For Quick Alerts
  ALLOW NOTIFICATIONS  
  For Daily Alerts

  ಬೇರೆ ರಾಜ್ಯದಿಂದ ಇಲ್ಲಿಗೆ ಬಂದ ಜೈನರಿಗೆ ಶಿವಣ್ಣನ ಮನವಿ

  |

  ರಾಜಸ್ಥಾನದಿಂದ ಬಂದು ಕರ್ನಾಟಕದಲ್ಲಿ ನೆಲೆಸಿದ್ದೀರಾ, ಇಲ್ಲಿನ ಜನತೆಗೆ ನೀವು ಸಲ್ಲಿಸುತ್ತಿರುವ ಸೇವೆ ಪ್ರಶಂಸನೀಯ. ಇದು ಎಲ್ಲರಿಗೂ ಮಾದರಿಯಾಗಲಿ, ನಮ್ಮವರೂ ಇವರ ಜೊತೆ ಕೈಜೋಡಿಸ ಬೇಕೆಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.

  ಬೆಂಗಳೂರಿನ ಪುರಭವನದಲ್ಲಿ ಭಾನುವಾರ (ಜೂ 23) ರಾಜಸ್ಥಾನ ಕಾಸ್ಮಾ ಫೌಂಡೇಶನ್ ಆಯೋಜಿಸಿದ್ದ ವಾರ್ಷಿಕ ಶಾಲಾಮಕ್ಕಳಿಗೆ ಸಮವಸ್ತ್ರ ವಿತರಣಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಶಿವಣ್ಣ, ಈ ವರ್ಷ ಐದು ಸಾವಿರ ಮಕ್ಕಳಿಗೆ ಸಮವಸ್ತ್ರ ವಿತರಿಸುತ್ತೀದ್ದೀರಾ ಬರುವ ವರ್ಷ ಇದು ದುಪ್ಪಟ್ಟಾಗಲಿ ಎಂದು ಹಾರೈಸಿದರು.

  ಇಂದು ಸಹಾಯ ಪಡೆಯುತ್ತಿರುವ ಮಕ್ಕಳು ಮುಂದಿನ ದಿನದಲ್ಲಿ ದೇಶದ ಭವಿಷ್ಯವಾಗಲಿ. ಉಜ್ವಲ ಭವಿಷ್ಯ ರೂಪಿಸಿಕೊಂಡು ಇತರರಿಗೂ ಮುಂದೆ ಸಹಾಯ ಮಾಡುವಂತಾಗಲಿ ಎಂದು ನಾನು ಆಶಿಸುತ್ತೇನೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.

  ನಟ ಯಶ್: ಜಗತ್ತಿನಲ್ಲಿ ಹಣ ಮುಖ್ಯ ಹಾಗಂತ ಕೇವಲ ಹಣ ಸಂಪಾದನೆಯಿಂದ ಗೌರವ ಲಭಿಸುವುದಿಲ್ಲ. ಹೆಚ್ಚು ದಾನ ಧರ್ಮಗಳನ್ನು ಮಾಡಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳ ಬೇಕು. ಜೈನ ಸಮುದಾಯ ಇದಕ್ಕೆ ಕೊಡಬಹುದಾದ ಉತ್ತಮ ನಿದರ್ಶನ ಎಂದು ಮತ್ತೊಬ್ಬ ನಟ ಯುಶ್ ಹೇಳಿದ್ದಾರೆ.

  ಶಾಸಕ ಆನಂದ್ ಸಿಂಗ್: ಸಮಾಜ ಸೇವೆಯಲ್ಲಿ ಜೈನ ಸಮುದಾಯದ ದೇಶದಲ್ಲೇ ನಂಬರ್ ಒನ್. ಶಿಕ್ಷಣ ಮತ್ತು ಆರೋಗ್ಯ ವಿಚಾರದಲ್ಲಿ ಸಮುದಾಯ ಮಂಚೂಣಿಯಲ್ಲಿದೆ. ಸಮುದಾಯಕ್ಕೆ ಸರಕಾರದಿಂದ ಏನಾದರೂ ಸಹಾಯ ಬೇಕಿದ್ದರೆ ಸಂಕೋಚ ಪಡದೇ ಮನವಿ ಸಲ್ಲಿಸಬಹುದೆಂದು ಆನಂದ್ ಸಿಂಗ್ ಹೇಳಿದರು.

  ಸಚಿವ ದಿನೇಶ್ ಗುಂಡೂರಾವ್: ಜೈನ ಸಮುದಾಯದ ಸಾಮಾಜಿಕ ಸೇವೆ ಪ್ರಶಂಸನೀಯ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ರಾಜಸ್ಥಾನ ಮೂಲದ ಜೈನ ಸಮುದಾಯದ ಸೇವೆಯನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

  English summary
  Kannada actor Shivaraj Kumar appeal to Jain community. He was talking in Annual School student Uniform distribution of Rajasthan Cosmo Foundation. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X