»   » ಬೈಕ್ ಆಕ್ಸಿಡೆಂಟ್ ನಿಂದ ಬಚಾವ್ ಆದ ಅದಾ ಶರ್ಮಾ

ಬೈಕ್ ಆಕ್ಸಿಡೆಂಟ್ ನಿಂದ ಬಚಾವ್ ಆದ ಅದಾ ಶರ್ಮಾ

Posted By:
Subscribe to Filmibeat Kannada

ಅದಾ ಶರ್ಮಾ ಗೊತ್ತಲ್ವಾ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ರಣವಿಕ್ರಮ' ಚಿತ್ರದಲ್ಲಿ ಜೋಡಿಯಾಗಿದ್ದ ನಟಿ ಅದಾ ಶರ್ಮಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತೆಲುಗು ಸಿನಿಮಾವೊಂದಕ್ಕಾಗಿ ಬೈಕ್ ಏರಿ ಆಕ್ಷನ್ ಮಾಡುತ್ತಿದ್ದ ಅದಾ ಶರ್ಮಾ, ಅಚಾನಕ್ಕಾಗಿ ಕೆಳಗೆ ಬಿದ್ದಿದ್ದಾರೆ. ಅದಾ ಶರ್ಮಾ ಕೈ ಮತ್ತು ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಜ್ವರದಿಂದ ನರಳುತ್ತಿರುವ ಅದಾ ಶರ್ಮಾ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ರೆಸ್ಟ್ ಮಾಡುತ್ತಿದ್ದಾರೆ.

Actress Adah Sharma escapes with minor injuries in Bike Mishap

ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಹೈದರಾಬಾದ್ ನಲ್ಲಿ ಅದಾ ಶರ್ಮಾ ನಟಿಸುತ್ತಿರುವ ತೆಲುಗು ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸುತ್ತಿರುವ ಅದಾ ಶರ್ಮಾಗೆ ಆಕ್ಷನ್ ಸೀಕ್ವೆನ್ಸ್ ಕೂಡ ಇದೆ. ಬೈಕ್ ಏರಿ ಸ್ಟಂಟ್ ಮಾಡಬೇಕಿದ್ದ ಅದಾ ಶರ್ಮಾ ಆಯತಪ್ಪಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. [ಹಾಸ್ಯನಟ ಬುಲ್ಲೆಟ್ ಪ್ರಕಾಶ್ ಪ್ರಾಣಾಪಾಯದಿಂದ ಪಾರು]

ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಆಕ್ಸಿಡೆಂಟ್ ನಲ್ಲಿ ಅದಾ ಶರ್ಮಾ ತೀವ್ರ ಗಾಯಗೊಂಡಿದ್ದಾರೆ ಅಂತೆಲ್ಲಾ ಟಾಲಿವುಡ್ ನಲ್ಲಿ ಬ್ರೇಕಿಂಗ್ ನ್ಯೂಸ್ ಆಗಿತ್ತು. ಆದ್ರೆ, ''ಯಾವುದೇ ಬಸ್ ಡಿಕ್ಕಿ ಹೊಡೆದಿಲ್ಲ. ಬೈಕ್ ನಿಂದ ಬಿದ್ದದ್ದು ಮಾತ್ರ ನಿಜ. ನಾನು ಬದುಕಿದ್ದೇನೆ.'' ಅಂತ ಟ್ವಿಟ್ಟರ್ ನಲ್ಲಿ ಅದಾ ಶರ್ಮಾ ಸ್ಪಷ್ಟ ಪಡಿಸಿದ್ದಾರೆ.

ಸದ್ಯ ಜ್ವರದಿಂದ ನರಳುತ್ತಿರುವ ಅದಾ ಶರ್ಮಾ ಬೇಗ ಗುಣಮುಖರಾಗಲಿ ಅನ್ನೋದು ಅವರ ಅಭಿಮಾನಿಗಳ ಹಾರೈಕೆ. (ಏಜೆನ್ಸೀಸ್)

English summary
Multilingual Actress Adah Sharma had a narrow escape with minor injuries during the bike stunt which was shot for Telugu movie in Hyderabad.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada