2ನೇ ಮಗುವಿನ ನಿರೀಕ್ಷೆಯಲ್ಲಿ ರಿಷಬ್ ಶೆಟ್ಟಿ: ಹೊಸ ವರ್ಷಕ್ಕೆ ಸಂತಸ ಹಂಚಿಕೊಂಡ ದಂಪತಿ

ಎಲ್ಲರೂ 2022 ಹೊಸ ವರ್ಷವನ್ನು ಗ್ರ್ಯಾಂಡ್ ಆಗಿ ಸ್ವಾಗತ ಮಾಡುತ್ತಿದ್ದಾರೆ. ನೈಟ್ ಕರ್ಫ್ಯೂ ಇದ್ದರೂ ತಮ್ಮ ಎಂಜಾಯ್ಮೆಂಟ್‌ಗೆ ಮಾತ್ರ ಮೋಸ ಮಾಡಿಕೊಳ್ಳುತ್ತಿಲ್ಲ. ಮತ್ತೆ ಕೆಲವರು ಹೊಸ ವರ್ಷಕ್ಕೆ ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಆದರೆ, ರಿಷಬ್ ಶೆಟ್ಟಿ ಕೊಂಚ ಡಿಂಫ್ರೆಂಟ್. ತಮ್ಮ ಕುಟುಂಬದ ಸಂತಸದ ವಿಷಯವನ್ನು ಹಂಚಿಕೊಂಡು, 2021ಕ್ಕೆ ವಿದಾಯ ಹೇಳುತ್ತಿದ್ದಾರೆ.

ಪ್ರತಿಬಾರಿ ತಮ್ಮ ಹೊಸ ಸಿನಿಮಾದ ಬಗ್ಗೆ ಮಾಹಿತಿಯನ್ನು ವಿಭಿನ್ನವಾಗಿ ತಮ್ಮ ಅಭಿಮಾನಿಗಳಿಗೆ ಹಂಚಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ 'ಹೀರೋ' ತಮ್ಮ ವೈಯುಕ್ತಿಕ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿಯೇ ಅನೌನ್ಸ್ ಮಾಡಿದ್ದಾರೆ. ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿರುವ ರಿಷಬ್ ವಿಭಿನ್ನವಾಗಿ ಸಂತಸದ ವಿಷಯವನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ.

ಹೊಸ ವರ್ಷಕ್ಕೆ ರಿಷಬ್ ಶೆಟ್ಟಿ ಫುಲ್ ಖುಷ್

ಹೊಸ ವರ್ಷಕ್ಕೆ ರಿಷಬ್ ಶೆಟ್ಟಿ ಫುಲ್ ಖುಷ್

ಹೌದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವಿಷಯವನ್ನು ಸ್ವತ: ರಿಷಬ್ ಶೆಟ್ಟಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಹೊಸ ವರ್ಷಕ್ಕೆ ಹೊಸ 'ಸಂತಸ'ವೊಂದು ನಮ್ಮ ಕುಟುಂಬದ ಜೊತೆಯಾಗಲಿದೆ, ರಣ್‌ವಿತ್ ಶೆಟ್ಟಿ ಸದ್ಯದಲ್ಲೇ ಅಣ್ಣನಾಗಲಿದ್ದಾನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ" ಎಂದು ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಮತ್ತು ಪುತ್ರ ರಣ್ವಿತ್ ಶೆಟ್ಟಿಯೊಂದಿಗಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ತುಂಬು ಗರ್ಭಿಣಿಯ ಫೋಟೊ ಶೇರ್ ಮಾಡಿದ ರಿಷಬ್

ರಿಷಬ್ ಶೆಟ್ಟಿ ತಂದೆಯಾಗುತ್ತಿರುವ ಖುಷಿಯ ವಿಚಾರವನ್ನು ಫೋಟೊಶೂಟ್ ಮೂಲಕ ಹಂಚಿಕೊಂಡಿದ್ದಾರೆ. ಪತ್ನಿ ಪ್ರಗತಿ ಶೆಟ್ಟಿ ತುಂಬು ಗರ್ಭಿಣಿಯಾಗಿರುವ ಪೋಟೊಗಳನ್ನು ಶೇರ್ ಮಾಡಿದ್ದಾರೆ. ಇದರೊಂದಿಗೆ ಪುತ್ರ ರಣ್ವಿತ್ ಶೆಟ್ಟಿ ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳು​ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ​ ವೈರಲ್​ ಆಗಿವೆ. ರಿಷಬ್ ಶೆಟ್ಟಿ ಸಂತಸದ ವಿಷಯವನ್ನು ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ರಿಷಬ್ ಶೆಟ್ಟಿಗೆ ಡಬಲ್ ಖುಷಿ

ರಿಷಬ್ ಶೆಟ್ಟಿಗೆ ಡಬಲ್ ಖುಷಿ

ರಿಷಬ್ ಶೆಟ್ಟಿಗೆ 2021 ಎರಡು ಯಶಸ್ವಿ ಸಿನಿಮಾಗಳು ಸಿಕ್ಕಿವೆ. ಲಾಕ್‌ಡೌನ್‌ನಲ್ಲಿ ಸಿನಿಮಾ ಶೂಟ್ ಮಾಡಿದ 'ಹೀರೋ' ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತ್ತು. ಇನ್ನು ಇತ್ತೀಚೆಗೆ ಬಿಡುಗಡೆಗೊಂಡ 'ಗರುಡಗಮನ ವೃಷಭವಾಹನ' ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಬಾಕ್ಸಾಫೀಸ್‌ನಲ್ಲಿ ಎರಡೂ ಸಿನಿಮಾಗಳೂ ಗಳಿಕೆಯಲ್ಲಿ ದಾಖಲೆ ಬರೆಯಲಿಲ್ಲ. ಅದೇನೇ ಇದ್ದರೂ, ಈ ವರ್ಷ ರಿಷಬ್ ಶೆಟ್ಟಿ ಎರಡು ಹಿಟ್ ಸಿನಿಮಾಗಳನ್ನು ನೀಡಿ, ಯಶಸ್ಸಿನ ಖುಷಿಯಲ್ಲಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿ

ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬ್ಯುಸಿ

ರಿಷಬ್ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಿಷಬ್ ಶೆಟ್ಟಿ ಬ್ಯಾಕ್ ಟು ಬ್ಯಾಕ್ 5 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ರಿಷಬ್ 'ಹರಿಕಥೆ ಅಲ್ಲ ಗಿರಿಕಥೆ' , 'ಬೆಲ್ ಬಾಟಂ 2', 'ಮಹಾನೀಯರೆ ಮಹಿಳೆಯರೇ' , 'ಆಂಟಗೋನಿ ಶೆಟ್ಟಿ', 'ಕಾಂತರ' ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಕಾಂಬಿನೇಶನ್‌ನಲ್ಲಿ 'ಕಿರಿಕ್ ಪಾರ್ಟಿ 2' ನಿರ್ದೇಶನ ಮಾಡುವ ಆಲೋಚನೆ ಇದೆ. ಆದರೆ, ಸಿನಿಮಾ ಯಾವಾಗ ಸೆಟ್ಟೇರಬೇಕು ಅನ್ನುವುದನ್ನು ಇನ್ನೂ ನಿರ್ಧರಿಸಿಲ್ಲ.

More from Filmibeat

English summary
Actor Rishab Shetty And Pragathi Shetty To Be Parents Again Actor shared news in social media. Rishab shetty says son Ranvit shetty soon will become brother in Twitter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X