ಹೇರ್ ಕಟ್ ಮಾಡಿಕೊಂಡು 'ಮಾಫಿಯಾ' ಲೋಕಕ್ಕೆ ಎಂಟ್ರಿ ಕೊಟ್ಟ ಪ್ರಜ್ವಲ್ ದೇವರಾಜ್!

ಪ್ರಜ್ವಲ್ ದೇವರಾಜ್ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಹೊಡೆಯುತ್ತಿದ್ದಾರೆ. ಒಂದಲ್ಲ, ಎರಡಲ್ಲ ಸಾಲು ಸಾಲು ಸಿನಿಮಾಗಳಲ್ಲಿ ಡೈನಾಮಿಕ್ ಪ್ರಿನ್ಸ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ರೊಮ್ಯಾಂಟಿಕ್ ಕ್ಲಾಸ್ ಸಿನಿಮಾಗಳಿಂದ ನಿಧಾನವಾಗಿ ಮಾಸ್ ಸಿನಿಮಾಗಳ ಕಡೆ ಪ್ರಜ್ವಲ್ ದೇವರಾಜ್ ವಾಲುತ್ತಿದ್ದಾರೆ. ಈಗಾಗ್ಲೇ ರಿಲೀಸ್ ಆಗಿರುವ ಕೆಲವು ಸಿನಿಮಾಗಳಲ್ಲಿ ಪ್ರಜ್ವಲ್ ಮಾಸ್ ಲುಕ್ ಕೊಟ್ಟು ಗಮನ ಸೆಳೆದಿದ್ದರು. ಈಗ ಮತ್ತೊಂದು ಮಾಸ್ ಸಿನಿಮಾಗೆ ಸೈ ಅಂದಿದ್ದಾರೆ.

ಪ್ರಜ್ವಲ್ ದೇವರಾಜ್ ಸಿನಿಮಾ ಬಿಡುಗಡೆಗೆ ಕ್ಯೂನಲ್ಲಿ ಸದ್ಯಕ್ಕೆ ದಿವಂಗತ ನಿರ್ಮಾಪಕ ರಾಮು ನಿರ್ಮಿಸಿದ್ದ ಅರ್ಜುನ್ ಗೌಡ ಬಿಡುಗಡೆಗೆ ಸಿದ್ಧವಾಗಿದೆ. ಅಷ್ಟರಲ್ಲೇ ಮತ್ತೊಂದು ಪ್ರಜ್ವಲ್ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. ಇದು ಪ್ರಜ್ವಲ್ ದೇವರಾಜ್ ನಟಿಸುತ್ತಿರುವ 35ನೇ ಸಿನಿಮಾ. ಪಕ್ಕಾ ಮಾಸ್ ಲುಕ್‌ಗಾಗಿ ಡೈನಾಮಿಕ್ ಪ್ರಿನ್ಸ್ ಗೆಟಪ್ ಅನ್ನೇ ಬದಲಾಯಿಸಿಕೊಂಡಿದ್ದಾರೆ.

ಪ್ರಜ್ವಲ್ 35ನೇ ಸಿನಿಮಾ 'ಮಾಫಿಯಾ'

ಪ್ರಜ್ವಲ್ 35ನೇ ಸಿನಿಮಾ 'ಮಾಫಿಯಾ'

ಪ್ರಜ್ವಲ್ ದೇವರಾಜ್ 35ನೇ ಸಿನಿಮಾ ಮಾಫಿಯಾ. ಇದೊಂದು ಪಕ್ಕಾ ಮಾಸ್ ಎಂಟರ್‌ಟೈನರ್ ಸಿನಿಮಾ. ಮಮ್ಮಿ ಮತ್ತು ದೇವಕಿಯಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಲೋಹಿತ್ ಪ್ರಜ್ವಲ್ ದೇವರಾಜ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರತಿ ಸಿನಿಮಾ ವಿಭಿನ್ನ ಗೆಟಪ್ ಮೂಲಕ ಪ್ರೇಕ್ಷಕರನ್ನು ರಂಜಸುತ್ತಿರುವ ಪ್ರಜ್ವಲ್ ದೇವರಾಜ್ ಈ ಬಾರಿ ಮತ್ತೊಂದು ವಿಶಿಷ್ಟ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸದ್ಯ ಕಂಟೆಂಟ್ ಉತ್ತಮವಾಗಿರುವ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿರುವ ಪ್ರಜ್ವಲ್‌ 'ಮಾಫಿಯಾ'ದಲ್ಲಿ ಹೊಸ ಲುಕ್ ಕೊಟ್ಟಿದ್ದಾರೆ.

