"ಕಳ್ಳ ನನ್ ಮಕ್ಕಳ ಬಗ್ಗೆ ಮಾತಾಡಲ್ಲ"; ದರ್ಶನ್ ಜಾಮೀನಿನ ಬಗ್ಗೆ ಪ್ರಕಾಶ್ ರಾಜ್ ಹೀಗೆ ಹೇಳಲು ಕಾರಣ ಏನು?
ಮೈಸೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ದರ್ಶನ್‌ಗೆ ರೆಗ್ಯೂಲರ್ ಜಾಮೀನು ಸಿಕ್ಕಿದೆ. ಸತತ ಪ್ರಯತ್ನದ ಬಳಿಕ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರೊಂದಿಗೆ ಪವಿತ್ರಾ ಗೌಡ ಜೊತೆಗೆ ದರ್ಶನ್ ಸಂಗಡಿಗರಿಗೂ ಜಾಮೀನು ಸಿಕ್ಕಿದ್ದು ಹೆಚ್ಚು ನಿರಾಳರಾಗಿದ್ದಾರೆ. ಚಾಲೆಂಜಿಂಗ್ ಸ್ಟಾರ್‌ಗೆ ಜಾಮೀನು ಸಿಕ್ಕಿದ್ದಕ್ಕೆ ಸ್ಯಾಂಡಲ್‌ವುಡ್ ತಾರೆಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ.
6 ತಿಂಗಳ ಬಳಿಕ ದರ್ಶನ್ ಜಾಮೀನು ಸಿಕ್ಕಿದ್ದಕ್ಕೆ ಚಿತ್ರರಂಗ ಖುಷಿಯಾಗಿದೆ. ಇವರೊಂದಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲಾ 7 ಆರೋಪಿಗಳಿಗೆ ಹೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ವಿಷಯವನ್ನು ಹೊರ ಬೀಳುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ. ಇತ್ತ ದರ್ಶನ್ ಆಪ್ತರು ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದೇ ವಿಚಾರವಾಗಿ ಹಿರಿಯ ನಟ ಪ್ರಕಾಶ್ ರಾಜ್ ಅವರ ಬಳಿಕ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದ್ದರು. ಆ ವೇಳೆ ಪ್ರಕಾಶ್ ರಾಜ್ ಜಾಮೀನು ವಿಚಾರವಾಗಿ ಮಾತಾಡುವುದಿಲ್ಲ ಎಂದು ಹೇಳಿದ್ದಾರೆ. ಮೈಸೂರಿನಲ್ಲಿರುವ ಪ್ರಕಾಶ್ ರಾಜ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಅದೇ ವೇಳೆ ದರ್ಶನ್‌ಗೆ ಜಾಮೀನು ಸಿಕ್ಕಿರುವ ಸುದ್ದಿ ಹೊರಬಿದ್ದಿತ್ತು. ಹೀಗಾಗಿ ಹಿರಿಯ ನಟಿನಿಂದ ಪ್ರತಿಕ್ರಿಯೆ ಕೇಳಲಾಗಿತ್ತು.
ಪ್ರಕಾಶ್ ರಾಜ್ ಮೈಸೂರಿನಲ್ಲಿ 'ನಿರ್ಧಿಗಂತದಲ್ಲಿ' ಅನ್ನುವ ಮಕ್ಕಳ ನಾಟಕ ಕುರಿತು ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು. ಈ ವೇಳೆ ದರ್ಶನ್ ಜಾಮೀನನ ಬಗ್ಗೆ ಪ್ರತಿಕ್ರಿಯೆ ಕೇಳಲಾಗಿತ್ತು. "ನಾನು ಇಲ್ಲಿ ಮಕ್ಕಳ ಬಗ್ಗೆ ಮಾತನಾಡುವುದಕ್ಕೆ ಬಂದಿದ್ದೇನೆ. ಕಳ್ಳ ನನ್ ಮಕ್ಕಳ ಬಗ್ಗೆ ಮಾತಾಡುವುದಕ್ಕೆ ಅಲ್ಲ. ನಾನು ಈ ಕಾರ್ಯಕ್ರಮದ ಹಿನ್ನೆಲೆ ಚೆನ್ನೈನಿಂದ ಬಂದಿದ್ದು, ಸಿನಿಮಾ ಹಾಗೂ ರಾಜಕೀಯದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ಹೇಳಿದ್ದಾರೆ.
ದರ್ಶನ್ ಜಾಮೀನು ವಿಚಾರವಾಗಿ ಪ್ರಕಾಶ್ ರಾಜ್ ಪ್ರತಿಕ್ರಿಯೆ ಹೊಸದೇನು ಅಲ್ಲ. ಈ ಹಿಂದೆ ದರ್ಶನ್ ಜೈಲು ಸೇರಿದ್ದ ಸಮಯದಲ್ಲೂ ಹೀಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು. ಈಗ ದರ್ಶನ್‌ಗೆ ಜಾಮೀನು ಸಿಕ್ಕಿದ ಸಂದರ್ಭದಲ್ಲೂ ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ದರ್ಶನ್‌ಗೆ ಜಾಮೀನು ಸಿಕ್ಕಿದ್ದಕ್ಕೆ ಚಿತ್ರರಂಗ ಅಂತೂ ಖುಷಿಯಾಗಿದೆ. ಅವರ ಬಳಗದಲ್ಲಿ ಗುರುತಿಕೊಂಡಿರುವವರು ಸೋಶಿಯಲ್ ಮೀಡಿಯಾ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ಇತ್ತ ದರ್ಶನ್ ಹಾಗೂ ಪವಿತ್ರಾ ಗೌಡ ಜಾಮೀನು ಸಿಕ್ಕಿದೆ. ರೇಣುಕಾಸ್ವಾಮಿ ಕುಟುಂಬ ಕೂಡ ಪ್ರತಿಕ್ರಿಯೆ ನೀಡಿದೆ. ಮುಂದೆ ಈ ಕೇಸ್ ಯಾವ ಹಾದಿ ಹಿಡಿಯುತ್ತೆ ಅನ್ನೋದನ್ನು ಜನರು ಕುತೂಹಲದಿಂದ ನೋಡುತ್ತಿದ್ದಾರೆ. ಪೊಲೀಸರು ಈಗಾಗಲೇ ಮಧ್ಯಂತರ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈಗ ಪೂರ್ಣಾವಧಿಯ ಜಾಮೀನು ಸಿಕ್ಕಿದ ಮೇಲೆ ಪೊಲೀಸರ ನಡೆಯೇನು ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಸದ್ಯಕ್ಕೆ ಇನ್ನೂ ಪೊಲೀಸ್ ಇಲಾಖೆಯಿಂದ ಪ್ರತಿಕ್ರಿಯೆ ನೀಡಿಲ್ಲ. ಜಾಮೀನು ಸಿಕ್ಕ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರ ಮುಂದಿನ ನಡೆಯೇನು? ಅನ್ನೋದು ಕೂಡ ಅಷ್ಟೇ ಕೂತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಇತ್ತ ಪತಿಗೆ ಜಾಮೀನು ಸಿಕ್ಕ ಬೆನ್ನಲ್ಲೇ ವಿಜಯಲಕ್ಷ್ಮಿ ದರ್ಶನ್ ಪರೋಕ್ಷವಾಗಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











