ಈ ಪಾತ್ರಕ್ಕಾಗಿ ಡಯೆಟ್‌ನಲ್ಲಿರುವಾಗಲೇ ನವೀನ್ ಶಂಕರ್‌ಗೆ ಬ್ರೆಡಿಕಾರ್ಡಿಯಾ ಅಟ್ಯಾಕ್: ಹೃದಯ ಸ್ತಂಭನದಿಂದ ಜಸ್ಟ್ ಮಿಸ್!
ಸ್ಯಾಂಡಲ್‌ವುಡ್‌ನಲ್ಲಿ ಯುವ ನಟರಲ್ಲಿ ನವೀನ್ ಶಂಕರ್ ಕೂಡ ಒಬ್ಬರು. ಕನ್ನಡ ಚಿತ್ರರಂಗದಲ್ಲಿ ಇವರೇ ಒಂದು ಹಾದಿಯನ್ನು ಹಿಡಿದು ಹೊರಟಿದ್ದಾರೆ. ಇವರು ನಟಿಸುವ ಸಿನಿಮಾಗಳು ಎಲ್ಲರನ್ನೂ ಕಾಡುತ್ತವೆ. ಸಿನಿಮಾ ಟೈಟಲ್‌ನಿಂದ ಶುರುವಾಗುವ ಕುತೂಹಲ ರಿಲೀಸ್‌ವರೆಗೂ ಕಾಯ್ದುಕೊಂಡು ಬರುತ್ತೆ. ಅಂತಹ ಸಿನಿಮಾಗಳಲ್ಲಿ 'ನೋಡಿದವರು ಏನಂತಾರೆ' ಕೂಡ ಒಂದು.
ಈಗಾಗಲೇ ಈ ಸಿನಿಮಾದ ತುಣುಕುಗಳು ರಿಲೀಸ್ ಆಗಿವೆ. ಮೊದಲೇ ಟೈಟಲ್‌ನಿಂದ ಗಮನ ಸೆಳೆದಿದ್ದ ನವೀನ್ ಶಂಕರ್ ಸಿನಿಮಾ ದೃಶ್ಯಗಳಿಂದಲೂ ಕುತೂಹಲ ಹೆಚ್ಚಿಸಿದ್ದಾರೆ. ಆದರೆ, ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ಸಿನಿಪ್ರಿಯರಿಗೆ ಇಷ್ಟ ಆಗಿದೆ. ಅದರಲ್ಲೂ ಟ್ರೈಲರ್ ಕೊನೆಯಲ್ಲಿ ಬರುವ ದೃಶ್ಯಗಳು ಪ್ರೇಕ್ಷಕರ ಹುಬ್ಬೇರಿಸಿದೆ. ಈ ಪಾತ್ರಕ್ಕಾಗಿ ನವೀನ್ ಸಿಕ್ಕಾಪಟ್ಟೆ ತೂಕ ಇಳಿಸಿಕೊಂಡಿದ್ದಾರೆ. ಆ ದೃಶ್ಯದ ಬಗ್ಗೆ ಈಗ ಚರ್ಚೆಯಾಗುತ್ತಿದೆ.

'ನೋಡಿದವರು ಏನಂತಾರೆ' ಟ್ರೈಲರ್ ಕೊನೆಯಲ್ಲಿ ನವೀನ್ ಶಂಕರ್ ಸುಮಾರು 50 ಕೆ.ಜಿಗೆ ಇಳಿದಿದ್ದರು. ಇದಕ್ಕಾಗಿ ಸಿಕ್ಕಾಪಟ್ಟೆ ಡಯೆಟ್ ಮಾಡಿದ್ದರು. ಈ ವೇಳೆ ಅವರ ಆರೋಗ್ಯ ಸಮಸ್ಯೆ ಕೂಡ ಆಗಿತ್ತು ಎಂದು ಹೇಳಿಕೊಂಡಿದ್ದಾರೆ. ಡಯೆಟ್ ಮಾಡುತ್ತಾ ಅವರ ಹೃದಯಕ್ಕೆ ಸಮಸ್ಯೆ ಎದುರಾಗಿತ್ತು. ವೈದ್ಯರು ಅದನ್ನು ಬ್ರೆಡಿಕಾರ್ಡಿಯಾ ಎಂದು ಹೇಳಿದ್ದರು. ಹೆಚ್ಚು ಕಡಿಮೆ ಆಗಿದ್ದರೆ, ಅವರಿಗೆ ಹೃದಯ ಸ್ತಂಭನ ಆಗುವ ಸಾಧ್ಯತೆಯಿತ್ತು. ಅನ್ನುವ ಆತಂಕಕಾರಿ ವಿಷಯವನ್ನು ಈಗ ರಿವೀಲ್ ಮಾಡಿದ್ದಾರೆ. ಅಲ್ಲ ಪಾತ್ರ ಮಾಡುವಾಗ ತಮ್ಮ ಜರ್ನಿ ಹೇಗಿತ್ತು? ಅನ್ನೋದನ್ನು ತಿಳಿಸಿದ್ದಾರೆ.
