ಯುವ ನಟನಿಗೆ 'ಪೊಗರು' ನಿರ್ದೇಶಕ ನಂದ ಕಿಶೋರ್ ₹22 ಲಕ್ಷ ವಂಚನೆ; ಏನಿದು ಆರೋಪ?

'ಅಧ್ಯಕ್ಷ'. 'ರನ್ನ', 'ಮುಕುಂದ ಮುರಾರಿ', 'ಪೊಗರು' ಅಂತಹ ಸಿನಿಮಾಗಳನ್ನು ನಿರ್ದೇಶಕ ನಂದ ಕಿಶೋರ್ ಮೇಲೆ ವಂಚನೆ ಆರೋಪ ಮಾಡಲಾಗಿದೆ. ಕಿಚ್ಚ ಸುದೀಪ್ ಹೆಸರು ಮುಂದಿಟ್ಕೊಂಡು ನಂದ ಕಿಶೋರ್ 22 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆಂದು ಯುವ ನಟ ಶಬರೀಶ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ. ಮಾಧ್ಯಮಗಳ ಮುಂದೆ ಇಷ್ಟೊಂದು ಹಣವನ್ನು ಯಾಕೆ ಕೊಟ್ಟೆ ಎಂದೂ ಮಾಹಿತಿ ನೀಡಿದ್ದಾರೆ.

ನಂದ ಕಿಶೋರ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ. ತನ್ನಿಂದ ಹಲವು ಬಾರಿ ಕಂತುಗಳಲ್ಲಿ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ, ಅದರನ್ನು ಹಿಂತಿರುಗಿಸಿಲ್ಲ. ಹಣ ಕೇಳುವುದಕ್ಕೆ ಹೋದರೆ, ಧಕ್ಮಿ ಹಾಕುತ್ತಾರೆ. ಎರಡು ಚೆಕ್ ಕೊಟ್ಟಿದ್ದು, ಆ ಬ್ಯಾಂಕ್‌ನ ಖಾತೆ ಚಾಲ್ತಿಯಲ್ಲಿಯೇ ಇಲ್ಲ ಎಂದಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್ ಅವರನ್ನು ಪರಿಚಯ ಮಾಡಿಸುತ್ತೇನೆ. ಸಿಸಿಎಲ್‌ನಲ್ಲಿ ಅವಕಾಶ ಕೊಡಿಸುತ್ತೇನೆ. ಸಿನಿಮಾದಲ್ಲಿ ಚಾನ್ಸ್ ಕೊಡುತ್ತೇನೆಂದು ನಂಬಿಸಿ ನಂದ ಕಿಶೋರ್ ಹಣ ಪಡೆದುಕೊಂಡಿದ್ದಾರೆಂದು ಹೇಳಿದ್ದಾರೆ.

Actor Shabarish Shetty has accused director Nanda Kishore cheating him Rs 22 lakh what is the issue

ನಟ ಶಬರೀಶ್ ಶೆಟ್ಟಿ ಮಾಡಿರುವ ಈ ಆರೋಪಗಳಿಗೆ ನಿರ್ದೇಶಕ ನಂದ ಕಿಶೋರ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಇವರು ಮಾಡಿರುವ ಆರೋಪ ಸುಳ್ಳೋ? ನಿಜನೋ ಅಂತಾನೂ ಪ್ರತಿಕ್ರಿಯೆ ನೀಡಿಲ್ಲ. ಅಸಲಿಗೆ ನಂದ ಕಿಶೋರ್ ಮೇಲೆ ಶಬರೀಶ್ ಶೆಟ್ಟಿ ಮಾಡಿರುವ ಆರೋಪಗಳೇನು? ಶಬರೀಶ್ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಆಡಿಯೋದಲ್ಲಿ ನಂದಕಿಶೋರ್ ಏನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.

