"ಸುದೀಪ್-ದರ್ಶನ್ ಇಬ್ಬರ ನೇಚರ್ ಒಂದೇನೆ.. ಇವ್ರು ಕ್ಲಾಸ್, ಅವ್ರು ಮಾಸ್": ಕಿಚ್ಚ-ದಚ್ಚು ದೋಸ್ತಿ ಬಗ್ಗೆ ರವಿ ಚೇತನ್ ಹೇಳಿದ್ದೇನು?

ಅಣ್ಣಾವ್ರು-ನರಸಿಂಹರಾಜು ಆದ್ಮೇಲೆ, ವಿಷ್ಣುವರ್ಧನ್-ಅಂಬರೀಶ್ ಆದ್ಮೇಲೆ ಕನ್ನಡ ಚಿತ್ರರಂಗದಲ್ಲಿ ಕುಚಿಕು ಗೆಳೆಯರ ಪಟ್ಟಿಯಲ್ಲಿ ಸ್ಥಾನ ಪಡೆಯೋದು ಕಿಚ್ಚ ಸುದೀಪ್ ಮತ್ತು ದರ್ಶನ್. ಇಬ್ಬರೂ ಇಂದು ಮುನಿಸಿಕೊಂಡು ಬೇರೆಯಾಗಿರಬಹುದು. ಆದರೆ, ಒಳ್ಳೆಯ ಸಮಯದಲ್ಲಿ ಇಬ್ಬರ ಫ್ರೆಂಡ್‌ಶಿಪ್ ಅನ್ನು ಕಂಡ ಅದೆಷ್ಟೋ ಅಸೂಯೆ ಪಟ್ಟುಕೊಂಡಿದ್ದು ಇದೆ. ಹಾಗಿತ್ತು ಕಿಚ್ಚ-ದಚ್ಚು ಸ್ನೇಹ.

ದರ್ಶನ್ ಹಾಗೂ ಸುದೀಪ್ ಇಬ್ಬರೂ ಒಟ್ಟಿಗೆ ಸೇರಿಕೊಂಡಿರೇ ಮುಗಿದೇ ಹೋಯ್ತು. ಮೋಸ್ತು, ಮಸ್ತಿ, ನಗುವಿಗೇನು ಕಮ್ಮಿಯಿರಲಿಲ್ಲ. ಇಬ್ಬರೂ ತಮ್ಮ ಗ್ಯಾಂಗ್ ಅನ್ನು ಹಾಕೊಂಡು ಸುತ್ತಾಡುವುದಕ್ಕೆ ಹೊರಟರೆ, ಕಾಡು ಮೇಡುಗಳನ್ನು ಅಲೆದು ಮಸ್ತ್ ಪಾರ್ಟಿ ಮಾಡಿ ಹಿಂತಿರುಗುತ್ತಿದ್ದರು. ಆ ಮೆಟ್ಟಿಗೆ ಕನ್ನಡದ ಇಬ್ಬರು ಸೂಪರ್‌ಸ್ಟಾರ್‌ಗಳ ದೋಸ್ತಿ ಇತ್ತು. ಇವರಿಬ್ಬರ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ಇದ್ದಕ್ಕಿಂತ ಇವರು ಬೇರೆಯಾದವರು ಒಂದೇ ಒಂದಾಗಿಲ್ಲ.

Actor Ravi Chethan revealed that Sudeep and Darshan friendship is like class mass combination

ಆಗಾಗ ಕಿಚ್ಚನ ಬಾಯಲ್ಲಿ ದರ್ಶನ್ ಹೆಸರು, ದರ್ಶನ್ ಬಾಯಲ್ಲಿ ಕಿಚ್ಚನ ಹೆಸರು ಬಂದು ಹೋಗಿದ್ದರು ಬಿಟ್ಟರೆ, ಮತ್ತೆ ಒಂದಾಗುವ ಲಕ್ಷಣಗಳು ಸದ್ಯಕ್ಕಂತೂ ಕಾಣುತ್ತಿಲ್ಲ. ಆದರೆ, ಇವರಿಬ್ಬರನ್ನು ಹತ್ತಿರದಿಂದ ಬಲ್ಲವು ಕುಚಿಕುಗಳ ದೋಸ್ತಿ ಹೇಗಿತ್ತು ಎಂದು ವರ್ಣಿಸಿದ್ದಾರೆ. ಅದರಲ್ಲೂ ಇಬ್ಬರೊಂದಿಗೆ ಆತ್ಮೀಯತೆಯಿಂದ ಇದ್ದ ನಟ ರವಿ ಚೇತನ್ ಇಬ್ಬರ ದೋಸ್ತಿಗಳ ಬಗ್ಗೆ ಈ ಸಂಜೆ ಯೂಟ್ಯೂಬ್ ಚಾನೆಲ್‌ನಲ್ಲಿ ಮನಬಿಚ್ಚಿ ಮಾತಾಡಿದ್ದಾರೆ.

