Don't Miss!
- Technology
ನಾಯ್ಸ್ ಬಡ್ಸ್ ಕಾಂಬ್ಯಾಟ್ ಇಯರ್ಬಡ್ಸ್ ಅನಾವರಣ; ದೀರ್ಘ ಬ್ಯಾಟರಿ ಬ್ಯಾಕಪ್!
- Sports
Women's IPL: ಬೆಂಗಳೂರು ತಂಡ ಖರೀದಿಸಿದ ಆರ್ಸಿಬಿ ಫ್ರಾಂಚೈಸಿ: 4669 ಕೋಟಿ ರುಪಾಯಿಗೆ 5 ತಂಡಗಳು ಹರಾಜು
- News
ಮೆಟ್ರೋದಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯ ಹುಟ್ಟಿಸಿದ 'ನಾಗವಲ್ಲಿ': ವಿಡಿಯೋ
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Finance
Budget 2023 Expectations: ಚುನಾವಣೆಗೂ ಮುನ್ನ ಕೇಂದ್ರ ಬಜೆಟ್ನಿಂದ ಕರ್ನಾಟಕ ಸರ್ಕಾರದ ನಿರೀಕ್ಷೆಗಳಿವು
- Automobiles
ಧೂಳೆಬ್ಬಿಸಲು ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್: ಬೆಲೆ...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟಿ ಅಮೂಲ್ಯ ಅದ್ದೂರಿ ಪಾರ್ಟಿ: ಹರಿದು ಬಂತು ಸ್ಯಾಂಡ್‌ವುಡ್ ತಾರೆಯರ ದಂಡು!
ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ಇಬ್ಬರೂ ಕೂಡ ಮೊದ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ವಿಚಾರವನ್ನು ಅವರು ಹಲವು ದಿನಗಳ ಹಿಂದೆಯೇ ಹಂಚಿಕೊಂಡಿದ್ದರು. ಈ ಜೋಡಿಗೆ ಶುಭವಾಗಲಿ ಎಂದು ಅಭಿಮಾನಿ ಬಳಗ ಹರಸಿ ಹಾರೈಸಿತು. ಇತ್ತೀಚೆಗೆ ಅವರ ಸೀಮಂತ ಕಾರ್ಯ ಕೂಡ ಅದ್ದೂರಿಯಾಗಿ ನೆರವೇರಿದೆ.
ಕೆಲವು ದಿನಗಳ ಹಿಂದೆ ಅಮೂಲ್ಯ ಫೋಟೊಗಳನ್ನು ಶೇರ್ ಮಾಡಿಕೊಳ್ಳುವುದರ ಮೂಲಕ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಜೊತೆಗೆ ಅವರ ಬೇಬಿ ಬಂಪ್ ಫೋಟೋ ಶೂಟ್‌ಕೂಡ ವೈರಲ್ ಆಗಿತ್ತು. ಇದೀಗ ಅಮೂಲ್ಯ ಅವರ ಕುಟುಂಬ ಈ ಸಂತಸವನ್ನು ತಮ್ಮ ಸಿನಿಮಾ ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ.
ಗೋಲ್ಡನ್
ಕ್ವೀನ್
ಅಮೂಲ್ಯ
ಅದ್ಧೂರಿ
ಸೀಮಂತ
ಶಾಸ್ತ್ರ:
ಸೋಶಿಯಲ್
ಮೀಡಿಯಾದಲ್ಲಿ
ಫೋಟೊಗಳು
ವೈರಲ್
ಸೀಮಂತ
ಕಾರ್ಯವನ್ನು
ಮನೆಯಲ್ಲೇ,
ಕುಟುಂಬಸ್ಥರ
ಸಮ್ಮುಖದಲ್ಲಿ
ಮಾಡಲಾಗಿತ್ತು.
ಅಲ್ಲಿ
ಹೆಚ್ಚಾಗಿ
ಸಿನಿಮಾ
ತಾರೆಯರು
ಕಾಣಿಸಿಕೊಂಡಿರಲಿಲ್ಲ.
ಹಾಗಾಗಿ
ಅವರು
ಸ್ಯಾಂಡಲ್‌ವುಡ್
ಸ್ನೇಹಿತರಿಗಾಗಿ
ಬೇಬಿ
ಶವರ್
ಪಾರ್ಟಿ
ಮಾಡಿದ್ದಾರೆ.
ಈ
ಕಾರ್ಯಕ್ರಮದ
ವಿಶೇಷತೆ
ಏನಿತ್ತು.
ಯಾರೆಲ್ಲಾ
ಭಾಗಿ
ಆಗಿದ್ದರು
ಎನ್ನುವ
ಬಗ್ಗೆ
ಮುಂದೆ
ಓದಿ...
ಗುಡ್
ನ್ಯೂಸ್
ಕೊಟ್ಟ
ನಟಿ
ಅಮೂಲ್ಯ:
ಸಂತಸದಲ್ಲಿ
ಕುಟುಂಬ!

