"ನಾನು ಅಪ್ಪು ಸರ್ ಅಭಿಮಾನಿ ದಯವಿಟ್ಟು ಕ್ಷಮಿಸಿ"; ಪುನೀತ್ ಬಗ್ಗೆ ಕಮೆಂಟ್ ಮಾಡಿ ಕ್ಷಮೆ ಕೇಳಿ ರವಿಚೇತನ್
ಇಂದು (ಸೆಪ್ಟೆಂಬರ್ 18) ಸಾಹಸ ಸಿಂಹ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬ. ಅಭಿಮಾನಿಗಳು ನೋವಿನಂದಲೇ ವಿಷ್ಣುದಾದನ ಬರ್ತ್‌ಡೇಯನ್ನು ಆಚರಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಅವರೊಂದಿಗೆ ಒಡನಾಟವಿಟ್ಟುಕೊಂಡಿದ್ದ ಕನ್ನಡ ಚಿತ್ರರಂಗದ ತಾರೆಯರು ತಮ್ಮ ಸವಿ ನೆನಪುಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಕನ್ನಡದ ನಟ ರವಿ ಚೇತನ್ ಕೂಡ ಒಬ್ಬರು.
ವಿಷ್ಣುವರ್ಧನ್ ಅವರ ಬಗ್ಗೆ ಭಾವನಾತ್ಮಕವಾಗಿ ಸುದ್ದಿ ವಾಹಿನಿಯೊಂದರಲ್ಲಿ ರವಿ ಚೇತನ್ ಮಾತಾಡುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ವಿಷ್ಣುದಾದಗೆ ಸಿಗಬೇಕಾಗಿದ್ದ ಸ್ಥಾನ-ಮಾನ ಸಿಗಲಿಲ್ಲವೆಂಬ ಅರ್ಥದಲ್ಲಿ ಮಾತಾಡುತ್ತಿದ್ದರು. ಈ ವೇಳೆ ಇತ್ತೀಚೆಗೆ ನೀಡಿದ ಕರ್ನಾಟಕದ ರತ್ನ ಪ್ರಶಸ್ತಿ ಬಗ್ಗೆನೂ ಮಾತಾಡುತ್ತಿದ್ದರು. ಆಗ ಪುನೀತ್ ರಾಜ್‌ಕುಮಾರ್ ಹೆಸರನ್ನು ಎಳೆದು ತಂದಿದ್ದರು. ಇದು ಅಪ್ಪು ಅಭಿಮಾನಿಗಳು ಹಾಗೂ ನೆಟ್ಟಿಗರ ಕಣ್ಣುಗಳನ್ನು ಕೆಂಪಗೆ ಮಾಡಿದ್ದವು.

ವಿಷ್ಟುವರ್ಧನ್ ಅವರು ಅಗಲಿ ಇಷ್ಟು ವರ್ಷಗಳ ಬಳಿಕ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿದ್ದಾರೆ. ವಿಷ್ಣುವರ್ಧನ್ ಅವರ ಕುಟುಂಬ, ಅಭಿಮಾನಿಗಳು, ಚಿತ್ರರಂಗದ ಸತತ ಪ್ರಯತ್ನದ ಬಳಿಕ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಈ ಮುಂಚೆನೇ ಅವರಿಗೆ ಕರ್ನಾಟಕ ರತ್ನ ಸಿಗಬೇಕಿತ್ತು ಎಂದು ಹೇಳುತ್ತಾ ಪುನೀತ್ ರಾಜ್‌ಕುಮಾರ್ ಹೆಸರನ್ನು ಮಧ್ಯೆ ತಂದಿದ್ದರು. ಇದು ಅಪ್ಪು ಫ್ಯಾನ್ಸ್‌ಗೆ ಹಾಗೂ ನೆಟ್ಟಿಗರಿ ಸರಿ ಕಾಣಲಿಲ್ಲ. ರವಿ ಚೇತನ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದರು.
