"ಶ್ಯಾಮ್ ರಂಗೀಲಾಗೆ ಸಪೋರ್ಟ್ ಮಾಡಿ.. ಮೋದಿಗಿಂತ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾರೆ"; ನಟ ಕಿಶೋರ್

ಬಹುಭಾಷಾ ನಟಿ ಕಿಶೋರ್ ನಿರಂತರವಾಗಿ ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ಟೀಕೆಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಈಗ ಮತ್ತೆ ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಕಾಮಿಡಿಯನ್‌ಗೆ ಬೆಂಬಲ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

ಈ ಬಾರಿನೂ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ಮಾಡುತ್ತಿದ್ದಾರೆ. ಇದೇ ಕ್ಷೇತ್ರದಲ್ಲಿ ಮೋದಿ ವಿರುದ್ಧ ಹಾಸ್ಯ ನಟ ಶ್ಯಾಮ್ ರಂಗೀಲಾ ಕೂಡ ಸ್ಪರ್ಧೆಗೆ ಇಳಿದಿದ್ದಾರೆ. ಈ ವಿಷಯ ದೇಶಾದ್ಯಂತ ಚರ್ಚೆಯಲ್ಲಿದೆ. ಈಗ ಕಿಶೋರ್ ಕೂಡ ತನ್ನ ಇನ್‌ಸ್ಟಾಗ್ರಾಂನಲ್ಲಿ ಶ್ಯಾಮ್ ರಂಗೀಲಾ ಬೆಂಬಲ ನೀಡಿದ್ದಾರೆ.

Kishore come in support of Shyam Rangeela

ಪ್ರಧಾನಿ ನರೇಂದ್ರ ಮೋದಿಗಿಂತ ಕಾಮಿಡಿಯನ್ ಶ್ಯಾಮ್ ರಂಗೀಲಾ ಪ್ರಾಮಾಣಿಕರಾಗಿ ಕೆಲಸ ಮಾಡುತ್ತಾರೆಂದು ಕಿಶೋರ್ ತಮ್ಮ ಪೋಸ್ಟ್‌ನಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಇತ್ತೀಚೆಗೆ ಕಿಶೋರ್ ಮಾಡಿದ ಪೋಸ್ಟ್‌ನಲ್ಲಿ ಏನಿದೆ? ಮೋದಿ ಬಗ್ಗೆ ನಟ ಹೇಗೆ ಟೀಕಿಸಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ..

ಇತ್ತೀಚೆಗೆ ಶ್ಯಾಮ್ ರಂಗೀಲಾ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಾಣಾಸಿಯಿಂದ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡಿದ್ದರು. ಅಲ್ಲಿಂದ ಶ್ಯಾಮ್ ರಂಗೀಲಾ ಸ್ಪರ್ಧೆಯ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಈಗ ನಟ ಕಿಶೋರ್ ಕೂಡ ಶ್ಯಾಮ್ ರಂಗೀಲಾ ಬೆಂಬಲಕ್ಕೆ ಬಂದಿದ್ದು, ನೀವು ಬಿಟ್ಟ ಸ್ಥಾನವನ್ನು ಮೋದಿ ತುಂಬ ಬಲ್ಲರು ಎಂದು ಹೇಳಿಕೊಂಡಿದ್ದಾರೆ.

"ದಯವಿಟ್ಟು ಶ್ಯಾಮ್ ರಂಗೀಲಾರಿಗೆ ಓಟು ಹಾಕಿ. ಅವರಿಗೂ ಒಂದು ಅವಕಾಶ ಕೊಡಿ. ನಿಮ್ಮ ನಿರ್ಣಯದ ಬಗ್ಗೆ ಹೆಮ್ಮೆಯಿದೆ ಶ್ಯಾಮ್ ರಂಗೀಲಾ. ನೀವು ವಾರಣಾಸಿಯ ಜನಗಳಿಗೆ ಖಂಡಿತಾ ಮೋದಿಗಿಂತ ಪ್ರಾಮಾಣಿಕ ಸೇವೆ ಸಲ್ಲಿಸುತ್ತೀರೆಂಬ ನಂಬಿಕೆಯಿದೆ. ನಿಮಗೆ ಜಯವಾಗಲಿ.
ನೀವು ಸಂಸದರಾಗಿ ಜನಸೇವೆಗೆ ನಿಂತರೆ ನಾವು ನಿಮ್ಮ ಕಾಮಿಡಿ ಮಿಸ್ ಮಾಡಬಹುದೇನೊ. ಆದರೆ, ಮೋದಿ ನೀವು ಬಿಟ್ಟ ಸ್ಥಾನ ತುಂಬಿ ನಿಮಗಿಂತ ಒಳ್ಳೆಯ ಕಾಮೆಡಿಯನ್ ಆಗಿ ನಮ್ಮನ್ನು ರಂಜಿಸುವುದರಲ್ಲಿ ನಮಗ್ಯಾವ ಅನುಮಾನವೂ ಇಲ್ಲ. ಅದರ ಸಾಧ್ಯತೆಗಳನ್ನು ಕಳೆದ 10 ವರ್ಷಗಳಲ್ಲಿ ದೇಶದ ಪ್ರಜೆಗಳೆಲ್ಲ ಕಂಡಿದ್ದೇವೆ." ಎಂದು ಕಿಶೋರ್ ಹೇಳಿದ್ದಾರೆ.


ಕಾಮೆಡಿಯನ್ ಶ್ಯಾಮ್ ರಂಗೀಲಾ ಸ್ಪರ್ಧೆ ಬಗ್ಗೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಕಾಮೆಡಿಯನ್ ಆಗಿ ಜನ ಮನ್ನಣೆ ಗಳಿಸಿದ್ದ ಶ್ಯಾಮ್ ರಂಗೀಲಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಅದೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧೆ ಮಾಡುತ್ತಿರುವುದರಿಂದ ದೇಶದೆಲ್ಲೆಡೆ ಸದ್ದು ಮಾಡುತ್ತಿದ್ದಾರೆ.

ಈ ಹಿಂದೆ ಶ್ಯಾಮ್ ರಂಗೀಲಾ ಮಾಧ್ಯಮಗಳ ಮುಂದೆ ಯಾಕೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ. ಇದೇ ಹತ್ತು ವರ್ಷಗಳ ಹಿಂದೆ ಮೋದಿಯ ಅಭಿಮಾನಿಯಾಗಿದ್ದೆ. ರಾಹುಲ್ ಗಾಂಧಿ ಹಾಗೂ ಅರವಿಂದ್ ಕ್ರೇಜಿವಾಲ್ ವಿರುದ್ಧ ವಿಡಿಯೋಗಳನ್ನು ಮಾಡಿಕೊಂಡಿದ್ದೆ. ಬಿಜೆಪಿ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೂ ಮತ ಹಾಕಿಲ್ಲ. ಆದರೆ, 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದ್ದು, ಮೋದಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಮೋದಿ ವಿರುದ್ಧ ಸ್ಪರ್ಧೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

More from Filmibeat

English summary
Actor Kishore came in support of Shyam Rangeela for contesting against Narendra Modi from Varanasi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X