ಶಿವಣ್ಣ-ಡಾಲಿಯ 'ಆಪರೇಷನ್ ಡ್ರೀಮ್ ಥಿಯೇಟರ್ 666'ನಲ್ಲಿ ಏಜೆಂಟ್ ಕಾವೇರಿ; ನಟಿ ಅದಿತಿ ಬಾಲನ್

ಈ ವರ್ಷದ ಸ್ಯಾಂಡಲ್‌ವುಡ್‌ನ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಆಪರೇಷನ್ ಡ್ರೀಮ್ ಥಿಯೇಟರ್ 666'. 'ಗೋಧಿ ಬಣ್ಣ ಸಾಧಾರಾಣ ಮೈಕಟ್ಟು', 'ಕವಲುದಾರಿ', 'ಸಪ್ತ ಸಾಗರದಾಚೆ ಎಲ್ಲೋ' ಅಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಹೇಮಂತ್ ರಾವ್ ಈ ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹೀಗಾಗಿ 'ಆಪರೇಷನ್ ಡ್ರೀಮ್ ಥಿಯೇಟರ್ 666' ಮೇಲೆ ನಿರೀಕ್ಷೆ ಹೆಚ್ಚಾಗಿದೆ.

ಸೆಂಚುರಿಸ್ಟಾರ್ ಶಿವರಾಜ್‌ಕುಮಾರ್, ಡಾಲಿ ಧನಂಜಯ್ ಸೇರಿದಂತೆ ದೊಡ್ಡ ತಾರಾಳಗವೇ ಈ ಸಿನಿಮಾದಲ್ಲಿದೆ. ಈಗ 'ಆಪರೇಷನ್ ಡ್ರೀಮ್ ಥಿಯೇಟರ್ 666' ಸಿನಿಮಾ ತಂಡಕ್ಕೆ ಮತ್ತೊಮ್ಮ ಪ್ರತಿಭಾನ್ವಿತ ನಟಿಯ ಸೇರ್ಪಡೆಯಾಗಿದೆ. ತಮ್ಮ ಬೊಕ್ಕಸದಿಂದ ಮತ್ತೊಂದು ಪ್ರಮುಖ ಪಾತ್ರವನ್ನು ಚಿತ್ರತಂಡ ರಿವೀಲ್ ಮಾಡಿದೆ. ತಮಿಳು ಚಿತ್ರರಂಘದ ಖ್ಯಾತ ನಟಿ, ತಮಿಳಿನ ರಾಜ್ಯ ಪ್ರಶಸ್ತಿ ವಿಜೇತೆ ಅದಿತಿ ಬಾಲನ್ ಈ ಸಿನಿಮಾಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ.

Actress Adithi Balan entered as agent Kaveri in Shivarajkumar movie Operation Dream Theater 666

'ಆಪರೇಷನ್ ಡ್ರೀಮ್ ಥಿಯೇಟರ್ 666'ನಲ್ಲಿ ಅದಿತಿ ಬಾಲನ್ ಅವರು ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅದಿತಿ ಬಾಲನ್ ತಮಿಳುನಾಡಿನ ಜನಪ್ರಿಯ ನಟಿ. 'ಅರುವಿ' ಎಂಬ ತಮ್ಮ ಮೊದಲ ಚಿತ್ರದಲ್ಲಿ ಉತ್ತಮ ಅಭಿನಯದಿಂದ ಎಲ್ಲರ ಮನೆ ಮಾತಾಗಿದ್ದರು. ತದನಂತರ 'ಕ್ಯಾಪ್ಟನ್ ಮಿಲ್ಲರ್', 'ಪಡವೆಟ್ಟು' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ 'ಆಪರೇಷನ್ ಡ್ರೀಮ್ ಥಿಯೇಟರ್ 666'ನಲ್ಲಿ ಏಜೆಂಟ್ ಕಾವೇರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಹೇಮಂತ್ ರಾವ್ ತಮ್ಮ ಸಿನಿಮಾದಲ್ಲಿ ಅದಿತಿ ಬಾಲನ್ ಅವರ ಪಾತ್ರದ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಿದ್ದಾರೆ. 'ಆಪರೇಷನ್ ಡ್ರೀಮ್ ಥಿಯೇಟರ್ 666'ನಲ್ಲಿ ಈಗಾಗಲೇ ಶಿವಣ್ಣ ಹಾಗೂ ಡಾಲಿ ಧನಂಜಯ್ ಪಾತ್ರಗಳು ಕಿಕ್ ಕೊಟ್ಟಿವೆ. ರೆಟ್ರೋ ಲುಕ್‌ನಲ್ಲಿ ಇವರು ಸಖತ್ ಆಗಿ ಕಾಣಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