ಅಪ್ಪು ಅಭಿಮಾನಿಗಳಿಗೆ ರವಿಚೇತನ್ ಕ್ಷಮೆ
ತಾನು ಆಡಿದ ಮಾತುಗಳು ಯಾವಾಗ ವಿವಾದಕ್ಕೆ ಎಡೆ ಮಾಡಿಕೊಡುವುದಕ್ಕೆ ಶುರುವಾಯ್ತೋ ಕೂಡಲೇ ರವಿ ಚೇತನ್ ಎಚ್ಚೆತ್ತುಕೊಂಡಿದ್ದಾರೆ. ಅಪ್ಪು ಅಭಿಮಾನಿಗಳಿಗೆ ಹಾಗೂ ಆತ್ಮೀಯರಿಗೆ ಕ್ಷಮೆ ಕೇಳಿರುವ ಆಡಿಯೋ ನಿನ್ನೆಯಿಂದಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು. ಈಗ ಮತ್ತೆ ವಿಡಿಯೋ ಮಾಡುವ ಮೂಲಕ ಅವರ ಅಭಿಮಾನಿಗಳಿಗೆ ಕ್ಷಮೆಯನ್ನು ಕೋರಿದ್ದಾರೆ. ಆ ವಿಡಿಯೋದಲ್ಲಿ ಏನಿದೆ ಎಂದು ನೋಡುವುದಾರೇ,
"ಮೊನ್ನೆ ಒಂದು ವಿಡಿಯೋ ಲೀಕ್ ಆಗಿತ್ತು. ಅದರ ಬಗ್ಗೆ ನಾನು ಈಗಾಗಲೇ ಕ್ಷಮಾಪಣೆಯನ್ನು ಕೇಳಿದ್ದೇನೆ. ಈಗ ವಿಡಿಯೋ ಮಾಡುತ್ತಿದ್ದೇನೆ. ಆ ವಿಡಿಯೋವನ್ನು ನಾನು ನೋಡಿರಲಿಲ್ಲ. ಆ ವಿಡಿಯೋದಲ್ಲಿ ಟೈಟಲ್ ಅನ್ನು ತುಂಬಾನೇ ಕೆಟ್ಟದಾಗಿ ಕೊಟ್ಟಿದ್ದರು. ನನಗೂ ಬಹಳ ಬೇಸರವಾಯ್ತು. ಅದನ್ನು ನೋಡಿದ ಕೂಡಲೇ ನನಗೆ ತಪ್ಪು ಅಂತ ಅನಿಸಿತು. ಆ ಕೂಡಲೇ ನಾನು ಕ್ಷಮಾಪಣೆಯನ್ನು ಕೇಳಿದ್ದೇನೆ." ಎಂದು ರವಿಚೇತನ್ ವಿಡಿಯೋದಲ್ಲಿ ಹೇಳಿದ್ದಾರೆ.
ನೋವಾಗಿದ್ದರೆ ಕ್ಷಮಿಸಿ
ಕರ್ನಾಟಕ ರತ್ನ ವಿಚಾರವಾಗಿ ವಿಷ್ಣುವರ್ಧನ್ ಅವರಿಗೆ ಈ ಮುಂಚೆನೇ ಸಿಗಬೇಕಿತ್ತು ಅಂತ ರವಿಚೇತನ್ ಮಾಡಿದ್ದು ಸರಿಯಾಗಿದೆ. ಆದರೆ, ಅಲ್ಲಿ ಪುನೀತ್ ರಾಜ್‌ಕುಮಾರ್ ಹೆಸರು ಎಳೆದು ತರುವ ಅವಶ್ಯಕತೆ ಇರಲಿಲ್ಲ. ಇಂತಹ ಸಂದರ್ಭಗಳಲ್ಲಿ ಬೇಕು ಅಂತಲೇ ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆಂದು ನೆಟ್ಟಿಗರು ಕೂಡ ಬೇಸರವನ್ನು ಹೊರ ಹಾಕಿ ಖಂಡಿಸಿದ್ದರು. ಆ ಬೆನ್ನಲ್ಲೇ ರವಿಚೇತನ್ ಕ್ಷಮೆ ಕೇಳಿದ್ದಾರೆ.
"ಯಾರಾದರೂ ಅಪ್ಪು ವಿಷಯ ಮಾತಾಡಿದಕ್ಕೆ ನೋವಾಗಿದ್ದರೆ ಕ್ಷಮಿಸಿ. ನಾನು ಕೂಡ ಅಪ್ಪು ಸರ್ ಅಭಿಮಾನಿ. ಅವರೊಂದಿಗೆ ಸುಮಾರು ಸಿನಿಮಾ ಮಾಡಿದ್ದೇನೆ. ಅವರೊಂದಿಗೆ ಶೆಟಲ್ ಆಗಿದ್ದೇನೆ. ವಿಡಿಯೋ ಕೊಟ್ಟಿದ್ದ ಟೈಟಲ್‌ನಿಂದ ಇಷ್ಟೊಂದು ರಾದ್ಧಾಂತ ಆಯ್ತು. ಕನ್ನಡ ಚಿತ್ರರಂಗದಲ್ಲಿ ಎಲ್ಲರೂ ಒಂದೇನೆ. ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ನಾನು ಕನ್ನಡ ಯೋಗಿಯವರೊಂದಿಗೆ ಮಾತಾಡಿದ್ದೇನೆ. ಈ ವಿಡಿಯೋ ಅವರಿಗೆ ಕಳಿಸುತ್ತಿದ್ದೇನೆ. ದಯವಿಟ್ಟು ಕ್ಷಮಿಸಿ." ಎಂದು ರವಿಚೇತನ್ ಹೇಳಿದ್ದಾರೆ.


Click it and Unblock the Notifications