ಸುದೀಪ್ ಕ್ಲಾಸ್, ದರ್ಶನ್ ಮಾಸ್

ನಟ ರವಿ ಚೇತನ್‌ಗೆ ದರ್ಶನ್ ಹಾಗೂ ಸುದೀಪ್ ಇಬ್ಬರೂ ತುಂಬಾನೇ ಚಿರಪರಿಚಿತ. ಒಂದು ಕಾಲದಲ್ಲಿ ಒಬ್ಬರು ನಟರೊಂದಿಗೂ ಆತ್ಮೀಯವಾಗಿ ಗುರುತಿಸಿಕೊಂಡಿದ್ದರು. ಆ ದಿನಗಳನ್ನು ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ಸುದೀಪ್ ಅವರು ಒಂಥರಾ ಕ್ಲಾಸ್, ದರ್ಶನ್ ಅವರು ಮಾಸ್. ದರ್ಶನ್ ಅವರು ಒಂಥರಾ. ಸುದೀಪ್ ಅವರು ಒಂಥರಾ. ಇಬ್ಬರೂ ಇಷ್ಟ ಆಗುತ್ತಾರೆ. ಸುದೀಪ್ ಅವರು ಸಿಕ್ಕಾಪಟ್ಟೆ ಫ್ರೆಂಡ್ಲಿ. ಹೇಗೆ ಅಂದರೆ, ಹೋಗೋ ಬಾರೋ ತರ ಫ್ರೆಂಡ್‌ಶಿಪ್. ಹೇ ಬಾರೋ ಮಚ್ಚ ಅನ್ನೋತರ ದರ್ಶನ್. ಇಬ್ಬರ ನೇಚರ್ ಕೂಡ ಒಂದೇನೆ. ನಾನು ಇಬ್ಬರೊಂದಿಗೂ ಸಿನಿಮಾ ಮಾಡಿರುವುದರಿಂದ, ಇಬ್ಬರ ಒಡನಾಟ ಇರುವುದರಿಂದ ಬಹಳ ಹತ್ತಿರದಿಂದ ನೋಡಿದ್ದೀನಿ." ಎಂದು ನಟ ರವಿ ಚೇತನ್ ಹೇಳಿದ್ದಾರೆ.

ದರ್ಶನ್ ಜೊತೆನೇ ಇದ್ದೆ

ಸುದೀಪ್ ಹಾಗೂ ದರ್ಶನ್ ಸಿಸಿಎಲ್‌ನಲ್ಲೂ ಆಕ್ಟಿವ್ ಆಗಿದ್ದಿದ್ದು ಗೊತ್ತಿದೆ. ಈ ವೇಳೆ ಕಿಚ್ಚ ಸುದೀಪ್ ಅವರೇ ನಟ ರವಿ ಚೇತನ ಅನ್ನು ದರ್ಶನ್‌ ಜೊತೆ ಇರುವಂತೆ ಹೇಳಿದ್ದರಂತೆ. ಯುವ ನಟರೊಂದಿಗೆ ದರ್ಶನ್‌ಗೆ ಮುಜುಗರ ಆಗಬಹುದು. ಜೊತೆಯಲ್ಲಿ ಇದ್ದು ದರ್ಶನ್ ಅವರನ್ನು ಕಂಫರ್ಟೆಬಲ್ ಇಟುವಂತೆ ಹೇಳಿದ್ದರು. ಆ ವಿಷಯವನ್ನು ನಟ ರವಿ ಚೇತನ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

Actor Ravi Chethan revealed that Sudeep and Darshan friendship is like class mass combination