2016ರಲ್ಲಿ ನಂದ ಕಿಶೋರ್ ಅವರಿಗೆ ಶಬರೀಶ್ ಶೆಟ್ಟಿ ಜಿಮ್‌ನಲ್ಲಿ ಪರಿಚಯ ಆಗಿದ್ದರು. ಅದೇ ಫ್ರೆಂಡ್‌ಶಿಪ್ ಆಗಿ ಮುಂದುವರೆದಿತ್ತು. ಕ್ರಿಕೆಟ್ ಆಡಬೇಕು, ಸಿಸಿಎಲ್ ಆಡಬೇಕು ಎನ್ನುವ ಕನಸು ಇಟ್ಟುಕೊಂಡಿದ್ದರು. ಹೀಗಾಗಿ ಮೊದಲು ಮೂರು ಲಕ್ಷ ಕೇಳಿದಾಗ ಕೊಟ್ಟಿದ್ದರು. ಆ ಮೇಲೆ ಮತ್ತೆ ಮೂರು ಲಕ್ಷ, ಹೀಗೆ ಒಟ್ಟು 9 ಲಕ್ಷ ಕ್ಯಾಶ್ ಕೊಟ್ಟಿದ್ದರು. ಅದು ಇನ್ನೂ ಅವರಿಗೆ ಬಂದಿಲ್ಲ. ಬದಲಾಗಿ ನಂದ ಕಿಶೋರ್ ಫೇಕ್ ಚೆಕ್ ಕೊಟ್ಟಿದ್ದು, ಅದರ ಅಕೌಂಟ್ ಕ್ಲೋಸ್ ಆಗಿದೆ. ಈ ಹಣಕ್ಕೆ ಬಡ್ಡಿ ಕಟ್ಟಿದ್ದೇನೆ ಎಂದು ಶಬರೀಶ್ ಆರೋಪ.

"ನಾನು ಆರೋಪ ಮಾಡಿರುವುದಲ್ಲ. ಅವರು ಹಣ ತೆಗೆದುಕೊಂಡಿರುವು ಸತ್ಯ. ಅದಕ್ಕೊಸ್ಕರ ನಾನು 9 ವರ್ಷ ಕಾದೆ. 9 ವರ್ಷದಿಂದಲೂ ನನಗೆ ಸುಳ್ಳು ಹೇಳಿಕೊಂಡು, ಇವತ್ತು ಕೊಡುತ್ತೇನೆ. ನಾಳೆ ಕೊಡುತ್ತೇನೆ ಎಂದು ಹೇಳುತ್ತಲೇ ಬಂದಿದ್ದರು. ನನಗೆ ಕಷ್ಟ ಆಗುತ್ತಿದೆ. ನನ್ನ ಸಿನಿಮಾ ಕಂಪ್ಲೀಟ್ ಆಗಿದೆ. ಅದನ್ನು ರಿಲೀಸ್ ಮಾಡಬೇಕು. ಅದಕ್ಕೆ ಹಣಬೇಕು. ನಾನು ಕೊಟ್ಟಿರುವ ಹಣ ಕೊಟ್ಟರೆ ಸಾಕು. ಸಿನಿಮಾ ಫೀಲ್ಡ್‌ನಲ್ಲಿ ಬೆಳೆಯಬೇಕು ಅಂತ ಕನಸು ಕಟ್ಟಿಕೊಂಡಿದ್ದೀನಿ. ನಿರ್ದೇಶಕರಾಗಿ ಅವಕಾಶನೂ ಕೊಡಲ್ಲ. ದುಡ್ಡು ತೆಗೆದುಕೊಂಡು ದುಡ್ಡೂ ಕೊಡಲ್ಲ ಅಂದಾಗ ನನ್ನಂಥ ಪುಟ್ಟ ಕಲಾವಿದ ಏನು ಮಾಡುವುದಕ್ಕೆ ಆಗುತ್ತೆ?" ಎಂದು ಶಬರೀಶ್ ಶೆಟ್ಟಿ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಇಷ್ಟೇ ಅಲ್ಲ, ಮುಕುಂದ ಮುರಾರಿ ರಿಲೀಸ್ ಆದ ಸಮಯದಲ್ಲೂ ಹಣ ಕೊಡುತ್ತೇನೆಂದು ಹೇಳಿ ಕೊಟ್ಟಿಲ್ಲ. ಪೊಗರು ಶುರುವಾದಾಗ ಕೊಡುತ್ತೇನೆ ಎಂದು ಹೇಳಿದ್ದರಂತೆ. ಆಗಲೂ ಕೊಟ್ಟಿಲ್ಲ. ಪೊಗರು ರಿಲೀಸ್ ಆದ ಮೇಲೂ ಕೊಟ್ಟಿಲ್ಲ. ಅಮೌಂಟ್ ಕೇಳಿದಾಗಲೆಲ್ಲ ಸಿನಿಮಾ ಗೆದ್ಮೇಲೆ ಕೊಡುತ್ತೇನೆ ಎಂದು ಸತಾಯಿಸಿದ್ದಾರಂತೆ. ಸುದೀಪ್ ಸರ್ ಅಭಿಮಾನಿ ಅನ್ನೋದು ಗೊತ್ತಿತ್ತು. ಹೀಗಾಗಿ ಹಣ ಕೇಳಿದಾಗಲೆಲ್ಲ ಸುದೀಪ್ ಸರ್ ಹತ್ತಿರ ಕನೆಕ್ಷನ್ ಕಟ್ ಮಾಡಿಸುತ್ತೇನೆ ಎನ್ನುತ್ತಿದ್ದರಂತೆ. ಪೊಗರು ಸಿನಿಮಾಗೆ ಅವಕಾಶ ಕೊಡುತ್ತೇನೆ ಎಂದೂ ಕೊಡಲಿಲ್ಲ ಎಂದು ಆರೋಪಿಸಿದ್ದಾರೆ.