ಈ ಸಿನಿಮಾದಲ್ಲಿ ನವೀನ್ ಜರ್ನಿ ಆದಂತೆ ಅವರ ಪಾತ್ರ ಕೂಡ ತೂಕವನ್ನು ಕಳೆದುಕೊಳ್ಳುತ್ತಾ ಮುಂದೆ ಸಾಗಬೇಕಿತ್ತು. ಹೀಗಾಗಿ ಸಿನಿಮಾ ಆರಂಭದಿಂದಲೇ ಡಯೆಟ್ ಶುರು ಮಾಡಿದ್ದರು. ಕೊನೆಯಲ್ಲಿ ಇನ್ನೇನು ಕೆಲವೇ ದಿನಗಳ ಬಾಕಿ ಇದೆ ಅನ್ನುವಾಗ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಆಗ ಆಸ್ಪತ್ರೆಗೆ ದಾಖಲಾಗಿದ್ದರು. ಆ ವೇಳೆ ವೈದ್ಯರು ನೀಡಿದ ಮಾಹಿತಿ ಶಾಕಿಂಗ್ ಆಗಿತ್ತು.

"ಅದು ಬ್ರೆಡಿಕಾರ್ಡಿಯಾ ಅಂತ ಕರೀತಾರೆ. ಅದರ ಅರ್ಥನೂ ನನಗೆ ಗೊತ್ತಿಲ್ಲ. ಹಾರ್ಟ್ ಬೀಟ್ ಸ್ಲೋ ಆಗುತ್ತೆ ಅನ್ನೋದಷ್ಟೇ ಗೊತ್ತು. ಇಸಿಜಿ ಮಾಡಿಸಿ ಡಾಕ್ಟರ್ ಆಸ್ಪತ್ರೆಗೆ ದಾಖಲು ಮಾಡಿಕೊಂಡರು. ಅವರು ಎಲೆಕ್ಟ್ರೊಲೆಟ್ ಬ್ಯಾಲೆನ್ಸ್ ಮಾಡುವುದಕ್ಕೆ ಕುಡಿಯುವುದಕ್ಕೆ ಕೊಟ್ಟರು. ಟ್ಯಾಬ್ಲೆಟ್ ಕೊಟ್ಟಿದ್ದರು. ಹಾಗೇ ಡಯೆಟ್ ಅನ್ನು ನಿಲ್ಲಿಸುವುದಕ್ಕೆ ಹೇಳಿದ್ದರು. ವಾಟರ್ ಔಟ್ ಮಾಡುತ್ತಿದ್ದೆ. ಕೊನೆಯ ಮೂರು ದಿನ ಸ್ವಲ್ಪ ಜಾಸ್ತಿ ಪುಶ್ ಮಾಡಿದೆ. ಆಗ ಹಾಗಾಗಿತ್ತು." ಎಂದು ಮಾಧ್ಯಮಗಳಿಗೆ ಆ ಸನ್ನಿವೇಶವನ್ನು ವಿವರಿಸಿದ್ದಾರೆ.
