ಬಗ್ಗೆಯೂ ಕೇಳಿಸುತ್ತಿವೆ.

  ಎರಡೂವರೆ ನಿಮಿಷಗಳ ಕಾಲವಧಿಯ ಈ ಚಿತ್ರದ ಟ್ರೇಲರ್ ಈಗ ಭಾರಿ ಸದ್ದು ಮಾಡುತ್ತಿದೆ. ಎಸ್.ಆರ್.ಎಸ್ ಮಿಡಿಯಾ ವಿಷನ್ ಲಾಂಛನದಲ್ಲಿ ಆನಂದ್ ಛಾಬ್ರಿಯಾ ಅವರು ನಿರ್ಮಿಸಿರುವ 'ಚಡ್ಡಿ ದೋಸ್ತ್ ಚಿತ್ರ ಸೆಪ್ಟಂಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

  Chaddi Dosth still

  ಟ್ರೇಲರ್ ನ ಒಂದು ಕಾಮಿಡಿ ಸೀನ್ ಹೀಗಿದೆ...ಅಡ್ರೆಸ್ ಕೇಳಿಕೊಂಡು ಬರುವ ರಂಗಾಯಣ ರಘು, "ಅಣ್ಣಾ ವೆಂಕಟೇಶ್ವರ ಅವರ ಮನೆ ಎಲ್ಲೈತಣ್ಣಾ ಎಂದು ಕೇಳುತ್ತಾರೆ. ಅದಕ್ಕೆ ಅದು ಇಲ್ಲೆಲ್ಲೂ ಬರಲ್ಲ ಅದು ತಿರುಪತಿಯಲ್ಲೈತೆ ಎಂದು ತರ್ಲೆ ಉತ್ತರ ಬರುತ್ತದೆ. ಅಡ್ರೆಸ್ ಹೇಳಿದವನನ್ನು ಅಣ್ಣಾ ನಿನ್ನ ಹೆಸ್ರು ಏನಣ್ಣಾ ಅಂತಾನೆ. ಅದಕ್ಕವ ಮಂಜುನಾಥ ಅಂತಾನೆ. ನೀವು ಧರ್ಮಸ್ಥಳದಲ್ಲಿರಬೇಕು ಇಲ್ಯಾಕಿದ್ದೀರಣಾ ಅಂತಾರೆ ರಘು.

  ದುಡ್ಡು ನೋಡುಕೊಂಡು ಪ್ರೀತ್ಸೋಳು ದುಡ್ದು ಇರೋತನಕ ಇರ್ತಾಳೆ. ಮನಸ್ಸು ನೋಡ್ಕೊಂಡು ಪ್ರೀತ್ಸೋಳು ಮಣ್ಣಿಗೆ ಹೋಗೋತನಕ ಇರ್ತಾಳೆ ಎಂಬ ಡೈಲಾಗ್ ಹಾಗೂ ಲವ್ ಒಂದ್ಸರಿ ಆಗೋಗ್ಬಿಟ್ರೆ ಕ್ಯಾನ್ಸರ್ ಬಂದಂಗೆ....ಎಂಬ ಹಾಡು ಈ ಟ್ರೇಲರ್ ನಲ್ಲಿದೆ.

  ಶರಣ್ ಅಭಿನಯದ 'ವಿಕ್ಟರಿ' ಚಿತ್ರ ಕಳೆದವಾರ ರಾಜ್ಯಾದ್ಯಂತ 120ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಿ ಯಶಸ್ಸಿನತ್ತ ಸಾಗಿದೆ. 'ವಿಕ್ಟರಿ' ಚಿತ್ರ ಬಿಡುಗಡೆಯಾಗಿರುವ ಎಲ್ಲಾ ಚಿತ್ರಮಂದಿಗಳಲ್ಲೂ 'ಚಡ್ಡಿ ದೋಸ್ತ್' ಚಿತ್ರದ ಟ್ರೈಲರ್ ಪ್ರದರ್ಶಿಸಿಲಾಗುತ್ತಿದೆ. ಚಿತ್ರದ ಟ್ರೈಲರ್ ಗೆ ಜನರ ಮೆಚ್ಚುಗೆ ದೊರಕಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ತಿಳಿಸಿದ್ದಾರೆ.

  ಇದೇ ಟ್ರೈಲರ್ ಅನ್ನು ಯೂಟ್ಯೂಬ್‍ನಲ್ಲಿ ವೀಕ್ಷಿಸುತ್ತಿರುವವರ ಸಂಖ್ಯೆ ಕೂಡ ಅಧಿಕ ಎನ್ನುತ್ತಾರೆ ನಿರ್ದೇಶಕರು. ರಂಗಾಯಣರಘು ಹಾಗೂ ಸಾಧುಕೋಕಿಲ ಪ್ರಧಾನಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅಶ್ವಿನಿಗೌಡ, ರೂಪಶ್ರೀ, ಅವಿನಾಶ್, ಮಿತ್ರ, ಅಮಿತ್, ಅಶೋಕ್ ಮುಂತಾದವರಿದ್ದಾರೆ.

  ಅರ್ಜುನ್ ಜನ್ಯ ಅವರ ಸಂಗೀತವಿರುವ 'ಚಡ್ಡಿದೋಸ್ತ್'ಗೆ ಕುಮಾರನ್ ಅವರ ಛಾಯಾಗ್ರಹಣವಿದೆ. ಶರವಣನ್ ಸಂಕಲನ, ಬಾಬಾ ಭಾಸ್ಕರ್, ಮನು ನೃತ್ಯ ನಿರ್ದೇಶನ, ಗುಣ ಅವರ ಕಲಾನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಅಲೆಮಾರಿ ಸಂತು ರಚಿಸಿದ್ದಾರೆ. ಸಂಭಾಷಣೆಯನ್ನು ಜಿ.ನಟರಾಜ್ ಬರೆದಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Kannada film 'Chaddi Dosth' trailer rocks on Youtube and theaters. The trailer has got about 43,000 views on YouTube. Rangayana Raghu and Sadhu Kokila are in the lead, written & directed by PC Shekar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X