"270 ಗ್ರಾಂ ಗೋಲ್ಡ್ ಮಾರಿ ನಾನು ಅವರ ಸಾಲ ತೀರಿಸಿದ್ದೇನೆ. ಗೋಲ್ಡ್ ಕೂಡ ಹರಾಜಿಗೆ ಬಂದು ಹೊರಟು ಹೋಯ್ತು. ಟೋಟಲ್ ನನಗೆ 22 ಲಕ್ಷ ರೂಪಾಯಿ ಬರಬೇಕು. ಕೇಳಿದರೆ, ನಾನು ಸಿನಿಮಾ ಮಾಡುತ್ತಿದ್ದೇನೆ. ಬಾಂಬೆಯಲ್ಲಿ ಇದ್ದೇನೆ ಅಂತ ಸುಳ್ಳು ಹೇಳಿಕೊಂಡೇ ಬಂದರು. ಪದೇ ಪದೆ ಕೇಳಿದರೆ ಧಮ್ಕಿ ಹಾಕುತ್ತಾರೆ. ನನ್ನ ರಾಮಧೂತ ಎನ್ನುವ ಸಿನಿಮಾ ರೆಡಿಯಾಗಿದೆ. ಅದನ್ನು ರಿಲೀಸ್ ಮಾಡುವುದಕ್ಕೆ ನನಗೀಗ ದುಡ್ಡಿಲ್ಲ. ನಾನು ಸಿನಿಮಾ ರಿಲೀಸ್ ಮಾಡಬೇಕು. ದುಡ್ಡಿ ಕೊಡಿ ಅಂದರೂ ಪ್ರತಿಕ್ರಿಯೆ ಇಲ್ಲ. ಫೋನ್ ತೆಗೆಯುತ್ತಲೇ ಇಲ್ಲ." ಎಂದು ಶಬರೀಶ್ ಶೆಟ್ಟಿ ಆರೋಪಿಸಿದ್ದಾರೆ.

More from Filmibeat

English summary
Actor Shabarish Shetty has accused director Nanda Kishore cheating him Rs 22 lakh, what is the issue?
Read more about: nanda kishore actor cheating
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X