'ಕಾಂತಾರ'ದಲ್ಲಿ ಅಬ್ಬರಿಸಿದ ಕಿಶೋರ್ 'ಶಾನುಭೋಗರ ಮಗಳು' ಚಿತ್ರಕ್ಕೆ ವಿಶೇಷ ಅತಿಥಿ!
ಸ್ಯಾಂಡಲ್‌ವುಡ್‌ನ ವರ್ಸಟೈಲ್ ಆಕ್ಟರ್ ಕಿಶೋರ್. ಕನ್ನಡ ಅಷ್ಟೇ ಅಲ್ಲ ಬಹುಭಾಷೆಯಲ್ಲಿ ಕಿಶೋರ್ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ಕಿಶೋರ್ ವಿಶಿಷ್ಟ ಹಾಗೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಕಿಶೋರ್ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರೋ 'ಕಾಂತಾರಾ' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಫಾರೆಸ್ಟ್ ಆಫಿಸರ್ ಆಗಿ ಕಿಶೋರ್ ನಟಿಸಿದ್ದು, ನೆಗೆಟಿವ್ ಶೇಡ್‌ನಲ್ಲಿ ಅಬ್ಬರಿಸಿದ್ದಾರೆ. ಈಗ ಮತ್ತೊಂದು ಕನ್ನಡ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅದುವೇ 'ಶಾನುಭೋಗರ ಮಗಳು'.
'ಶಾನುಭೋಗರ ಮಗಳು' ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ ಸಿನಿಮಾ. ಈ ಸಿನಿಮಾದಲ್ಲಿ ಕಿಶೋರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಹುಭಾಷಾ ನಟ ಕಿಶೋರ್ ಯಾವ ಪಾತ್ರದಲ್ಲಿ ನಟಿಸುತ್ತಾರೆ? ಅವರ ಪಾತ್ರ ಹೇಗಿರುತ್ತೆ? ಅನ್ನೋದನ್ನು ಚಿತ್ರತಂಡ ಇನ್ನೂ ರಿವೀಲ್ ಮಾಡಿಲ್ಲ.

ಅಂದ್ಹಾಗೆ ಶಾನುಭೋಗರ ಮಗಳಾಗಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಮೇಘಶ್ರೀ, ನಿರಂಜನ್ ಶೆಟ್ಟಿ, ರಮೇಶ್ ಭಟ್, ಸುಧಾ ಬೆಳವಾಡಿ, ಭಾಗ್ಯಶ್ರೀ,ಟಿ.ಎನ್.ಶ್ರೀನಿವಾಸಮೂರ್ತಿ, ಟೆನ್ನಿಸ್ ಕೃಷ್ಣ ಸೇರಿದಂತೆ ಸ್ಯಾಂಡಲ್‌ವುಡ್‌ನ ದಿಗ್ಗಜರೇ ಈ ಸಿನಿಮಾದಲ್ಲಿ ಇದ್ದಾರೆ.
'ಶಾನುಭೋಗರ ಮಗಳು' ಸಿನಿಮಾದ ಶೂಟಿಂಗ್ ಅಕ್ಟೋಬರ್ 5ರ ವಿಜಯದಶಮಿ ಶುಭದಿನದಂದು ಚನ್ನಪಟ್ಟಣದ ಅರಳಾಳು ಸಂದ್ರದಲ್ಲಿ ಆರಂಭವಾಗುತ್ತಿದೆ. ಇಲ್ಲಿಂದ ಶ್ರೀರಂಗಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟ, ಬೆಂಗಳೂರು, ಮೈಸೂರು ಮುಂತಾದ ಕಡೆಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ.

'ಶಾನುಭೋಗರ ಮಗಳು' ಸಿನಿಮಾವನ್ನು ಸ್ಯಾಂಡಲ್‌ವುಡ್‌ನ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶಿಸುತ್ತಿದ್ದಾರೆ. ಅಂದ್ಹಾಗೆ ಇದು ಕೋಡ್ಲು ರಾಮಕೃಷ್ಣ ನಿರ್ದೇಶನದ ಹದಿನಾಲ್ಕನೇ ಕಾದಂಬರಿ ಆಧಾರಿತ ಸಿನಿಮಾ. ಬಿ.ಎ.ಮಧು ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿರುವ ಈ ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಹಾಗೂ ವಸಂತ್ ರಾವ್ ಕುಲಕರ್ಣಿ ಈ ಚಿತ್ರದ ಆರ್ಟ್ ಡೈರೆಕ್ಟರ್.


Click it and Unblock the Notifications











