ಸಂಚಾರಿ ವಿಜಯ್ ಅಪ್‌ಡೇಟ್: ಐಸಿಯುನಲ್ಲಿ ಮುಂದುವರೆದ ಚಿಕಿತ್ಸೆ

ನಟ ಸಂಚಾರಿ ವಿಜಯ್ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಅಪೋಲೋ ಆಸ್ಪತ್ರೆ ವೈದ್ಯರು ಇಂದು (ಜೂನ್ 14) ಸುದ್ದಿಗೋಷ್ಠಿ ಮಾಡುವ ಸಾಧ್ಯತೆ ಇದೆ.

Recommended Video

Sanchari Vijay ಬ್ರೈನ್ ಫೆಲ್ಯೂರ್ ಆಗಿದೆ ಡೆಡ್ ಆಗಿಲ್ಲ ಎಂದು ಡಾಕ್ಟರ್ ಸ್ಪಷ್ಟನೆ | Filmibeat Kannada

ಬೈಕ್ ಅಪಘಾತದಿಂದ ಮೆದುಳಿನ ಬಲ ಭಾಗ ಹಾಗೂ ಬಲ ತೊಡೆಗೆ ತೀವ್ರ ಪೆಟ್ಟು ಆಗಿದ್ದು, ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಆದರೆ, ವಿಜಯ್ ಅವರಿಗೆ ಪ್ರಜ್ಞೆ ಬಂದಿಲ್ಲ. ಸದ್ಯ, ವಿಜಯ್ ಯಥಾಸ್ಥಿತಿ ಮುಂದುವರಿದಿದ್ದು, ಮತ್ತಷ್ಟು ಸಮಯ ಕಾದು ನೋಡಬೇಕಾಗಿದೆ.

ಸಂಚಾರಿ ವಿಜಯ್ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಳಿಗ್ಗೆ 11 ಗಂಟೆಗೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡುವ ನಿರೀಕ್ಷೆ ಇದೆ. ಭಾನುವಾರ ರಾತ್ರಿ 10.30ಕ್ಕೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿತ್ತು.

Actor Sanchari Vijay Health Update On Monday

ವಿಜಯ್ ಸದ್ಯಕ್ಕೆ ವೆಂಟಿಲೇಟರ್ ಸಹಾಯದಲ್ಲಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಉಸಿರಾಟ ಮತ್ತು ಹೃದಯಬಡಿತದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಪ್ರಜ್ಞೆ ಬಂದ ಕೂಡಲೇ ವಿಜಯ್ ಆರೋಗ್ಯದ ಬಗ್ಗೆ ಸ್ಪಷ್ಟವಾಗಿ ಹೇಳಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ.

ನ್ಯೂರೋ ಸರ್ಜನ್ ಡಾ.ಅರುಣ್ ನಾಯಕ್ ಸಂಚಾರಿ ವಿಜಯ್‌ಗೆ ಶಸ್ತ್ರ ಚಿಕಿತ್ಸೆ ಮಾಡಿದ್ದು, ತೀವ್ರ ನಿಗಾ ವಹಿಸಿದ್ದಾರೆ.

ಭಾನುವಾರ ಸತೀಶ್ ನೀನಾಸಂ ಮಾತನಾಡಿ, ಸಂಚಾರಿ ವಿಜಯ್ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ. ಪ್ರಜ್ಞೆ ಬರಬೇಕಾಗಿದೆ. ಉಳಿದಂತೆ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದರು.

More from Filmibeat

English summary
Sanchari Vijay Health Update: National Award winning actor Sanchari Vijay met accident at Bengaluru and he admitted to Apollo hospital at Bannerghatta Road.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X