ಭಾವಿ ಪತಿ ಊರು ಕೊಡಗಿನಲ್ಲಿ ಹೊಸ ವರ್ಷ ಆಚರಿಸಿದ ಅದಿತಿ ಪ್ರಭುದೇವ: ವಿಡಿಯೋ ಹಂಚಿಕೊಂಡ ನಟಿ

ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಹೆಚ್ಚು ಬ್ಯುಸಿಯಾಗಿರುವ ನಟಿಯರ ಪಟ್ಟಿಯಲ್ಲಿ ಅದಿತಿ ಕೂಡ ಇದ್ದಾರೆ. ವೃತ್ತಿ ಬದುಕಿನಲ್ಲಿ ಯಶಸ್ಸಿನ ತುತ್ತ ತುದಿಯಲ್ಲಿರುವಾಗಲೇ ಅದಿತಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೊಡಗಿನಲ್ಲಿ ಕಾಫಿ ತೋಟದ ಮಾಲೀಕರಾಗಿರುವ ಯಶಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿದ್ದಾರೆ.

ಇಲ್ಲಿವರೆಗೂ ಭಾವಿ ಪತಿ ಯಶಸ್ ಜೊತೆಗಿನ ಒಂದು ಫೋಟೊವನ್ನು ಶೇರ್ ಮಾಡಿ, ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಅಭಿಮಾನಿಗಳಿಗೆ ತಿಳಿಸಿದ್ದರು. ಆದ್ರೀಗ, ಯಶಸ್ ಜೊತೆ ಹೊಸ ವರ್ಷ ಸಂಭ್ರಮಾಚರಣೆ ಮಾಡಿದ ಘಳಿಗೆಯನ್ನು ವಿಡಿಯೋ ಮಾಡಿದ್ದಾರೆ. ಕೊಡಗು, ಅಲ್ಲಿನ ಕಾಫಿ ಪ್ಲಾಂಟೇಷನ್, ಕಾಫಿ ಹಣ್ಣು, ಕಾಳು ಮೆಣಸು, ಪಶ್ಚಿಮ ಘಟ್ಟಗಳು, ಕಾಡಾನೆ, ಕಾಡು ಕೋಣ ಎದುರಾದ ಬಗ್ಗೆ ಸವಿಸ್ತಾರವಾಗಿ ವಿಡಿಯೋ ಮಾಡಿ ವಿವರಿಸಿದ್ದಾರೆ.

ಕಾಫಿ ಹಣ್ಣು ನೋಡಿ ಅಚ್ಚರಿ ಸೂಚಿಸಿದ ಅದಿತಿ

ಕಾಫಿ ಹಣ್ಣು ನೋಡಿ ಅಚ್ಚರಿ ಸೂಚಿಸಿದ ಅದಿತಿ

"ಫಸ್ಟ್ ಟೈಮ್ ನನ್ನ ಲೈಫ್‌ನಲ್ಲಿ ನಾನು ಕಾಫಿ ಎಸ್ಟೇಟ್‌ಗೆ ಹೋಗುತ್ತಿದ್ದೇನೆ. ನನಗೆ ನಿಜ ಗೊತ್ತಿರಲಿಲ್ಲ. ಕಾಫಿ ಗಿಡ ಹೀಗಿರುತ್ತೆ ಅಂತ. ನಾನು ಅಂದ್ಕೊಂಡಿದ್ದೆ, ಕಾಫಿ ಹಣ್ಣು ಕಿತ್ತು, ಹೀಗೆ ವಾಸನೆ ನೋಡಿದ ತಕ್ಷಣ ಕಾಫಿ ಸ್ಮೆಲ್ ಬರುತ್ತೆ ಅಂತ. ಏನೂ ಬರುತ್ತಿಲ್ಲ. ಆಮೇಲೆ ಗೊತ್ತಾಗಿದ್ದು, ಈ ತರ ಹಣ್ಣು ಒಳಗಡೆ ಬೀಜಗಳಿರುತ್ತೆ. ಇದನ್ನು ಡ್ರೈ ಮಾಡಿ, ರೋಸ್ಟ್ ಮಾಡಿದ ಮೇಲೆ ಕಾಫಿ ವಾಸನೆ ಬರುತ್ತೆ. ಚೆರ್ರಿ ಫ್ರೂಟ್ ತರ ಇದೆ ಇದು ಕಾಫಿ ಅಂತೆ. ಅಂದ್ಕೊಂಡಿದ್ದೇ ಬೇರೆ, ಇರುವುದೇ ಬೇರೆ." ಎಂದು ಕಾಫಿ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಬಾವಿ ಪತಿ ಪರಿಚಯಿಸಲು ಸೋತ ಅದಿತಿ

