ಬಟ್ಟೆಯಿಂದ ವ್ಯಕ್ತಿಯನ್ನು ಅಳೆಯೋ ಸಮಾಜ ನಮ್ಮದು: ಅನಿತಾ ಭಟ್ ಆಕ್ರೋಶ
ಬೋಲ್ಡ್ ಆಂಡ್ ಬ್ಯೂಟಿಫುಲ್ ಲೇಡಿ ಎಂದು ಕರೆಸಿಕೊಳ್ಳುವ ನಟಿಯರ ಸಾಲಿಗೆ ಸೇರಿದವರು ಅನಿತಾ ಭಟ್. ಸಿನಿಮಾಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಲ್ಲಿ ತಮ್ಮ ಹಾಟ್ ಫೋಟೊಗಳನ್ನು ಹಂಚಿಕೊಳ್ಳುವುದರಲ್ಲಿ ಅವರು ಹಿಂಜರಿಯುವುದಿಲ್ಲ. ಹಾಗೆಯೇ ತಮ್ಮನ್ನು ಕೆಣಕುವವರಿಗೆ ಅವರದೇ ಧಾಟಿಯಲ್ಲಿ ಉತ್ತರಿಸುತ್ತಾರೆ.
Recommended Video
ತಮ್ಮ ನೆಚ್ಚಿನ ಪುಸ್ತಕಗಳನ್ನು ಓದುತ್ತಾ, ಮುದ್ದಿನ ನಾಯಿಯೊಂದಿಗೆ ಆಡುತ್ತಾ, ಮನೆಯವರ ಜತೆ ಕಾಲಕಳೆಯುತ್ತಿರುವ ಅನೇಕ ಫೋಟೊಗಳನ್ನು ಅವರು ಹಾಕಿದ್ದರು. ಆದರೆ ಇತ್ತೀಚೆಗೆ ಮಳೆ ಬರುತ್ತಿದ್ದಾಗ ಅದನ್ನು ನೋಡುತ್ತಿರುವ ದೃಶ್ಯದ ಫೋಟೋ ತೀವ್ರ ಚರ್ಚೆ ಹುಟ್ಟುಹಾಕಿದೆ. ಇಂತಹ ಉಡುಪು ಧರಿಸಿ ಫೋಟೊ ಹಾಕುತ್ತೀರಲ್ಲ? ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಶ್ಲೀಲ ಕಾಮೆಂಟ್‌ಗಳೂ ಬಂದಿವೆ. ಇವುಗಳಿಗೆ ಅನಿತಾ ಭಟ್ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಮೋಡ ಕರಗಿ ಮಳೆಯಾಗುವ ಹಾಗಿದೆ
ಬಾಲ್ಕನಿಯಲ್ಲಿ ನಿಂತು ಮಳೆಯ ಸೊಬಗನ್ನು ಆನಂದಿಸಿರುವ ಫೋಟೊವನ್ನು 'ಮಳೆ' ಎಂಬ ಕ್ಯಾಪ್ಷನ್ ಕೊಟ್ಟು ಅನಿತಾ ಭಟ್ ಹಂಚಿಕೊಂಡಿದ್ದರು. ಆದರೆ ಅವರು ಧರಿಸಿದ್ದ ಬಟ್ಟೆ ಬಗ್ಗೆ ಅನೇಕ ಕಾಮೆಂಟ್‌ಗಳು ಬಂದಿವೆ. 'ನಿಮ್ಮ ಹಾಟ್ ಲುಕ್‌ಗೆ ಮೋಡ ಕರಗಿ ಮಳೆಯಾಗುವ ಹಾಗಿದೆ ಎಂದರೆ, ಕೆಲವರು ಮಿತಿ ಇರಲಿ ನಿಮ್ಮ ಮೈಮಾಟ ದರ್ಶನಕ್ಕೆ ಎಂದಿದ್ದಾರೆ.

