For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಕ್ವೀನ್ ಅಮೂಲ್ಯ ಅದ್ಧೂರಿ ಸೀಮಂತ ಶಾಸ್ತ್ರ: ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್

  |

  ಸ್ಯಾಂಡಲ್‌ವುಡ್‌ನ ಗೋಲ್ಡನ್ ಕ್ವೀನ್ ಅಮೂಲ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಅಮೂಲ್ಯ ಫೋಟೊಗಳನ್ನು ಶೇರ್ ಮಾಡಿಕೊಳ್ಳುವುದರ ಮೂಲಕ ಅಭಿಮಾನಿಗಳಿಗೆ ಸಂತಸ ಸುದ್ದಿಯನ್ನು ಹಂಚಿಕೊಂಡಿದ್ದರು. ಈಗ ಅಮೂಲ್ಯ ಅವರಿಗೆ ಕುಟುಂಸ್ಥರು ಸೀಮಂತ ಶಾಸ್ತ್ರವನ್ನು ನೆರೆವೇರಿಸಿದ್ದಾರೆ. ಈ ಪೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

  ಅಮೂಲ್ಯಗೆ ಕರ್ನಾಟಕದಲ್ಲಿ ಅವರದ್ದೇ ಆದ ಅಭಿಮಾನಿ ಬಳಗವಿದೆ. ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ಅಮೂಲ್ಯ ವಿವಾಹದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಆದರೂ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ವೀವ್ ಆಗಿರುತ್ತಿದ್ದರು. ಈಗ ಅವರ ಸೀಮಂತ ಫೋಟೊಗಳನ್ನು ಅವರ ಅಭಿಮಾನಿಗಳೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.

  ಅಮೂಲ್ಯ ಅದ್ದೂರಿ ಸೀಮಂತ

  ಅಮೂಲ್ಯ ಅದ್ದೂರಿ ಸೀಮಂತ

  ಗೋಲ್ಡನ್ ಕ್ವೀನ್ ಅಮೂಲ್ಯ ಕೆಲವು ದಿನಗಳ ಹಿಂದಷ್ಟೇ ತುಂಬು ಗರ್ಭಿಣಿಯಾಗಿರುವ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಮೂಲ್ಯ ಬೇಬಿ ಬಂಪ್ ಫೋಟೋಶೂಟ್‌ಗಳನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಶುಭ ಹಾರೈಸಿದ್ದರು. ಈಗ ಸೀಮಂತ ನಡೆದ ಸ್ಥಳವನ್ನು ಅದ್ದೂರಿಯಾಗಿ ಅಲಂಕಾರ ಮಾಡಲಾಗಿತ್ತು. ಹೂವುಗಳು ಹಾಗೂ ಹಸಿರು ತೊರಣಗಳಿಂದ ಸಿಂಗಾರ ಮಾಡಲಾಗಿತ್ತು. ಈ ವೇದಿಕೆಯಲ್ಲಿ ಅಮೂಲ್ಯ ಸೀಮಂತ ಶಾಸ್ತ್ರವನ್ನು ನೆರೆವೇರಿಸಿದರು.