ಬಾವಿ ಪತಿ ಪರಿಚಯಿಸಲು ಸೋತ ಅದಿತಿ

ಹೊಸ ವರ್ಷಕ್ಕೆ ಅದಿತಿ ಪ್ರಭುದೇವ ಮಾಡಿದ ವಿಡಿಯೋದಲ್ಲಿ ಭಾವಿ ಪತಿ ಯಶಸ್ ಅನ್ನು ತೋರಿಸುವ ಪ್ರಯತ್ನ ಮಾಡಿದ್ದರು. ಆದರೆ, ತನ್ನ ಅಭಿಮಾನಿಗಳಿಗೆ ವಿಡಿಯೋದಲ್ಲಿ ಪರಿಚಯಿಸಲು ವಿಫಲವಾಗಿದ್ದಾರೆ. ಇಡೀ ವಿಡಿಯೋದಲ್ಲಿ ಎಲ್ಲಿಯೂ ಒಮ್ಮೆಯೂ ಯಶಸ್ ಮುಖ ತೋರಿಸುವುದಿಲ್ಲ. "ಒಮ್ಮೆ ಹಿಂತಿರುಗಿ ನೋಡಿ ಅಂತ ಅದಿತಿ ಕರೆದರೂ ಯಶಸ್ ಒಪ್ಪಿಕೊಂಡಿಲ್ಲ." ಹೀಗಾಗಿ ಭಾವಿ ಪತಿಯನ್ನು ಪರಿಚಯಿಸುವಲ್ಲಿ ವಿಫಲರಾಗಿದ್ದಾರೆ.

ಅದಿತಿ-ಯಶಸ್ ಹೊಸ ವರ್ಷದ ಸೆಲೆಬ್ರೆಷನ್

ಅದಿತಿ-ಯಶಸ್ ಹೊಸ ವರ್ಷದ ಸೆಲೆಬ್ರೆಷನ್

ಯಶಸ್ ಮನೆಯಿಂದ ಕೆಲವೇ ನಿಮಿಷಗಳ ದೂರದಲ್ಲಿ ಪಶ್ಚಿಮ ಘಟ್ಟಗಳಿವೆ. ಆ ಘಟ್ಟಗಳ ಮೇಲೆ ಟೆಂಟ್ ಹಾಕಿಕೊಂಡು ಹೊಸ ವರ್ಷವನ್ನು ಸೆಲೆಬ್ರೆಟ್ ಮಾಡಿದ್ದಾರೆ. ಈ ವೇಳೆ ಸಾಗುವ ದಾರಿಯಲ್ಲಿ ಕಾಡು ಕೋಣ, ಕಾಡಾನೆಯನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಫೈಯರ್ ಕ್ಯಾಂಪ್ ಹಾಕೊಂಡು ಎಂಜಾಯ್ ಮಾಡಿದ್ದಾರೆ. ಬೆಟ್ಟದಿಂದ ಹರಿದು ಬರುವ ಫ್ರೆಶ್ ನೀರನ್ನು ಕುಡಿದು ಖುಷಿ ಪಟ್ಟಿದ್ದಾರೆ. ಪ್ರಕೃತಿ ಸೌಂದರ್ಯವನ್ನು ಕಂಡು ಎಂಜಾಯ್ ಮಾಡಿದ್ದಾರೆ.

ಶುಭ ಹಾರೈಸಿದ ಅದಿತಿ ಪ್ರಭುದೇವ

"ನಾನು ಈಗ ಕೊಡಗಿನಲ್ಲಿ ಇದ್ದೀನಿ. ನನ್ನನ್ನು ಕೊಡಗಿಗೆ ಕರೆದುಕೊಂಡು ಬಂದಿದ್ದಾರೆ. ಈ ವರ್ಷದ ಕೊನೆಯ ದಿನ ಮುಂದಿನ ವರ್ಷಕ್ಕೆ ಎಂಟ್ರಿಯಾಗುತ್ತಿದ್ದೇವೆ. ಈ ವಿಡಿಯೋ ಪೋಸ್ಟ್ ಮಾಡುವಷ್ಟರಲ್ಲಿ ಮುಂದಿನ ವರ್ಷ ಬಂದಾಗಿರುತ್ತೆ. 2022 ನಿಮ್ಮ ಜೀವನದಲ್ಲಿ ಸಾಕಷ್ಟು ಖುಷಿ ತರಲಿ, ಎಲ್ಲರೂ ನಗುನಗುತ್ತಾ ಇರಿ. ಆರೋಗ್ಯ ಭಾಗ್ಯ, ನೀವು ಅಂದ್ಕೊಂಡಿರುವ ಎಲ್ಲಾ ಕನಸುಗಳೂ ಈಡೇರಲಿ." ಎಂದು ಅದಿತಿ ಪ್ರಭುದೇವ ಹೊಸ ವರ್ಷ ಶುಭಾಶಯಗಳನ್ನು ತಿಳಿಸಿದ್ದಾರೆ.

More from Filmibeat

English summary
Actress Aditi Prabhudeva celebrates new year with boyfriend Yashas In Kodagu video viral. She showed coffee plantation, beautifull nature in her video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X