"ನಾನು ಸಿಸಿಎಲ್‌ನಲ್ಲಿ ಇದ್ದೆ. ಅದರಲ್ಲಿ ದರ್ಶನ್ ಅವರೂ ಇದ್ದರು. ಆ ವೇಳೆ ನಾನು ಜಾಸ್ತಿ ದರ್ಶನ್ ಅವರೊಂದಿಗೆ ಇದ್ದೆ. ಸುದೀಪ್ ಅವರೇ ಹೇಳಿದ್ದರು. ಆದಷ್ಟು ದರ್ಶನ್ ಅವರ ಜೊತೆ ಇರು. ಯಾಕಂದ್ರೆ ಅವರು ಸೀನಿಯರ್. ಇಲ್ಲಿರುವ ಹುಡುಗರು, ನಿನ್ನೆ ಮೊನ್ನೆ ಬಂದವರು. ಅವರು ಜಾಸ್ತಿ ನನ್ನ ಜೊತೆ ಇರುತ್ತಾರೆ. ಅವರನ್ನು ಕಂಫರ್ಟಬಲ್ ಆಗಿಟ್ಟಿರು ಅಂತ ಅವರೇ ಹೇಳುತ್ತಿದ್ದರು. ಹಾಗಾಗಿ ನಾನು ದರ್ಶನ್ ಅವರೊಂದಿಗೆ ಜಾಸ್ತಿ ಇರುತ್ತಿದೆ." ಎಂದು ರವಿ ಚೇತನ್ ರಿವೀಲ್ ಮಾಡಿದ್ದಾರೆ.

ಎಲ್ಲವೂ ಚೆನ್ನಾಗಿತ್ತು

ಕೆಲವು ವರ್ಷಗಳ ಹಿಂದೆ ಸುದೀಪ್ ಹಾಗೂ ದರ್ಶನ್ ನಡುವೆ ಎಲ್ಲವೂ ಚೆನ್ನಾಗಿತ್ತು. ಹಾಗೇ ಇಂಡಸ್ಟ್ರಿ ಕೂಡ ಕಳೆದ ಐದು ವರ್ಷಗಳಿಂದ ಬದಲಾಗಿದೆ. ಇಂಡಸ್ಟ್ರಿಯಲ್ಲಿ ಭವಿಷ್ಯವೇ ಕಾಣಿಸುತ್ತಿಲ್ಲ ಎಂದಿದ್ದಾರೆ. "ಕೆಲವು ವರ್ಷಗಳ ಹಿಂದೆ ಎಲ್ಲವೂ ಚೆನ್ನಾಗಿತ್ತು. ಇಬ್ಬರೂ ಸೇರಿ ಕುಚಿಕು ಕುಚಿಕು ಅಂತ ಒಂದು ಸಾಂಗ್ ಬೇರೆ ಮಾಡಿದ್ದರು. ನಾನು ಹೇಳಿದ್ನಲ್ಲ. ಆಗ ಎಲ್ಲವೂ ಚೆನ್ನಾಗಿತ್ತು. ಐದಾರು ವರ್ಷದ ಹಿಂದೆ ಇಂಡಸ್ಟ್ರಿ ಸಿಕ್ಕಾಪಟ್ಟೆ ಚೆನ್ನಾಗಿತ್ತು. ಈ ಐದು ವರ್ಷದಿಂದ ಅದೇನಾಯ್ತೋ ಗೊತ್ತಿಲ್ಲ. ಇಂಡಸ್ಟ್ರಿಯಲ್ಲಿ ಭವಿಷ್ಯವೇ ಕಾಣಿಸುತ್ತಿಲ್ಲ. ನೇರವಾಗಿ ಹೇಳ್ಬೇಕು ಅಂದರೆ, ಫ್ಯೂಚರ್ ಕಾಣಿಸುತ್ತಲೇ ಇಲ್ಲ." ಎಂದು ನಟ ರವಿ ಚೇತನ್ ಒತ್ತಿ ಒತ್ತಿ ಹೇಳಿದ್ದಾರೆ.

More from Filmibeat

English summary
Actor Ravi Chethan revealed that Sudeep and Darshan friendship is like class mass combination.
Read more about: sudeep darshan sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X