ಕಾಮಿಡಿ ಕಿಂಗ್ ಶರಣ್ ಸೊಸೆ ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಎಂಟ್ರಿ: 'ದಿಲ್ ದಾರ್' ನಟಿಯ ಬಗ್ಗೆ ನಿಮಗೇನು ಗೊತ್ತು?

ಸ್ಯಾಂಡಲ್‌ವುಡ್‌ಗೆ ಹೊಸ ಹೀರೋಯಿನ್‌ಗಳ ಎಂಟ್ರಿ ಆಗುತ್ತಿದೆ. ಕನ್ನಡ ಚಿತ್ರರಂಗ ತಾರಾ ಕುಟುಂಬದ ಜೋಡಿಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಅಂತಹವರಲ್ಲಿ ಕೀರ್ತಿ ಕೃಷ್ಣ ಕೂಡ ಒಬ್ಬರು. ಕನ್ನಡದ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜುಗೆ ಹೀರೋಯಿನ್ ಆಗಿದ್ದು, 'ದಿಲ್‌ದಾರ್' ಅನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ.

'ಪಡ್ಡೆಹುಲಿ' ಖ್ಯಾತಿಯ ಶ್ರೇಯಸ್ ಮಂಜು ನಟಿಸಿರುವ ಚಿತ್ರ 'ದಿಲ್ ದಾರ್' ಚಿತ್ರತಂಡ ತಮ್ಮ ಹೀರೋಯಿನ್ ಅನ್ನು ರಿವೀಲ್ ಮಾಡಿದೆ. ಸದ್ದೇ ಇಲ್ಲದೆ ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿರುವ ಚಿತ್ರತಂಡ ನಾಯಕಿಯ ಹೆಸರು ಗುಟ್ಟಾಗಿಯೇ ಇಟ್ಟಿತ್ತು. ಈಗ ಆ ಹೆಸರನ್ನು ರಿವೀಲ್ ಮಾಡಿದೆ. ನಿರ್ದೇಶಕ ಮಧು ಗೌಡ ಗಂಗೂರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ.

Actor Sharan Daughter in law Keerthi Krishna entering sandalwood with Dildar film

ದಿಲ್‌ದಾರ್ ಸಿನಿಮಾ ಹಾಡೊಂದನ್ನು ಮಾತ್ರ ಬಾಕಿ ಉಳಿದುಕೊಂಡಿದ್ದ ಸಿನಿಮಾ ತಂಡ ನಾಯಕಿ ಯಾರು ಅನ್ನೋ ಸುಳಿವನ್ನೇ ಬಿಟ್ಟುಕೊಟ್ಟಿರಲಿಲ್ಲ. ಈಗ ತಮ್ಮ ನಾಯಕಿ ಕೀರ್ತಿ ಕೃಷ್ಣ ಎಂದು ಅನೌನ್ಸ್ ಮಾಡಿದೆ. ಅಂದ್ಹಾಗೆ ಈಕೆ ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜರಾದ ಶರಣ್ ಸೊಸೆ. ಕನ್ನಡ ಚಿತ್ರರಂಗ ಎಂಟ್ರಿ ಕೊಡುತ್ತಿರುವ ಈ ನಟಿ ಹಿನ್ನೆಲೆ ಏನು ಅಂತ ತಿಳಿಯುವುದಕ್ಕೆ ಮುಂದೆ ಓದಿ.

ಕೀರ್ತಿ ಕೃಷ್ಣ ಹೆಸರು ಕನ್ನಡ ಚಿತ್ರರಂಗದಲ್ಲಿ ನಿಧಾನವಾಗಿ ಸದ್ದು ಮಾಡುತ್ತಿದೆ. ಕನ್ನಡದ ಎರಡು ಸಿನಿಮಾಗಳನ್ನು ಬಾಚಿಕೊಂಡಿರುವ ಈ ನಟಿ ಮುಂದಿನ ಸ್ಟಾರ್ ನಟಿಯಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಕೀರ್ತಿ ಕೃಷ್ಣ ಅವರ ಜೊತೆ ಕಾಮಿಡಿ ಕಿಂಗ್ ಹಾಗೂ ಹೀರೋ ಶರಣ್ ಹಾಗೂ ಹಿರಿಯ ನಟಿ ಶೃತಿಯವರ ಹೆಸರು ತಳುಕು ಹಾಕಿಕೊಂಡಿದ್ದರಿಂದ ಇನ್ನುಷ್ಟು ಕುತೂಹಲ ಕೆರಳಿಸಿದೆ.

