Breaking: ಸಂಚಾರಿ ವಿಜಯ್‌ಗೆ ಅಪಘಾತ, ಐಸಿಯುನಲ್ಲಿ ಚಿಕಿತ್ಸೆ
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಪಘಾತಕ್ಕೆ ಒಳಗಾಗಿದ್ದು, ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
Recommended Video
ಸ್ನೇಹಿತನ ಜೊತೆ ಬೈಕ್‌ನಲ್ಲಿ ತೆರಳುತ್ತಿದ್ದ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ವಿಜಯ್ ಬಲ ತೊಡೆಗೆ ತೀವ್ರ ಪೆಟ್ಟಾಗಿದೆ. ಜೊತೆಗೆ ಮೆದುಳಿನ ಬಲಭಾಗಕ್ಕೂ ಬಲವಾದ ಪೆಟ್ಟು ಬಿದ್ದಿದೆ ಎಂದು ವರದಿಯಾಗಿದೆ.
ಶನಿವಾರ ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದರು. ಆದರೆ, ಸಂಚಾರಿ ವಿಜಯ್ ಎಲ್ಲಿಗೆ ಹೋಗುತ್ತಿದ್ದರು ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಅಪಘಾತಕ್ಕೆ ಏನು ಕಾರಣ ಏನು ಎನ್ನುವುದು ಸಹ ಸದ್ಯಕ್ಕೆ ಪ್ರಶ್ನೆಯಾಗಿ ಉಳಿದಿದೆ.

ಸದ್ಯ ಸಂಚಾರಿ ವಿಜಯ್ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಯ ಮೂಲಗಳು ತಿಳಿಸಿರುವ ಮಾಹಿತಿ ಪ್ರಕಾರ, ವಿಜಯ್ ಅವರಿಗೆ ಗಂಭೀರ ಗಾಯಗಳಾಗಿವೆ, ಆಸ್ಪತ್ರೆ ಬಂದಾಗಲೇ ತೀವ್ರವಾಗಿ ರಕ್ತಸ್ರಾವ ಆಗಿತ್ತು. ಮೆದುಳಿನ ಭಾಗಕ್ಕೆ ಹೆಚ್ಚು ಪೆಟ್ಟು ಬಿದ್ದಿರುವುದರಿಂದ ಅವರು ಪ್ರಜ್ಞಾಹೀನ ಪರಿಸ್ಥಿತಿ ತಲುಪಿದ್ದಾರೆ ಎನ್ನಲಾಗಿದೆ.
ನಿರ್ದೇಶಕ ಲಿಂಗದೇವರು ಟಿವಿ9 ವಾಹಿನಿಗೆ ನೀಡಿರುವ ಮಾಹಿತಿ ಪ್ರಕಾರ, ವಿಜಯ್ ಅವರು ರಾತ್ರಿ ಊಟಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಗಂಭೀರ ಪರಿಸ್ಥಿತಿ ಅಂತ ವೈದ್ಯರು ಹೇಳ್ತಿದ್ದು, ಕೋಮಾ ಸ್ಥಿತಿ ತಲುಪಿದ್ದಾರೆ. ಸದ್ಯಕ್ಕೆ ಏನೂ ಹೇಳುವ ಪರಿಸ್ಥಿತಿಯಲ್ಲಿ ವೈದ್ಯರು ಇಲ್ಲ ಎಂದು ತಿಳಿಸಿದ್ದಾರೆ.


Click it and Unblock the Notifications











