ಮಹಾನದಿ ಸೀರಿಯಲ್ ಖ್ಯಾತಿಯ ರಚನಾ ಅಪಘಾತದಲ್ಲಿ ಸಾವು
ಮಹಾನದಿ, ತ್ರಿವೇಣಿ ಸಂಗಮ, ಮಧು ಬಾಲಾ ಕನ್ನಡ ಧಾರಾವಾಹಿಗಳ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ರಚನಾ(23) ಹಾಗೂ ಸಹ ನಟ ಜೀವನ್ (25) ಎಂಬುವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಮಾಗಡಿ ತಾಲೂಕು ಸೋಲೂರು ಬಳಿ ರಚನಾ ಹಾಗೂ ಜೀವನ್ ಅವರಿದ್ದ ಸಫಾರಿ ಕಾರು ಅಪಘಾತವಾಗಿದೆ. ನಿಂತಿದ್ದ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಹಾನದಿ ಸೀರಿಯಲ್ ನಲ್ಲಿ ಕಾರ್ಯನಿರ್ವಹಿಸುವ ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಎರಿಕ್ ಅವರು ಕೂಡಾ ವಾಹನದಲ್ಲಿದ್ದರು. ಆದರೆ, ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದು, ಹರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
More from Filmibeat
English summary
Actor Rachana(23) and Jeevan(25) of Mahanadi fame killed in an accident. Rachana, Jeevan killed and 6 others injured when a Safari vehicle they were traveling rams in to a Tanker near Solur.


Click it and Unblock the Notifications