ಆರಂಭದಲ್ಲಿ ಡಾಕ್ಟರ್ ಬ್ರೆಡಿಕಾರ್ಡಿಯಾ ಬಗ್ಗೆ ಮಾಹಿತಿಯನ್ನು ನೀಡಿರಲಿಲ್ಲ. ಚಿಕಿತ್ಸೆ ನೀಡಿದ ನಾರ್ಮಲ್ ಬಗ್ಗೆ ಬಳಿಕ ಮಾಹಿತಿ ಹಂಚಿಕೊಂಡಿದ್ದರು. "ಡಾಕ್ಟರ್ ಆಗ ಮೆಸೇಜ್ ಹಾಕಿದ್ದರು. ಫಸ್ಟ್ ಡಿಗ್ರಿ ಆಫ್ ಸ್ಟ್ರೋಕ್ ಹಾರ್ಟ್ ಅಟ್ಯಾಕ್ ಅಂತ. ಒಂದು ವೇಳೆ ಹಾಗೆ ಮುಂದುವರೆಸಿದ್ದರೆ ಹೃದಯ ಸ್ತಂಭನ ಆಗುವ ಸಾಧ್ಯತೆಯಿತ್ತು ಅಂತ ಹೇಳಿದ್ದರು. ಇಷ್ಟು ದಿನ ಕಷ್ಟ ಪಟ್ಟಿದ್ದೀವಿ. ಈಗ ಚೆನ್ನಾಗಿ ತಿನ್ನು ಅಂತ ಹೇಳುತ್ತಿದ್ದಾರಲ್ಲ ಅಂತ. ಡಾಕ್ಟರ್ ಹತ್ತಿರ ಆಯ್ತು ಅಂತ ಹೇಳಿ. ಹೊರ ಬಂದು 8 ಗಂಟೆ ಹಾಗೆ ಇದ್ದೆ. ಶೂಟಿಂಗ್ ಮುಗಿಸಿ ಮತ್ತೆ ತಿನ್ನುವುದಕ್ಕೆ ಶುರು ಮಾಡಿದೆ." ಎನ್ನುತ್ತಾರೆ ನವೀನ್ ಶಂಕರ್.
'ನೋಡಿದವರು ಏನಂತಾರೆ'ಸಿನಿಮಾ ಶುರುವಾಗುವ ಮುನ್ನ 66 ಇದ್ದ ನವೀನ್ ಶಂಕರ್ ಈ ಪಾತ್ರಕ್ಕಾಗಿ ಜರ್ನಿ ತೂಕ ಕಡಿಮೆ ಮಾಡಿಕೊಳ್ಳಬೇಕಿತ್ತು. ಸಿನಿಮಾದಲ್ಲಿ ಪಾತ್ರ ಸಾಗುತ್ತಿದ್ದಂತೆ ತೂಕ ಕೂಡ ಕಡಿಮೆ ಆಗಬೇಕಿತ್ತು. ಟ್ರೈಲರ್‌ನಲ್ಲಿ ಬಂದ ಕೊನೆಯ ಶಾಟ್‌ನಲ್ಲಿ ನವೀನ್ 50 ಕೆಜಿ ಇದ್ದರು. ಆ ದೃಶ್ಯಕ್ಕಾಗಿಯೇ ಅವರು ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದರು.
ಏನದು ಬ್ರೆಡಿಕಾರ್ಡಿಯಾ?
ಬ್ರೆಡಿಕಾರ್ಡಿಯಾ ಅಂದರೆ, ಸಹಜವಾಗಿ ಒಂದು ನಿಮಿಷಕ್ಕೆ ಹೃದಯ ಬಡಿತ ಎಷ್ಟು ಇರುತ್ತೋ ಅದಕ್ಕಿಂತ ಗಣನೀಯವಾಗಿ ಕಡಿಮೆ ಆಗುತ್ತೆ. ಒಂದು ನಿಮಿಷಕ್ಕೆ 60ಕ್ಕಿಂತ ಕಡಿಮೆ ಹೃದಯ ಬಡಿತ ಇದ್ದರೆ, ಅದನ್ನು ಅಸಹಜ ಹೃದಯದ ಲಯ ಎಂದು ಹೇಳುತ್ತಾರೆ. ಇದು ಹೆವಿ ಡಯೆಟ್‌ನಿಂದ, ವರ್ಕ್‌ಔಟ್ ಸೇರಿದಂತೆ ಇನ್ನೂ ಅನೇಕ ಕಾರಣಗಳಿಂದ ಕಾಣಿಸಿಕೊಳ್ಳಬಹುದು.


Click it and Unblock the Notifications