ಎರಡು ವರ್ಷದಿಂದ ಬಿಟ್ಟಿದ್ದ ತಲೆ ಕೂದಲಿಗೆ ಕತ್ತರಿ

ಎರಡು ವರ್ಷದಿಂದ ಬಿಟ್ಟಿದ್ದ ತಲೆ ಕೂದಲಿಗೆ ಕತ್ತರಿ

ಸಿನಿಮಾಗಾಗಿ ಪ್ರಜ್ವಲ್ ದೇವರಾಜ್ ಎರಡು ವರ್ಷದಿಂದ ಹೇರ್ ಕಟ್ ಮಾಡಿಸಿರಲಿಲ್ಲ. ಈಗ ಮಾಫಿಯಾ ಸಿನಿಮಾಗಾಗಿ ಕೂದಲಿಗೆ ಕತ್ತರಿ ಹಾಕಿದ್ದು, ಹ್ಯಾಂಡ್‌ಸಮ್ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೇ ಆ ಗೆಟಪ್ ಕೂಡ ರಿವೀಲ್ ಆಗಿದೆ. ಅಲ್ಲದೆ ವಿಶೇಷ ಏನಂದ್ರೆ, ಪ್ರಜ್ವಲ್ ಕಟ್ ಮಾಡಿದ ಕೂದಲನ್ನು ಕೂದಲು ಕಳೆದುಕೊಂಡ ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಈಗಾಗೇ ಕೆಲ ನಟ-ನಟಿಯರು ಕೂಡ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಕೂದಲು ದಾನ ಮಾಡಿದ್ದಾರೆ.

ಪ್ರಜ್ವಲ್‌ಗೆ ಅದಿತಿ ಪ್ರಭುದೇವ ನಾಯಕಿ

ಪ್ರಜ್ವಲ್‌ಗೆ ಅದಿತಿ ಪ್ರಭುದೇವ ನಾಯಕಿ

'ಮಾಫಿಯಾ' ಸಿನಿಮಾಗೆ ಪ್ರಜ್ವಲ್ ದೇವರಾಜ್‌ಗೆ ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟಿ ಅದಿತಿ ಪ್ರಭುದೇವಾ ನಾಯಕಿಯಾಗಿದ್ದಾರೆ. ಪ್ರಜ್ವಲ್ ದೇವರಾಜ್‌ರಂತೆ ಅದಿತಿ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಬಗ್ಗೆ ಕನ್ನಡ ಸಿನಿಪಪ್ರಿಯರಲ್ಲಿ ಕುತೂಹಲ ದುಪ್ಪಟ್ಟಾಗಿದೆ. ಈ ಪ್ರೆಶ್ ಕಾಂಬಿನೇಷನ್ ತೆರೆಮೇಲೆ ಹೇಗೆ ಮೂಡಿ ಬರುತ್ತೋ ಅನ್ನುವುದನ್ನು ಎದುರು ನೋಡುತ್ತಿದ್ದಾರೆ. 'ಮಾಫಿಯಾ' ಸಿನಿಮಾಗೆ ಅನೂಪ್ ಸೀಳಿನ್ ಸಂಗೀತ ನೀಡುತ್ತಿದ್ದು, ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.

ಪ್ರಜ್ವಲ್ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?

ಪ್ರಜ್ವಲ್ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?

'ವೀರಂ' ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಗುರುದತ್‌ ಗಾಣಿಗ ನಿರ್ದೇಶನದ ಸಿನಿಮಾ ಆರಂಭ ಆಗಬೇಕಿದೆ. ಗುರುದತ್ ಗಾಣಿಕ ನಿರ್ದೇಶಿಸುತ್ತಿರುವುದು ಪಕ್ಕಾ ಆ್ಯಕ್ಷನ್‌ ಸಿನಿಮಾ. 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಸಂಕಲನಕಾರರು ಕಿರಣ್ ನಿರ್ದೇಶನದ ಸಿನಿಮಾವಿದೆ. ಹರೀಶ್‌ ಜಕ್ಕ ನಿರ್ದೇಶಿಸುತ್ತಿರುವ ಸೈನ್ಸ್‌ ಫಿಕ್ಷನ್‌ ಸಿನಿಮಾ ಕೈಯಲ್ಲಿದೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್‌ ಜೊತೆ ಹರೀಶ್ ಕೆಲಸ ಮಾಡಿದ್ದಾರೆ. ಅರ್ಜುನ್ ಗೌಡ ಬಿಡುಗಡೆ ಆಗಬೇಕಿದ್ದು, ಹೊಸ ಸಿನಿಮಾ ಮಾಫಿಯಾ ಸೆಟ್ಟೇರಿದೆ.

More from Filmibeat

English summary
Actor Prajwal Devarajnew film mafia launched. For this new film Prajwal devaraj done hair cut and donates cancer patients.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X