ಮತ್ತೆ ಒಂದಾದ ಶಿವಣ್ಣ-ಡಾಲಿ-ಚಿಟ್ಟೆ: 'ಟಗರು ಪಾರ್ಟ್ 2' ಇರಬಹುದಾ 'ಬೈರಾಗಿ'?

ಎಂಟು ತಿಂಗಳ ಬಳಿಕ ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್ ಅಭಿನಯದ ಸಿನಿಮಾ ಬಿಡುಗಡೆಯಾಗಲಿದೆ. ಅದು ಮಲ್ಟಿಸ್ಟಾರರ್ ಸಿನಿಮಾ. ಶಿವರಾಜ್‌ಕುಮಾರ್, ಡಾಲಿ ಧನಂಜಯ್, ಪೃಥ್ವಿ ಅಂಬರ್ ಅಭಿನಯದ ಸಿನಿಮಾವೇ 'ಬೈರಾಗಿ'. ಈ ಸಿನಿಮಾ ನೋಡುವುದಕ್ಕೆ ಮೂವರ ಅಭಿಮಾನಿಗಳೂ ಕಾದು ಕಾದುಕೂತಿದ್ದಾರೆ.

'ಬೈರಾಗಿ' ಸಿನಿಮಾ ಇದೇ ಜುಲೈ 01ರಂದು ಬಿಡುಗಡೆಯಾಗುತ್ತಿದೆ. ಇದಕ್ಕೆ ಸಕಲ ಸಿದ್ಧತೆಗಳೂ ಈಗಾಗಲೇ ಆರಂಭ ಆಗಿದೆ. ಈ ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಎನ್ನುವಾಗಲೇ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. 'ಬೈರಾಗಿ' ಸಿನಿಮಾದಲ್ಲಿ 'ಟಗರು' ಟೀಮ್ ಮತ್ತೆ ಒಂದಾಗಿದೆ. ಈ ಸಿನಿಮಾದಲ್ಲಿ ಶಿವಣ್ಣ ಹಾಗೂ ಧನಂಜಯ್ ಜೊತೆ ವಸಿಷ್ಠ ಸಿಂಹ ಕೂಡ ಇದ್ದಾರೆ ಅನ್ನುವ ಮಾತು ಕೇಳಿಬರುತ್ತಿದೆ.

ಶಿವಣ್ಣ,ಡಾಲಿ, ಚಿಟ್ಟೆ ಕಾಂಬೋ

ಶಿವಣ್ಣ,ಡಾಲಿ, ಚಿಟ್ಟೆ ಕಾಂಬೋ

ಹೌದು, ಇಲ್ಲಿವರೆಗೂ 'ಬೈರಾಗಿ' ಸಿನಿಮಾದಲ್ಲಿ ಕೇವಲ ಶಿವಣ್ಣ, ಡಾಲಿ ಧನಂಜಯ್ ಹಾಗೂ ಪೃಥ್ವಿ ಅಂಬರ್ ಅಷ್ಟೇ ಪ್ರಮುಖವಾಗಿ ಕಾಣಿಸಿಕೊಂಡಿದ್ದರು. ಆದರೆ, ಟಗರು ಸಿನಿಮಾದಲ್ಲಿ ಶಿವಣ್ಣ ಹಾಗೂ ಧನಂಜಯ್ ಜೊತೆ ನಟಿಸಿದ ವಸಿಷ್ಠ ಸಿಂಹ ಮಿಸ್ ಆಗ್ಬಿಟ್ರಲ್ಲ ಅನ್ನೋದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿತ್ತು. ಆದ್ರೀಗ ವಸಿಷ್ಠ ಸಿಂಹ ಕೂಡ ಈ ಸಿನಿಮಾ ಒಂದು ಭಾಗವಾಗಿದ್ದಾರೆ ಅನ್ನೋದು ಈಗ ರಿವೀಲ್ ಆಗಿದೆ.

ಶಿವಣ್ಣ, ಧನಂಜಯ್‌ಗೆ ವಸಿಷ್ಠ ಸಾಥ್?

ಶಿವಣ್ಣ, ಧನಂಜಯ್‌ಗೆ ವಸಿಷ್ಠ ಸಾಥ್?