Actor Sharan Daughter in law Keerthi Krishna entering sandalwood with Dildar film

ಹೌದು ಕೀರ್ತಿ ಕೃಷ್ಣ ನಟ ಶರಣ್ ಅವರ ಸೊಸೆ. ಅಂದರೆ, ಶರಣ್ ಹಾಗೂ ಹಿರಿಯ ನಟಿ ಶ್ರುತಿ ಅವರ ತಂಗಿ ಉಷಾ ಕೃಷ್ಣ ಅವರ ಪುತ್ರಿ. ಈಗಾಗಲೇ ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾಗೂ ಇವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಹಾಗೇ ಈಗಾಗಲೇ 'ದಿಲ್ ದಾರ್' ಚಿತ್ರದ ನಾಯಕಿಯಾಗಿಯೂ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಒಳ್ಳೆಯ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆಂದು ಚಿತ್ರರಂಗ ಮಾತಾಡಿಕೊಳ್ಳುತ್ತಿದೆ.

ಈಗಾಗಲೇ ನೆನೆಪಿರಲಿ ಪ್ರೇಮ್, ಹಿರಿಯ ನಟಿ ಮಾಲಾಶ್ರೀ ಪುತ್ರಿ ಸೇರಿದಂತೆ ಹಲವು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಗೆದ್ದಿದ್ದಾರೆ. ಈ ಬೆನ್ನಲ್ಲೇ ಕೀರ್ತಿ ಕೃಷ್ಣ ಕೂಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ದಿಲ್‌ದಾರ್ ಸಿನಿಮಾ ಕಡೆಗೆ ಬರೋದಾರೆ, ಶ್ರೇಯಸ್ ಮಂಜು ಈ ಸಿನಿಮಾದ ಹೀರೋ. ದಶಕದಿಂದ ಚಿತ್ರರಂಗದಲ್ಲಿ ಗುರುತಿಸಿರುವ ಮಧುಗೌಡ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಪ್ರೇಮಕಥೆಯಾಗಿದ್ದರೂ, ವಿಭಿನ್ನ ಸ್ಟೋರಿ ಎಂದು ಚಿತ್ರತಂಡ ಹೇಳಿಕೊಳ್ಳುತ್ತಿದೆ. ವೇಗವಾಗಿ ಶೂಟಿಂಗ್ ಮುಗಿಸಿದ್ದು ಸಿನಿಮಾ ಬಗ್ಗೆ ಕಾನ್ಫಿಡೆಂಟ್ ಆಗಿದೆ. ಹೀಗಾಗಿ ಈ ಸಿನಿಮಾ ನಟಿ ಕೀರ್ತಿ ಕೃಷ್ಣ ದೊಡ್ಡ ಬ್ರೇಕ್ ಕೊಡುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.

ಇನ್ನು ಶ್ರೇಯಸ್ ಮಂಜುಗಾಗಿ ಅರ್ಜುನ್ ಜನ್ಯ ವಿಶೇಷ ಹಾಡೊಂದನ್ನು ಕಂಪೋಸ್ ಮಾಡಿದ್ದಾರೆ. ಈ ಹಾಡನ್ನು ಅಪ್ಪು ಅನ್ನು ಮನದಲ್ಲಿ ಇಟ್ಟುಕೊಂಡು ಕಂಪೋಸ್ ಮಾಡಲಾಗಿದೆ. ಅಪ್ಪು ಅಂತೆಯೇ ಡ್ಯಾನ್ಸ್‌ಗೆ ಒತ್ತುಕೊಡುವ ಮತ್ತೊಬ್ಬ ನಟ ಕನ್ನಡಕ್ಕೆ ಬೇಕು ಅನ್ನೋದು ಈ ಹಾಡಿನ ಉದ್ದೇಶವಂತೆ. ಹಾಗಾಗೀ ಶ್ರೇಯಸ್ ಕೂಡ ಶ್ರಮಪಟ್ಟು ತಾಲೀಮು ನಡೆಸುತ್ತಿದ್ದಾರಂತೆ. ಇದೊಂದು ಹಾಡು ಮುಗಿದರೆ ಶೂಟಿಂಗ್ ಕಂಪ್ಲೀಟ್ ಆಗುತ್ತೆ. ಯುಗಾದಿ ಸಿನಿಮಾ ರಿಲೀಸ್ ಮಾಡುವ ಆಲೋಚನೆಯಲ್ಲಿ ಚಿತ್ರತಂಡವಿದೆ.

More from Filmibeat

English summary
Actor Sharan Daughter in law Keerthi Krishna entering sandalwood with Dildar film
Read more about: sharan shruthi filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X