For Quick Alerts
  ALLOW NOTIFICATIONS  
  For Daily Alerts

  ಸಂಚಾರಿ ವಿಜಯ್‌ಗೆ ಏನಾಗಿದೆ, ವೈದ್ಯರು ಏನು ಹೇಳಿದ್ರು?

  |

  ಶನಿವಾರ ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿ ನಟ ಸಂಚಾರಿ ವಿಜಯ್‌ಗೆ ಗಂಭೀರ ಗಾಯವಾಗಿದೆ. ಸದ್ಯ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋಮಾ ಸ್ಥಿತಿಯಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

  ಸಂಚಾರಿ Vijay ICUನಲ್ಲಿ ಗಂಭೀರ ಸ್ತಿಥಿಯಲ್ಲಿದ್ದಾರೆ | Filmibeat Kannada

  ರಾತ್ರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗಲೇ ವಿಜಯ್‌ ಅವರಿಗೆ ತೀವ್ರ ಪೆಟ್ಟು ಬಿದ್ದಿದ್ದು, ಬಹಳ ರಕ್ತಸ್ರಾವ ಆಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ವಿಜಯ್‌ ಅವರ ಮೆದುಳಿನ ಬಲ ಭಾಗಕ್ಕೆ ಹೆಚ್ಚು ಗಾಯವಾಗಿದ್ದು, ತಡರಾತ್ರಿ ಶಸ್ತ್ರ ಚಿಕಿತ್ಸೆ ಸಹ ಮಾಡಲಾಗಿದೆ. ಈ ಕುರಿತು ಸಂಚಾರಿ ವಿಜಯ್‌ಗೆ ಚಿಕಿತ್ಸೆ ಕೊಡುತ್ತಿರುವ ಡಾ ಅರುಣ್ ನಾಯಕ್ ಪ್ರತಿಕ್ರಿಯಿಸಿ ಏನಾಗಿದೆ ಎಂದು ತಿಳಿಸಿದ್ದಾರೆ. ಮುಂದೆ ಓದಿ...

  ವೈದ್ಯರು ಏನು ಹೇಳಿದರು

  ವೈದ್ಯರು ಏನು ಹೇಳಿದರು

  ಆಸ್ಪತ್ರೆಗೆ ಬರುವಾಗಲೇ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಮೆದುಳಿನ ಬಲ ಭಾಗದಲ್ಲಿ ರಕ್ತಸ್ರಾವ ಆಗಿದೆ. ಬಲ ತೊಡೆಯಲ್ಲಿ ಗಾಯವಾಗಿದೆ. ತಡರಾತ್ರಿಯೇ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆದರೆ ಪ್ರಾಣಾಪಾಯದಿಂದ ಪಾರು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಮುಂದಿನ 24 ಗಂಟೆ ಕಾದು ನೋಡಬೇಕಿದೆ. ಸದ್ಯ ವೆಂಟಿಲೇಟರ್ ಸಹಾಯದಿಂದ ಇದ್ದಾರೆ. ಉಸಿರಾಟ ಮತ್ತು ಹೃದಯಬಡಿತದಲ್ಲಿ ವ್ಯತ್ಯಾಸವಾಗಿಲ್ಲ ಎಂದು ನ್ಯೂರೋ ಸರ್ಜನ್ ಡಾ ಅರುಣ್ ನಾಯಕ್ ಮಾಹಿತಿ ನೀಡಿದ್ದಾರೆ.

  Breaking: ಸಂಚಾರಿ ವಿಜಯ್‌ಗೆ ಅಪಘಾತ, ಐಸಿಯುನಲ್ಲಿ ಚಿಕಿತ್ಸೆBreaking: ಸಂಚಾರಿ ವಿಜಯ್‌ಗೆ ಅಪಘಾತ, ಐಸಿಯುನಲ್ಲಿ ಚಿಕಿತ್ಸೆ

  ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ

  ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ

  ಸಂಚಾರಿ ವಿಜಯ್‌ ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಕಳೆದ ರಾತ್ರಿಯಿಂದಲೂ ವಿಜಯ್‌ಗೆ ಪ್ರಜ್ಞೆ ಬಂದಿಲ್ಲ. ವಿಜಯ್ ಸಹೋದರ ಆಸ್ಪತ್ರೆ ಬಳಿ ಭೇಟಿ ನೀಡಿದ್ದು, ವೈದ್ಯರ ಸಂಪರ್ಕದಲ್ಲಿದ್ದಾರೆ. ಪ್ರಜ್ಞೆ ಬಂದ ನಂತರವೇ ವಿಜಯ್ ಆರೋಗ್ಯದ ಕುರಿತು ಹೇಳಲು ಸಾಧ್ಯ ಎಂದು ಡಾಕ್ಟರ್ ತಿಳಿಸಿದ್ದಾರೆ.

  ಶನಿವಾರ ರಾತ್ರಿ ಘಟನೆ

  ಶನಿವಾರ ರಾತ್ರಿ ಘಟನೆ

  ನಟ ಸತೀಶ್ ನೀನಾಸಂ ಟಿವಿ9 ವಾಹಿನಿಗೆ ನೀಡಿರುವ ಮಾಹಿತಿ ಪ್ರಕಾರ ಸಂಚಾರಿ ವಿಜಯ್, ಕೊರೊನಾದಿಂದ ಸಂಕಷ್ಟದ್ದವರಿಗೆ ಪ್ರತಿದಿನ ಊಟ ಒದಗಿಸುತ್ತಿದ್ದರು. ಆಹಾರ ಕೊಟ್ಟು ಬರುವ ಸಂದರ್ಭದಲ್ಲಿ ಈ ಅಪಘಾತವಾಗಿದೆ ಎಂದಿದ್ದಾರೆ. ಆದರೆ, ನಿಖರವಾಗಿ ಅಪಘಾತ ಹೇಗೆ ಸಂಭವಿಸಿತು, ಎಲ್ಲಿ ಈ ಘಟನೆ ನಡೆಯಿತು ಎನ್ನುವುದರ ಬಗ್ಗೆ ಉತ್ತರ ಇಲ್ಲ.

  'ಉಸಿರು' ತಂಡದಲ್ಲಿದ್ದ ವಿಜಯ್

  'ಉಸಿರು' ತಂಡದಲ್ಲಿದ್ದ ವಿಜಯ್

  ಚಿತ್ರ ಸಾಹಿತಿ ಕವಿರಾಜ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಸೇರಿ 'ಉಸಿರು' ಎಂಬ ತಂಡ ಕಟ್ಟಿ, ಕೊರೊನಾದಿಂದ ಸಂಕಷ್ಟದಲ್ಲಿದ್ದವರಿಗೆ ಆಕ್ಸಿಜನ್ ವ್ಯವಸ್ಥೆ ಮಾಡುತ್ತಿದ್ದರು. ಈ ತಂಡದಲ್ಲಿ ಸಂಚಾರಿ ವಿಜಯ್ ಸಹ ಇದ್ದರು. ಜೊತೆಗೆ ಹಸಿದವರಿಗೆ ವಿಜಯ್ ಮತ್ತು ಸ್ನೇಹಿತರು ಪ್ರತಿದಿನವೂ ಆಹಾರದ ಪೊಟ್ಟಣ ವಿತರಿಸುತ್ತಿದ್ದರು.

  English summary
  Actor Sanchari Vijay met accident at Bengaluru and he admitted to Apollo hospital at Bannerghatta Road.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X