ಎಲ್ಲ ಕಾಮೆಂಟ್ಸ್ ಮುಗಿಯಿತಾ?
ಕೆಲವರು ಇನ್ನೂ ಮಿತಿ ಮೀರಿ ಅಸಭ್ಯ ಪದಗಳನ್ನು ಬಳಸಿದ್ದಾರೆ. ಕೊನೆಗೆ ಬೇಸೆತ್ತ ಅನಿತಾ ಭಟ್, 'ಎಲ್ಲ ಕಾಮೆಂಟ್‌ಗಳೂ ಮುಗಿಯಿತಾ? ಇಲ್ಲ ಇನ್ನು ಚರ್ಚೆ ಮುಂದುವರಿಸ್ತೀರಾ... ಮಳೆ ಬಗ್ಗೆ?' ಎಂದು ಕುಹಕದಿಂದ ಪ್ರಶ್ನಿಸಿದ್ದಾರೆ.

ಬಟ್ಟೆಯಿಂದ ಅಳೆಯುವ ಸಮಾಜ ನಮ್ಮದು
ಮರುದಿನ ಮತ್ತೆರಡು ಫೋಟೊಗಳನ್ನು ಹಾಕಿರುವ ಅನಿತಾ ಭಟ್, ತಮ್ಮ ಕಾಲಿನ ಅಂದ ಪ್ರದರ್ಶಿಸಿದ್ದಾರೆ. 'ನಾನು ಭಯದಿಂದ ಬದುಕುವಂತಾಗಿದ್ದರೆ ಇಷ್ಟೊತ್ತಿಗೆ ಈ ಭೂಮಿಯಿಂದಲೇ ಹೋಗಿಬಿಡ್ತಿದ್ದೆ. ಬಟ್ಟೆಯಿಂದ ವ್ಯಕ್ತಿಯನ್ನು ಅಳೆಯುವ ಸಮಾಜ ನಮ್ಮದು' ಎಂದು ಹೇಳಿದ್ದರು.

ಅಳೆಯದೆ ಇದ್ದಿದ್ದರೆ ಹೇಗೆ ಇರ್ತಿದ್ರೋ?
ಅದಕ್ಕೆ ಬಂದಿದ್ದ ಪ್ರತಿಕ್ರಿಯೆಯೊಂದು ಹೀಗಿತ್ತು. 'ನಮ್ ಸಮಾಜ ಬಟ್ಟೆಯಿಂದ ಅಳೆದೇ ಹಿಂಗಾಗಿದ್ದೀರ ನೀವು. ಇನ್ನು ಅಳೆಯದೇ ಟ್ರೋಲ್ ಮಾಡದೆ ಇದ್ದಿದ್ದರೆ ಇನ್ನು ಹೆಂಗೆ ಇರ್ತಿದ್ರೋ ನೀವು ದೇವರೇ ಬಲ್ಲ. ಈ ನಿಮ್ಮ ಟ್ವೀಟಲ್ಲಿ ಅದೆಂಥಾ ನೀತಿಪಾಠ ಇದೆಯೋ ಸಮಾಜಕ್ಕೆ ನಾ ಕಾಣೆ'.

ನೀವೇನು ಸಾಧನೆ ಮಾಡಿದ್ದೀರಾ ಹೇಳಿ
'ನೀವು ನೀತಿ ಪಾಠ ಮಾಡಿ. ಏನೇನು ಸಾಧನೆ ಮಾಡಿದ್ದೀರಾ ಅಂತ ಹೇಳಿ. ನಾವೆಲ್ಲ ತಿಳ್ಕೊಂಡು ಉದ್ಧಾರ ಆಗೋಣ ಹೆಸರಿಗೆ ತಕ್ಕ ಹಾಗೆ ಅಲ್ಲ ಅಲ್ವಾ? ಎಂದು ವ್ಯಂಗ್ಯವಾಗಿ ಅನಿತಾ ಭಟ್ ಹೇಳಿದ್ದಾರೆ.


Click it and Unblock the Notifications