ಅಮೂಲ್ಯ ಬೇಬಿ ಶವರ್‌ನಲ್ಲಿ ಸ್ಯಾಂಡವುಲ್ ತಾರೆಯರು!
ನಟಿ ಅಮೂಲ್ಯ ಅವರು ಇತ್ತೀಚೆಗೆ ಸೀಮಂತ ಕಾರ್ಯಕ್ರಮದ ಮೂಲಕ ಸುದ್ದಿ ಆಗಿದ್ದರು. ಈಗ ಅಮೂಲ್ಯ ಮತ್ತೇ ಅದೇ ವಿಚಾರಕ್ಕೆ ಗಮನ ಸೆಳೆದಿದ್ದಾರೆ. ಅದರೆ ಈ ಬಾರಿ ಅವರು ಸ್ಯಾಂಡಲ್‌ವುಡ್ ಸ್ನೇಹಿತರಿಗಾಗಿ ಪಾರ್ಟಿ ಮಾಡಿದ್ದಾರೆ. ಅಮೂಲ್ಯ ಅವರು ಚಿತ್ರರಂಗದ ಸ್ನೇಹಿತರೊಂದಿಗೆ ತಮ್ಮ ಬೇಬಿ ಶವರ್ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಬಹುತೇಕ ಕನ್ನಡದ ಸಿನಿಮಾ ತಾರೆಯರು ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಮೂಲ್ಯ ಅವರ ಕುಟುಂಬ ಕೂಡ ಭಾಗಿ ಆಗಿದೆ.

ಪಿಂಕ್ ಗೌನ್‌ನಲ್ಲಿ ತುಂಬು ಗರ್ಭಿಣಿ ಅಮೂಲ್ಯ!
ನಟಿ ಅಮೂಲ್ಯ ಅವರು ತಮ್ಮ ಬೇಬಿ ಶವರ್ ಕಾರ್ಯಕ್ರಮದಲ್ಲಿ ಗೊಂಬೆಯಂತೆ ಕಂಗೊಳಿಸಿದ್ದಾರೆ. ಅಮೂಲ್ಯ ಈ ಹಿಂದೆ ಸೀಮಂತ ಕಾರ್ಯದಲ್ಲಿ ರೇಷ್ಮೆ ಸೀರೆಯುಟ್ಟು ಕಂಗೊಳಿಸಿದ್ದರು. ಆದರೆ ಈ ಬೇಬಿ ಶವರ್ ಕಾರ್ಯಕ್ರಮದಲ್ಲಿ ಅಮೂಲ್ಯ ಅವರು ತಿಳಿ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಜೊತೆಗೆ ಪಾರ್ಟಿ ಥೀಮ್ ಹಲವು ಬಣ್ಣಗಳಿಂದ ಕೂಡಿತ್ತು. ಬಲೂನ್ ಮತ್ತು ಹೂವುಗಳಿಂದ ವೇದಿಕೆ ಅಲಂಕಾರಗೊಂಡಿತ್ತು.

ರಾಧಿಕಾ ಪಂಡಿತ್, ಹರಿಪ್ರಿಯಾ, ಶೃತಿ, ಸುಧಾರಾಣಿ!
ಅಮೂಲ್ಯ ಬೇಬಿ ಶವರ್ ಕಾರ್ಯಕ್ರಮದಲ್ಲಿ ಕನ್ನಡದ ಹಲವು ತಾರೆಯರು ಭಾಗಿಯಾಗಿದ್ದಾರೆ. ನಟಿ ರಾಧಿಕಾ ಪಂಡಿತ್, ಹರಿಪ್ರಿಯಾ, ಸುಧಾರಾಣಿ, ಕಾರುಣ್ಯ ರಾಮ್, ಆಶಿಕಾ ರಂಗನಾಥ್, ಭಾರತಿ, ಶೃತಿ, ಮಾಳವಿಕ ಅವಿನಾಶ್, ಉಪೇಂದ್ರ ದಂಪತಿ, ಗಣೇಶ್ ಕುಟುಂಬ ಸೇರಿದಂತೆ ಹಲವು ತಾರೆಯರು ಅಮೂಲ್ಯ ಬೇಬಿ ಶವರ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಎಲ್ಲರ ಸಮ್ಮುಖದಲ್ಲಿ ಅಮೂಲ್ಯ ಅವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಅಮೂಲ್ಯ ಅವರ ಬಗೆಗಿನ ಕ್ರೇಜ್ ಕಡಿಮೆ ಆಗಿಲ್ಲ!
ನಟಿ ಅಮೂಲ್ಯ ಅವರು ಸಿನಿಮಾಗಳಲ್ಲಿ ನಟನೆ ಮಾಡುವುದನ್ನು ಬಿಟ್ಟು ವರ್ಷಗಳೇ ಕಳೆದಿವೆ. ಆದರೂ ಕೂಡ ಅವರು ಅಭಿಮಾನಿಗಳ ಮನಸ್ಸಿಂದ, ಜನರ ಮನಸ್ಸಿಂದ ದೂರ ಆಗಿಲ್ಲ. ಸಿನಿಮಾ ರಂಗದಲ್ಲಿ ಬೇರೆ ನಟಿಯರೂ ಇದ್ದಾರೆ. ಆದರೆ ಅವರೆಲ್ಲರಿಗೂ ಮೀರಿದ ಕ್ರೇಜ್ ಇನ್ನೂ ಅಮೂಲ್ಯ ಅವರ ಬಗ್ಗೆ ಇದೆ. ಅವರ ಮದುವೆ, ನಿಶ್ಚಿತಾರ್ಥ, ಈಗ ಮಗು. ಯಾವುದೇ ವಿಚಾರ ಆದರೂ ಅಮೂಲ್ಯ ಅವರ ಸಂಭ್ರಮವನ್ನು ಜನ ಅಭಿಮಾನಿಗಳು ಸಂಭ್ರಮಿಸುತ್ತಾರೆ ಎನ್ನುವುದು ವಿಶೇಷ.