Don't Miss!
- Technology
ಫೆಬ್ರವರಿ ತಿಂಗಳಿನಲ್ಲಿ ಅಬ್ಬರಿಸಲಿರುವ ಪ್ರಮುಖ ಸ್ಮಾರ್ಟ್ಫೋನ್ಗಳ ವಿವರ ಇಲ್ಲಿದೆ!
- News
Philips Layoffs : ಫಿಲೀಪ್ಸ್ನಿಂದ 6000 ಉದ್ಯೋಗಿಗಳ ವಜಾ
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪರ್ಫೆಕ್ಟ್ ಗರ್ಲ್' ಅದಿತಿ ಪ್ರಭುದೇವ ಮದುವೆಯ ಅಲ್ಬಮ್: ಹಸೆಮಣೆಯಲ್ಲೇ ಮುತ್ತಿಟ್ಟ ಪತಿ!
ಸ್ಯಾಂಡಲ್‌ವುಡ್‌ನ 'ಪರ್ಫೆಕ್ಟ್ ಗರ್ಲ್' ಅದಿತಿ ಪ್ರಭುದೇವ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊಡಗಿನ ಹುಡುಗ ಯಶಸ್ ಜೊತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು (ನವೆಂಬರ್ 28) ಸಪ್ತಪದಿ ತುಳಿದಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಅದಿತಿ ಪ್ರಭುದೇವ ಹಾಗೂ ಯಶಸ್ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಎರಡೂ ಕುಟುಂಬ ಹಿರಿಯರು ಈ ಶುಭ ಸಮಾರಂಭದಲ್ಲಿ ಭಾಗಿಯಾಗಿದ್ದರು. ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಂತೆ ಈ ವಿಷಯವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದರು.
ಶ್ಯಾನೇ
ಟಾಪ್
ಆಗಿತ್ತು
ಆರತಕ್ಷತೆ:
ಅದಿತಿ
ಪ್ರಭುದೇವ
ನಮ್ಮ
ಸಂಬಂಧಿಕರು
ಎಂದ
ಸಿಎಂ!
ಅದಿತಿ ಪ್ರಭುದೇವ ಸ್ಯಾಂಡಲ್‌ವುಡ್ ಬ್ಯುಸಿ ನಟಿ. ಮದುವೆ ಕೇವಲ ಒಂದು ವಾರವಿರುವಾಗಲೇ ಅದಿತಿ ಪ್ರಭುದೇವ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ಜೊತೆ ಸಿನಿಮಾ ಮುಗಿಸಿ ಬಂದಿದ್ದರು. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅದಿತಿ ಪ್ರಭುದೇವ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಅದಿತಿ ಹಾಗೂ ಯಶಸ್ ವಿವಾಹದ ಅಪರೂಪದ ಕ್ಷಣಗಳು ಸೆರೆ ಹಿಡಿದ ಫೋಟೊಗಳು ಇಲ್ಲಿವೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ
ಅದಿತಿ ರೈತನನ್ನೇ ಮದುವೆ ಆಗುತ್ತೇನೆ ಎಂದು ಹೇಳಿದ್ದರು. ಅದಿತಿ ನುಡಿದಂತೆ ನಡೆದುಕೊಂಡಿದ್ದಾರೆ. ನಟಿ ಕೊಡಗಿನ ಕಾಫಿ ಪ್ಲ್ಯಾಂಟರ್ ಹಾಗೂ ಉದ್ಯಮಿಯೂ ಆಗಿರುವ ಯಶಸ್ ಜೊತೆ ಇಂದು (ನವೆಂಬರ್ 28) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೊಡಗು ಸಂಪ್ರದಾಯದಂತೆ ಮದುವೆ
ಅದಿತಿ ಪ್ರಭುದೇವ ದಾವಣಗೆರೆ ಮೂಲದವರು. ಯಶಸ್ ಕೊಡಗು ಮೂಲದವರು. ಇಬ್ಬರ ಸಂಪ್ರದಾಯ ಬೇರೆ ಬೇರೆಯಾಗಿದ್ದರೂ, ಕೊಡಗಿ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ
ಕಳೆದ ಒಂದು ತಿಂಗಳಿಂದ ಅದಿತಿ ಹಾಗೂ ಯಶಸ್ ಇಬ್ಬರೂ ವಿವಾಹಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಅಂದುಕೊಂಡಂತೆ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಹಣೆಗೆ ಮುತ್ತಿಕ್ಕಿದ ಯಶಸ್
ಅದಿತಿ ಪ್ರಭುದೇವ ಹಾಗೂ ಯಶಸ್ ಇಬ್ಬರೂ ಸತಿ-ಪತಿಗಳಾಗಿದ್ದಾರೆ. ಅದಿತಿಗೆ ಮಾಂಗಲ್ಯ ಧಾರಣೆ ಮಾಡುತ್ತಿದ್ದಂತೆ ಖುಷಿಯಲ್ಲಿ ಪತ್ನಿಗೆ ಮುತ್ತಿಕ್ಕಿದ್ದಾರೆ.

ಬೆಳಿ-ಕೆಂಪು ಥೀಮ್ ಡ್ರೆಸ್‌ನಲ್ಲಿ ಮಿಂಚಿಂಗ್
ನಟಿ ಅದಿತಿ ಪ್ರಭುದೇವ ಕೆಂಪು ಹಾಗೂ ಬಿಳಿ ಬಣ್ಣದ ಸೀರೆಯುಟ್ಟು ಕಂಗೊಳಿಸಿದ್ದರು. ಅತ್ತ ಯಶಸ್ ಕೂಡ ಬಿಳಿ ಬಣ್ಣದ ಡ್ರೆಸ್‌ನಲ್ಲಿ ಕೆಂಪು ಬಣ್ಣದ ಶಲ್ಯ ಹೊದ್ದು ಮಿಂಚಿದ್ದಾರೆ.
Photo Courtesy: Happening Pixels