'ಆಪರೇಷನ್ ಡ್ರೀಮ್ ಥಿಯೇಟರ್ 666'ನಲ್ಲಿ ಕರುನಾಡ ಚಕ್ರವರ್ತಿ ಡಾ‌ ಶಿವರಾಜಕುಮಾರ್ ಏಜೆಂಟ್ ಪ್ರಕಾಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಸೆಂಚರಿ ಸ್ಟಾರ್ ಅಭಿಮಾನಿಗಳ ಹೃದಯ ಗೆದ್ದಿತ್ತು. ಶಿವಣ್ಣ ಈ ಪಾತ್ರವು 'ಆಪರೇಷನ್ ಡೈಮಂಡ್ ರಾಕೆಟ್' ಸಿನಿಮಾದಲ್ಲಿನ ಡಾ. ರಾಜಕುಮಾರ್ ಅವರ ಪಾತ್ರಕ್ಕೆ ಗೌರವ ಸಲ್ಲಿಸಲಿದೆ. ನಂತರ ಚಿತ್ರತಂಡ ನಟರಾಕ್ಷಸ ಡಾಲಿ ಧನಂಜಯ್‌ ಅವರನ್ನು ಏಜೆಂಟ್ ಶಂಕರ್ ಆಗಿ ಪರಿಚಯಿಸಿದೆ. ಇದೀಗ ನಟಿ ಅದಿತಿ ಬಾಲನ್ ಅವರನ್ನು ಏಜೆಂಟ್ ಕಾವೇರಿಯಾಗಿ ಪರಿಚಯಿಸಿ ಪ್ರೇಕ್ಷಕರ ಕುತೂಹಲ ದುಪ್ಪಟ್ಟು ಮಾಡಿದೆ.

ಈ‌ ಸಿನಿಮಾ ಈಗಾಗಲೇ ಐದನೇ ಹಂತ ಶೂಟಿಂಗ್ ಅನ್ನು ಮುಗಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಕಾಲಿಡುತ್ತಿದೆ. ಹೇಮಂತ್ ರಾವ್ ನಿರ್ದೇಶನದ 'ಆಪರೇಷನ್ ಡ್ರೀಮ್ ಥಿಯೇಟರ್ 666‌' ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್, ನಟ ರಾಕ್ಷಸ ಡಾಲಿ ಧನಂಜಯ್, ಪ್ರಿಯಾಂಕಾ ಮೋಹನ್, ಅದಿತಿ ಬಾಲನ್ ಮುಂತಾದವರು ನಟಿಸಿದ್ದು, ಈ ಚಿತ್ರವನ್ನು ಡಾ. ವೈಶಾಖ್ ಜೆ ಗೌಡ ನಿರ್ಮಾಣ ಮಾಡುತ್ತಿದ್ದಾರೆ.

'ಆಪರೇಷನ್ ಡ್ರೀಮ್ ಥಿಯೇಟರ್ 666' ಸಿನಿಮಾಗೆ ಕನ್ನಡದ ಟಾಪ್ ಸಂಗೀತ ನಿರ್ದೇಶಕ ಚರಣ್ ರಾಜ್ ಟ್ಯೂನ್ ಹಾಕುತ್ತಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹರಾಗಿ ಕೆಲಸ ಮಾಡಿದ್ದಾರೆ. ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ಡಿಸೈನ್ ಮಾಡಿದ್ದು, ಇಂಚರ ಸುರೇಶ್ ಕಾಸ್ಯೂಮ್ ಡಿಸೈನ್ ಮಾಡಿದ್ದಾರೆ. 'ಆಪರೇಷನ್ ಡ್ರೀಮ್ ಥಿಯೇಟರ್ 666' ಒಂದು ಆಕ್ಷನ್, ಡ್ರಾಮಾ ಕಮ್ ಥ್ರಿಲ್ಲರ್ ಸಿನಿಮಾ ಆಗಿತ್ತು. ಇದೊಂದು ವಿನೂತನ ಪ್ರಯತ್ನ ಆಗಿದ್ದು, ಏಜೆಂಟ್‌ಗಳನ್ನು ಮುಖ್ಯ ಪಾತ್ರಗಳಲ್ಲಿ ತೋರಿಸಲಾಗಿದೆ. ಇದೊಂದು ವಿಭಿನ್ನವಾದ ಥ್ರಿಲ್ ಅನುಭವವನ್ನು ಪ್ರೇಕ್ಷಕರಿಗೆ ನೀಡಲಿದೆ. ಈ ಸಿನಿಮಾವನ್ನು ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿದ್ದು, ಈ ವರ್ಷವೇ ಬಿಡುಗಡೆಯಾಗಲಿದೆ.

More from Filmibeat

English summary
Actress Adithi Balan entered as agent Kaveri in Shivarajkumar movie Operation Dream Theater 666.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X