  ಅಮೂಲ್ಯ 7 ತಿಂಗಳ ಗರ್ಭಿಣಿ

  ಅಮೂಲ್ಯ 7 ತಿಂಗಳ ಗರ್ಭಿಣಿ

  ಗೋಲ್ಡನ್ ಕ್ವೀನ್ ಅಮೂಲ್ಯ ಈಗ 7 ತಿಂಗಳ ಗರ್ಭಿಣಿ. ಹೀಗಾಗಿ ಅಮೂಲ್ಯ ಕುಟುಂಬಸ್ಥರು ಅವರ ಸೀಮಂತ ಶಾಸ್ತ್ರವನ್ನು ನೆರೆವೇರಿಸಿದ್ದಾರೆ. ಇದೇ ಸೀಮಂತದ ಫೋಟೋಗಳು ಅಭಿಮಾನಿಗಳ ಸಿಕ್ಕಾಪಟ್ಟೆ ವೈರಲ್ ಮಾಡುತ್ತಿದ್ದಾರೆ.​ ಈ ಸೀಮಂತ ಶಾಸ್ತ್ರದಲ್ಲಿ ಅಮೂಲ್ಯ ಮನೆಯವರು ಹಾಗೂ ಗಂಡನ ಮನೆಯವರು ಸೇರಿದಂತೆ ಆಪ್ತರು ಪಾಲ್ಕೊಂಡಿದ್ದರು. ಅಮೂಲ್ಯ ಪತಿ ಜಗದೀಶ್ ರಾಜಕೀಯ ಹಿನ್ನೆಲೆಯಾಗಿರುವುದರಿಂದ ರಾಜಕೀಯ ಗಣ್ಯರು ಕೂಡ ಆಗಮಿಸಿದ್ದರು.

  ಮದುವೆ ಬಳಿಕ ಚಿತ್ರರಂಗಕ್ಕೆ ಬ್ರೇಕ್

  ಮದುವೆ ಬಳಿಕ ಚಿತ್ರರಂಗಕ್ಕೆ ಬ್ರೇಕ್

  ಜಗದೀಶ್‌ರನ್ನು ವಿವಾಹವಾದ ಬಳಿಕ ಅಮೂಲ್ಯ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಸಿನಿಮಾದಲ್ಲಿ ನಟಿಸದೇ ಹೋದರೂ, ಚಿತ್ರರಂಗದಿಂದ ದೂರ ಆಗಿರಲಿಲ್ಲ. ಗೋಲ್ಡನ್ ಸ್ಟಾರ್ ಗಣೇಶ್ ಕುಟುಂಬ ಹಾಗೂ ಚಿತ್ರರಂಗದ ಗಣ್ಯರೊಂದಿಗೆ ಒಡನಾಟ ಇಟ್ಟುಕೊಂಡಿದ್ದಾರೆ. ಇನ್ನೊಂದು ಕಡೆ ಸಂಸಾರದ ಕಡೆ ಹೆಚ್ಚು ಗಮನ ಹರಿಸಿದ್ದಾರೆ.

  ಬಾಲ ನಟಿಯಾಗ ಅಮೂಲ್ಯ ಎಂಟ್ರಿ

  ಬಾಲ ನಟಿಯಾಗ ಅಮೂಲ್ಯ ಎಂಟ್ರಿ

  ನಟಿ ಅಮೂಲ್ಯ ಕನ್ನಡ ಚಿತ್ರರಂಗಕ್ಕೆ ಬಾಲ ನಟಿಯಾಗಿ ಪ್ರವೇಶ ಮಾಡಿದ್ದರು. ಬಾಲ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಬಳಿಕ ನಾಯಕಿಯಾಗಿ ಬಡ್ತಿ ಪಡೆದಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ 'ಚೆಲುವಿನ ಚಿತ್ತಾರ' ಸಿನಿಮಾದಲ್ಲಿ ನಾಯಕಿಯಾಗಿದ್ದರು. ಅತೀ ಚಿಕ್ಕ ವಯಸ್ಸಿನಲ್ಲೇ ಹೀರೋಯಿನ್ ಆಗಿ ನಟಿಸಿದ ಅಮೂಲ್ಯಗೆ ದೊಡ್ಡ ಅಭಿಮಾನಿ ಬಳಗವೇ ಇತ್ತು. ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ನಟಿಸಿರುವ ಅಮೂಲ್ಯ ವಿವಾಹದ ಬಳಿಕ ಚಿತ್ರರಂಗಕ್ಕೆ ಗುಡ್‌ ವೈ ಹೇಳಿದ್ದಾರೆ.

  English summary
  Kannada actress Amulya Jagadish baby shower photos goes viral. Amulya is now 7 months pregnant. After photos goes viral fans full viral.
  Friday, January 21, 2022, 9:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X