ಶಿವಣ್ಣ,ಡಾಲಿ, ಚಿಟ್ಟೆ ಈ ಮೂವರ ಕಾಂಬಿನೇಷನ್‌ 'ಟಗರು' ಸಿನಿಮಾ ಸಿಕ್ಕಾಪಟ್ಟೆ ಮೋಡಿ ಮಾಡಿತ್ತು. ಮತ್ತೆ ಇದೇ ಕಾಂಬಿನೇಷನ್ ಬಂದರೆ ಹೇಗಿರುತ್ತೆ ಅಂತ ಅಭಿಮಾನಿಗಳೇ ಕಲ್ಪನೆ ಕೂಡ ಮಾಡಿಕೊಂಡಿದ್ದರು. ಆದರೆ, 'ಬೈರಾಗಿ' ಸಿನಿಮಾದಲ್ಲಿ ಶಿವಣ್ಣ ಹಾಗೂ ಧನಂಜಯ್ ಕಾಣಿಸಿಕೊಂಡರೇ ವಿನ: ಚಿಟ್ಟೆ ಪಾತ್ರ ಮಾಡಿದ್ದ ವಸಿಷ್ಠ ಸಿಂಹ ಮಾತ್ರ ಕಂಡಿರಲಿಲ್ಲ. ಆದ್ರೀಗ ಚಿಟ್ಟೆ ಪಾತ್ರದ ವಸಿಷ್ಠ ಸಿಂಹ ಈ ಸಿನಿಮಾದ ಒಂದು ಭಾಗವಾಗಿದ್ದಾರೆ. ಅದ್ಹೇಗೆ ಅಂತೀರಾ? ವಸಿಷ್ಠ ಸಿಂಹ ಈ ಸಿನಿಮಾದಲ್ಲಿ ಒಂದು ಹಾಡನ್ನು ಹಾಡುವ ಮೂಲಕ ಜೊತೆಯಾಗಿದ್ದಾರೆ.

ಪ್ರೀ-ರಿಲೀಸ್‌ಗೂ ಮುನ್ನ ಸಾಂಗ್ ರಿಲೀಸ್

ಪ್ರೀ-ರಿಲೀಸ್‌ಗೂ ಮುನ್ನ ಸಾಂಗ್ ರಿಲೀಸ್

ವಸಿಷ್ಠ ಸಿಂಹ 'ಬೈರಾಗಿ'ಯ ಪವರ್‌ಫುಲ್ ಸಾಂಗ್‌ಗೆ ಧ್ವನಿ ನೀಡಿದ್ದಾರೆ. ವಸಿಷ್ಠಗೆ ಕೆಜಿಎಫ್ ಖ್ಯಾತಿಯ ಅನನ್ಯಾ ಭಟ್ ಜೊತೆಯಾಗಿದ್ದಾರೆ. ಇದೂವರೆಗೂ ರಿಲೀಸ್ ಆಗಿರುವ 'ಬೈರಾಗಿ' ಸಿನಿಮಾದ ಹಾಡಿಗಳಲ್ಲಿ ಇದು ಮಾಸ್ ಸಾಂಗ್ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಪವರ್‌ಫುಲ್ ಸಾಂಗ್ ಅನ್ನು ಚಾಮರಾಜನಗರದಲ್ಲಿ ನಡೆಯಲಿರುವ ಪ್ರೀ-ರಿಲೀಸ್ ಈವೆಂಟ್‌ಗೂ ಮುನ್ನ ಬಿಡುಗಡೆಯಾಗಲಿದೆ. ಅನೂಪ್ ಸಿಳೀನ್ ಈ ಸಿನಿಮಾಗಾಗಿ ಸಂಗೀತ ನಿರ್ದೇಶನ ಮಾಡಿದ್ದಾರೆ.

'ಬೈರಾಗಿ' ಗ್ರ್ಯಾಂಡ್ ಈವೆಂಟ್

'ಬೈರಾಗಿ' ಗ್ರ್ಯಾಂಡ್ ಈವೆಂಟ್

'ಬೈರಾಗಿ' ಸಿನಿಮಾದಲ್ಲಿ ವಸಿಷ್ಠ ಸಿಂಹ ಅಷ್ಟೇ ಅಲ್ಲ. ಶಿವರಾಜ್‌ಕುಮಾರ್ ಹಾಗೂ ಶರಣ್ ಒಂದೊಂದು ಹಾಡನ್ನು ಹಾಡಿದ್ದಾರೆ. ಈ ಕಾರಣಕ್ಕೆ 'ಬೈರಾಗಿ' ಹಾಡುಗಳು ವಿಶೇಷವಾಗಿ ನಿಲ್ಲುತ್ತವೆ. ಈಗ ವಸಿಷ್ಠ ಸಿಂಹ ಹಾಡಿರುವ ಹಾಡಿಗಾಗಿ ಮೂವರ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೊಂದ್ಕಡೆ 'ಟಗರು' ಕಾಂಬಿನೇಷನ್ ಒಟ್ಟಿಗೆ ನಟಿಸದೇ ಇದ್ದರೂ 'ಬೈರಾಗಿ' ಸಿನಿಮಾಗಾಗಿ ಶಿವರಾಜ್‌ಕುಮಾರ್, ಡಾಲಿ ಧನಂಜಯ್ ಹಾಗೂ ವಸಿಷ್ಠ ಸಿಂಹ ಜೊತೆಯಾಗಿರೋದು ಫ್ಯಾನ್ಸ್‌ಗೆ ಖುಷಿಕೊಟ್ಟಿದೆ. ಹಾಗಂತ ಇದು 'ಟಗರು ಪಾರ್ಟ್ 2' ಅಲ್ಲ.

More from Filmibeat

English summary
Actor Vasishta Simha sung A Song In Shivarajkumar Dhananjay Movie Bairagee, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X